ಉಡುಪಿ: Tulu Times | ಖಾಸಗಿ ಬಸ್ ಬೈಕಿಗೆ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ಹಂದಾಡಿ ಗ್ರಾಮದ ಅಂಬಿಕಾ ಪಾರಂ ಬಳಿ ಡಿ.19 ಶುಕ್ರವಾರದಂದು ನಡೆದಿದೆ. ಕೊನೆಯುಸಿರೆಳೆದ ಯುವಕನನ್ನು ಪವನ್ ಎಂದು ಗುರುತಿಸಲಾಗಿದೆ.
ಅಪಘಾತ ಸಂಭವಿಸಿದ್ದು ಹೇಗೆ..?
ಬೈಕ್ ಸವಾರ ಪವನ್ ತನ್ನ ಬೈಕಿನಲ್ಲಿ ಬಾರ್ಕೂರು ಕಡೆಯಿಂದ ಬ್ರಹ್ಮಾವರ ಕಡೆ ರಸ್ತೆಯಲ್ಲಿ ಬಂದು, ಬಲಗಡೆ ಇಂಡಿಕೇಟರ್ ಹಾಕಿ ಅಂಬಿಕಾ ಫಾರಂ ಬಳಿಯ ಅಮ್ಮ ಶಾಮಿಯಾನ್ ಅಂಗಡಿ ಕಡೆಗೆ ತಿರುಗಿಸುತ್ತಿದ್ದರು. ಆಗ ಅದೇ ರಸ್ತೆಯಲ್ಲಿ ಬರುತ್ತಿದ್ದಂತಹ ಬಸ್ , ಹಿಂದಿನಿಂದ ಬಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ನೆಲಕ್ಕೆ ಬಿದ್ದಿದ್ದಾರೆ, ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವವಾಗಿದೆ. ಬೈಕ್ ಸವಾರ ಪವನ್, ಬಸ್ಸಿಗೆ ಬಡಿದು ರಸ್ತೆಗೆ ಬಿದ್ದು ಉರುಳಿಕೊಂಡು ರಸ್ತೆ ಬದಿಯಲ್ಲಿದ್ದ ಹೊಂಡಕ್ಕೆ ಬಿದ್ದಿದ್ದಾರೆ. ಬೈಕ್ ಅನ್ನು ಬಸ್ 50 ಅಡಿ ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗಿದೆ. ಪವನ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲಯಾಳಂನ ಅಗ್ರಗಣ್ಯ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಶ್ರೀನಿವಾಸನ್ ನಿಧನ
ಪ್ರತ್ಯೇಕ ಪ್ರಕರಣದಲ್ಲಿ, ಮಲಯಾಳಂ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಶ್ರೀನಿವಾಸನ್(69 ವರ್ಷ) ಶನಿವಾರ ನಿಧನರಾಗಿದ್ದಾರೆ. ನಟ, ನಿರ್ದೇಶಕ, ಕಥೆಗಾರ ಹಾಗೂ ಗೀತರಚನೆಗಾರ ಎಂಬ ಹಲವಾರು ಆಯಾಮಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅವರು ಮಲೆಯಾಳಂ ಸಿನಿರಂಗದ ಅಗ್ರಗಣ್ಯ ಕಲಾವಿದರಲ್ಲೊಬ್ಬರು.
ಶ್ರೀನಿವಾಸನ್ ಅವರು ಕೇರಳದಲ್ಲಿ ಜನಿಸಿ ಬೆಳೆದವರು. ಆರಂಭದಲ್ಲಿ ಬರವಣಿಗೆಯ ಮೇಲಿನ ಆಸಕ್ತಿ ಹೊಂದಿದ್ದ ಅವರು, ಚಿತ್ರಕಥೆ ಮತ್ತು ಸಂಭಾಷಣೆಗಳ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ಬರವಣಿಗೆಯಲ್ಲಿನ ಸಾಮಾಜಿಕ ವ್ಯಂಗ್ಯ ಹಾಗೂ ಸಾಮಾನ್ಯ ಮನುಷ್ಯನ ಬದುಕಿನ ನೋವು-ನಲಿವುಗಳು ಜನಮನ ಸೆಳೆದಿರುವಂತದ್ದು ಎಂಬುದಕ್ಕೆ ಸಂದೇಹವೇ ಇಲ್ಲ.
ಶ್ರೀನಿವಾಸನ್ ಅವರು ಮಲೆಯಾಳಂ ಚಿತ್ರರಂಗಕ್ಕೆ ಹಲವಾರು ಪ್ರತಿಭಾವಂತರನ್ನು ಪರಿಚಯಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶೇಷವಾಗಿ ನಟ ದಿಲೀಪ್ ಅವರ ಸಿನಿಜೀವನಕ್ಕೆ ದಾರಿ ತೋರಿಸಿದ ವ್ಯಕ್ತಿಯಾಗಿ ಅವರು ಗುರುತಿಸಲ್ಪಟ್ಟಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದವರಾಗಿದ್ದಾರೆ. ಇವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಉದಯಂಪೀರೂರಿನ ತನ್ನ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
Bus collides with bike: Biker dies on the spot- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











