ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

ಮಂಗಳೂರು: ವಿದೇಶದಲ್ಲಿ ಒಳ್ಳೆಯ ಸಂಬಳ ಇರುವ ಜಾಬ್ ಕೊಡಿಸುವುದಾಗಿ ವಂಚನೆ..ದೂರು ದಾಖಲು

ಮಂಗಳೂರು: Tulu Times | ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಮೂವರು ಯುವಕರ  ವಿರುದ್ಧ ಮಂಗಳೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಸಂತ್ರಸ್ತ ಯುವಕರು ಬಜೆ ಮತ್ತು ಕದ್ರಿ ಠಾಣೆಗೆ ಮೂವರು ಯುವಕರ ವಿರುದ್ಧ ದೂರು ನೀಡಿದ್ದಾರೆ. ಗಂಜಿಮಠ ಮಣೇಲ್ ನಿವಾಸಿ ರಾಕೇಶ್ ರೈ ಭೂಷಣ್ ಕುಲಾಲ್ ಯೆಯ್ಯಾಡಿ ಮತ್ತು ಆಂಟನಿ ಪ್ರೀತಮ್ ಗರೋಡಿ ಎಂಬವರು ಹಣ ಪಡೆದು 30ಕ್ಕೂ ಹೆಚ್ಚು ಯುವಕರಿಗೆ   ವಂಚಿಸಿ, ಮೋಸ ಮಾಡಿದ್ದಾರೆ ಎಂದು ಸಂತ್ರಸ್ತ ಮಂಜುನಾಥ್ ನಾಯ್ಕ, ಉಮೇಶ್ ಬಿ.ಸಿ.ರೋಡು, ಗಗನ್ ಯೆಯ್ಯಾಡಿ ದೂರು ನೀಡಿದ್ದಾರೆ.

ಸಂತ್ರಸ್ತ ಯುವಕ ಹೇಳೋದೇನು..?

ಈ ಮೂವರು ಯುವಕರು ಡಿ.4ರಂದು ಅರ್ಮೇನಿಯಾದ ಕಷ್ಟದಿಂದ ಪಾರಾಗಿ ಊರಿಗೆ ಬಂದಿದ್ದಾರೆ. ಎಡಪದವು ನಿವಾಸಿ ಮಂಜುನಾಥ್ ನಾಯ್ಕ ಎಂಬ ಯುವಕ ರಾಕೇಶ್ ರೈಗೆ ಮೊದಲೇ ಪರಿಚಯ ಇತ್ತು. ಆರು ತಿಂಗಳ ಹಿಂದೆ ರಾಕೇಶ್ ಪರಿಚಯದಲ್ಲಿ ಗಲ್ಫ್ ನಲ್ಲಿ ಉದ್ಯೋಗ ಇದೆಯೆಂದು ಹೇಳಿದ್ದು ಅಮೆರಿಕ ಕಂಪನಿಯಲ್ಲಿ ಕೆಲಸ ತೆಗೆಸಿಕೊಡುತ್ತೇನೆ, ವೀಸಾ ಎಲ್ಲ ಮಾಡಿಕೊಡುತ್ತೇನೆಂದು ನಂಬಿಸಿದ್ದ. ಇಂಡಿಯಾದ ಒಂದೂವರೆ ಲಕ್ಷ ಆಗುತ್ತದೆ ಎಂದು ಹೇಳಿದ್ದ. ಹೀಗಾಗಿ ತಾಯಿ ಮತ್ತು ಸಂಬಂಧಿಕರ ಚಿನ್ನ ಅಡವಿಟ್ಟು 2.40 ಲಕ್ಷ ಕೊಟ್ಟಿದ್ದು ವೀಸಾವನ್ನೂ ಕಳಿಸಿದ್ದ. ಟೂರಿಸ್ಟ್ ವೀಸಾ ಕಳಿಸಿದ ಬಗ್ಗೆ, ಕೇಳಿದಾಗ ಅದು ಈಗ ಟೆಂಪರರಿ, ಇಲ್ಲಿ ಬಂದ ನಂತರ ಉದ್ಯೋಗ ವೀಸಾ ಮಾಡಿಕೊಡುತ್ತೇವೆ, ಈಗ ಬನ್ನಿ ಎಂದು ಕರೆದಿದ್ದು, ಅಕ್ಟೋಬರ್ 8ರಂದು ಮಂಜುನಾಥ್ ದುಬೈ ಮೂಲಕ ಅರ್ಮೇನಿಯಾ ದೇಶಕ್ಕೆ ಹೋಗಿದ್ದ. ಅಲ್ಲಿ ರಾಕೇಶ್, ಭೂಷಣ್ ಮತ್ತು ಆಂಟನಿ ಪ್ರೀತಮ್ ಅವರು ಕರೆದೊಯ್ಯಲು ಬಂದಿದ್ದು, ರೂಮಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದರು.  ಆದರೆ ವಾರ ಕಳೆದರೂ ಕೆಲಸ ಮಾಡಿಕೊಡಲಿಲ್ಲ.

ಅಲ್ಲಿನ ನಿವಾಸಿಗಳಿಗೂ ಸ್ಥಳೀಯ ಭಾಷೆ ಬಿಟ್ಟರೆ ಇಂಗ್ಲಿಷ್ ಇನ್ನಿತರ ಭಾಷೆ ಬರುತ್ತಿರಲಿಲ್ಲ. ಅಲ್ಲಿ 25ಕ್ಕೂ ಹೆಚ್ಚು ಯುವಕರು ಇದೇ ರೀತಿ ಕಷ್ಟದಲ್ಲಿದ್ದಾರೆ. ಎಲ್ಲರೂ 2ರಿಂದ 3 ಲಕ್ಷ, ಕೆಲವರು ನಾಲ್ಕು ಲಕ್ಷ ಕೊಟ್ಟು ಉದ್ಯೋಗಕ್ಕಾಗಿ ಬಂದಿದ್ದಾರೆ. ಸಾಲ ಮಾಡಿ ಬಂದವರು ಮನೆಯವರಲ್ಲಿ ಹೇಳುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ನಾವು ಮೂರು ಜನ ವಿಶ್ವ ಹಿಂದು ಪರಿಷತ್ತಿನವರಿಗೆ ಹೇಳಿ, ಮನೆಯವರಿಂದಲೇ ಮತ್ತೆ ಚಿನ್ನ ಅಡವಿಟ್ಟು ಹಣ ಹಾಕಿಸಿ ಟಿಕೆಟ್ ಮಾಡಲು ಹೇಳಿ ಬಂದಿದ್ದೇವೆ ಎಂದು ಮಂಜುನಾಥ್ ನಾಯ್ಕ ಹೇಳಿದ್ದಾರೆ. ಅಲ್ಲಿ ನಮಗೆ ವೇರ್ ಹೌಸ್ ಇನ್ ಚಾರ್ಜ್ ಹುದ್ದೆಯೆಂದು ಹೇಳಿದ್ದರು, ಒಳ್ಳೆ ವೇತನ ಇರುವುದಾಗಿ ನಗತಿಸಿದ್ದರು. ರಾಕೇಶ್, ಭೂಷಣ್ ಮತ್ತು ಆಂಟಿನಿ ಪ್ರೀತಮ್ ಮೂವರೂ ನಮ್ಮನ್ನು ಫೋನ್ ಕರೆ ಮಾಡಿ ನಂಬಿಸಿದ್ದಾರೆ. ಅವರಿಗೂ ಬೇರೆ ಕೆಲಸ ಇಲ್ಲದೆ ನಮ್ಮಿಂದ ಪಡೆದ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತ ಜಾಲಿ ಮಾಡುತ್ತಿದ್ದಾರೆ ಎಂದು ಮಂಜುನಾಥ್ ಆಕ್ರೋಶ ಹೊರ ಹಾಕಿದ್ದಾರೆ.

Mangaluru: Complaint filed against fraudsters who promise to offer a well-paid job abroad- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 140

You cannot copy content of this page