ಕರ್ನಾಟಕ: Tulu Times | ರಾಜ್ಯದಲ್ಲಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಒಂದೇ ದಿನ ಶಾಲಾ ಶಿಕ್ಷಕಿ ಸೇರಿದಂತೆ ಮೂವರು ಬಲಿಯಾಗಿರುವ ಶಾಕಿಂಗ್ ಸುದ್ದಿ ಎದುರಾಗಿದೆ.
ಇದನ್ನೂ ಓದಿ: ಕ್ರಿಸ್ ಮಸ್ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಬಿಗ್ ಆಫರ್ !
ಮೃತಪಟ್ಟ ಮೂರು ಜನ ಯಾರು..?
ಹಾಸನ ಜಿಲ್ಲೆಯ ಅರಕಲಗೋಡು ತಾಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ (58) , ಹೊಳೆನರಸೀಪುರ ತಾಲೂಕಿನ ಗುಲಗಂಜಿಹಳ್ಳಿ ಗ್ರಾಮದ ಪರಮೇಶ್ (35) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪರಮೇಶ್ ಹೊಳೆನರಸೀಪುರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ . ಸುಧಾಮಣಿ ಎಂಬ ಮಹಿಳೆ ದೊಡ್ಡಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ನಿಧನರಾಗಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ 20 ರ ದಿನ ಭವಿಷ್ಯದಲ್ಲಿ ನಿಮ್ಮ ದಿನ ಹೇಗಿದೆ ?
ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಬೆಳಗಾವಿ ಅಧಿವೇಶನ ವರದಿಗೆ ತೆರಳಿ, ಅವರು ಕೆಲಸ ಮುಗಿಸಿ ನಂತರ ಮೆಜೆಸ್ಟಿಕ್ ಗೆ ಬಂದು ಬಿಎಂಟಿಸಿ ಬಸ್ ಹತ್ತಿದ್ದರು. ಆದರೆ ಬಸ್ ನಲ್ಲೇ ಅವರಿಗೆ ಹೃದಯಾಘಾತ ಸಂಭವಿಸಿದೆ. ಬಸ್ ನಲ್ಲೇ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ರೊಪ್ಪ ಗ್ರಾಮದ ನಿವಾಸಿಯಾಗಿದ್ದ ದೊಡ್ಡಬೊಮ್ಮಯ್ಯ ಸಂಜೆವಾಣಿ, ದೂರದರ್ಶನ, ಆಕಾಶವಾಣಿಯಲ್ಲಿ ವರದಿಗಾರರಗಾಗಿ ಸೇವೆ ಸಲ್ಲಿಸಿದ್ದರು. ದೊಡ್ಡಬೊಮ್ಮಯ್ಯ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಅತಿಯಾದ ವ್ಯಾಮೋಹ ಒಳ್ಳೆಯದಲ್ಲ : ನಿಮ್ಮ ಆಸಕ್ತಿ ಸಾಧನೆಯ ಮೇಲಿರಲಿ
ಕರ್ನಾಟಕದಲ್ಲಿ ಹೃದಯಾಘಾತ ಸಂಖ್ಯೆ ಹೆಚ್ಚಳ!
ಕರ್ನಾಟಕ ಮತ್ತು ಭಾರತದಾದ್ಯಂತ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ದೈಹಿಕ ಶ್ರಮವಿಲ್ಲದ ಜೀವನ, ಅತಿಯಾದ ಸಂಸ್ಕರಿಸಿದ ಆಹಾರ ಸೇವನೆ ಮತ್ತು ಕುಳಿತು ಕೆಲಸ ಮಾಡುವ ಪದ್ಧತಿ. ಕೆಲಸದ ಒತ್ತಡ, ಮಾನಸಿಕ ಆತಂಕ ಮತ್ತು ನಿದ್ರೆಯ ಕೊರತೆ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತಿವೆ.ಹಿಂದೆ 50-60 ವರ್ಷದವರಲ್ಲಿ ಕಂಡುಬರುತ್ತಿದ್ದ ಹೃದಯಾಘಾತ ಈಗ 20 ರಿಂದ 40 ವರ್ಷದ ಯುವಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತಿವೆ. ಧೂಮಪಾನ ಮತ್ತು ಮದ್ಯಪಾನ ರಕ್ತನಾಳಗಳಲ್ಲಿ ಅಡೆತಡೆ ಉಂಟುಮಾಡುತ್ತವೆ.
Three people, including a teacher, die of heart attacks in one day- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











