ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಪೋಷಕರೇ ಗಮನಿಸಿ ‘ಒಂದು ಮಗು ಕೂಡಾ ತಪ್ಪಬಾರದು’ : ನಾಳೆ (ಡಿ.21) ಪಲ್ಸ್ ಪೋಲಿಯೋ ದಿನ

ಪಲ್ಸ್ ಪೋಲಿಯೋ : Tulu Times | ಪಲ್ಸ್ ಪೋಲಿಯೋ ಹನಿಗಳು ಮಕ್ಕಳಿಗೆ ಯಾವುದೇ ಅಪಾಯವಿಲ್ಲದಂತೆ ರಕ್ಷಣೆ ನೀಡುತ್ತವೆ. ಮಗು ಈಗಾಗಲೇ ನಿಯಮಿತ ಲಸಿಕೆ ಪಡೆದಿದ್ದರೂ ಸಹ, ಪಲ್ಸ್ ಪೋಲಿಯೋ ದಿನಗಳಲ್ಲಿ ಹನಿಗಳನ್ನು ಹಾಕುವುದು ಅತ್ಯಂತ ಅಗತ್ಯ. ಇದರಿಂದ ಮಗುವಿನ ರೋಗನಿರೋಧಕ ಶಕ್ತಿ ಮತ್ತಷ್ಟು ಬಲವಾಗುತ್ತದೆ.

ಪಲ್ಸ್ ಪೋಲಿಯೋ ಎಂಬುದು ಭಾರತ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಪೋಲಿಯೋ ಎಂಬ ಅಪಾಯಕಾರಿ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಹಾಗೂ ಪೋಲಿಯೋ ಮುಖ್ಯವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೆಚ್ಚು ಬಾಧಿಸುವ ರೋಗವಾಗಿದ್ದು, ಇದು ಶಾಶ್ವತ ಅಂಗವಿಕಲತೆಗೆ ಕಾರಣವಾಗಬಹುದು ಈ ಕಾರಣದಿಂದ ಕಡ್ಡಾಯವಾಗಿ ಪ್ರತೀ ಮಗುವಿಗೂ ಪೋಲಿಯೋ ಹನಿಗಳನ್ನು ನೀಡಲಾಗುತ್ತದೆ.

ಒಂದು ಮಗು ಕೂಡ ತಪ್ಪಬಾರದು ;

ಈ ಲಸಿಕೆಯಲ್ಲಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿಗಳನ್ನು ನೀಡುವುದು ಮುಖ್ಯ ಉದ್ದೇಶವಾಗಿದೆ ಹಾಗೂ ದೇಶದಿಂದ ಪೋಲಿಯೋ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದರ ಜೊತೆಗೆ, ಪ್ರತಿಯೊಬ್ಬ ಮಗುವಿಗೂ ರಕ್ಷಣೆ ಒದಗಿಸುವುದು ಮುಖ್ಯವಾಗಿದೆ. ಸಾಮಾನ್ಯವಾಗಿ ಸರ್ಕಾರ ಘೋಷಿಸಿರುವ ಪಲ್ಸ್ ಪೋಲಿಯೋ ದಿನ ಡಿಸೆಂಬರ್ 21 ರಂದು ಎಲ್ಲಾ ಬೂತ್‌ಗಳಲ್ಲಿ, ಆಸ್ಪತ್ರೆಗಳಲ್ಲಿ ತದನಂತರ ಹಲವೆಡೆ ಮನೆಮನೆಗೆ ತೆರಳಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿಗಳನ್ನು ನೀಡಲಾಗುತ್ತದೆ. ಈ ಸಲುವಾಗಿ, ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಯಾಗಲು ಪೋಷಕರು, ಆರೋಗ್ಯ ಕಾರ್ಯಕರ್ತರು, ಸ್ವಯಂಸೇವಕರು ಮತ್ತು ಸಮಾಜದ ಸಹಕಾರ ಬಹಳ ಮುಖ್ಯ. “ಒಂದು ಮಗು ಕೂಡ ತಪ್ಪಬಾರದು” ಎಂಬ ಸಂದೇಶದೊಂದಿಗೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಪಲ್ಸ್ ಪೋಲಿಯೋ ಕಾರ್ಯಕ್ರಮವು ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿಸಲು ಪ್ರಮುಖ ಪಾತ್ರ ವಹಿಸಿದೆ. ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಕಾಪಾಡುವ ಈ ಮಹತ್ವದ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ನಾಗರಿಕನ ಸಹಕಾರ ಅಗತ್ಯ. ಅಲ್ಲದೇ, ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವುದು ಪೋಷಕರ ಕರ್ತವ್ಯ ಮತ್ತು ಸಾಮಾಜಿಕ ಹೊಣೆಗಾರಿಕೆಯಾಗಿದೆ.

Parents, take note, ‘Not a single child should be left behind’: Tomorrow (Dec. 21) is Pulse Polio Day – ತುಳು ಟೈಮ್ಸ್

ಇದನ್ನೂ ಓದಿ :ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ: ಶೋಭಾ ಕರಂದ್ಲಾಜೆ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=ZnMAz2_LgUHSxqn9

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page