Tamilnadu: ತಮಿಳುನಾಡು ಸರ್ಕಾರ ಆಗಾಗ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಬರುತ್ತಿದೆ. ದ್ರಾವಿಡ ಅಸ್ಮಿತೆಯ ಕೂಗು ಹಿಂದಿನಿಂದಲೂ ಕೇಳಿ ಬರುತ್ತಲೇ ಇರುತ್ತವೆ. ಈಗ ಅಲ್ಲಿನ ಸರ್ಕಾರ ಮಹತ್ವದ ಕ್ರಮ ಜರುಗಿಸಲು ಮುಂದಾಗಿದೆ. ಹಿಂದಿ ಸಿನಿಮಾ, ಹಿಂದಿ ಬೋರ್ಡ್ ಹಾಗೂ ಹಿಂದಿ ಹಾಡುಗಳನ್ನು ಬ್ಯಾನ್ ಮಾಡಲು ನಿರ್ಧರಿಸಿದ್ದಾಗಿ ವರದಿಯಾಗಿದೆ.
ಈ ಬಿಲ್ ಅನ್ನು ಅಧಿವೇಶನದಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಲು ಸಿಎಂ ಸ್ಟಾಲಿನ್ ಸರ್ಕಾರ ಮುಂದಾಗಿದೆ. ಒಂದು ವೇಳೆ ಅಧಿವೇಶದಲ್ಲಿ ಈ ಬಿಲ್‌ಗೆ ಅನುಮೋದನೆ ಸಿಕ್ಕಿದರೆ ರಾಜ್ಯಾದ್ಯಂತ ಹಿಂದಿ ಬ್ಯಾನ್ ಆಗುವ ಸಾಧ್ಯತೆ ದಟ್ಟವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಅವರ ಈ ನಿರ್ಧಾರಕ್ಕೆ ಪರ-ವಿರೋಧ ಚರ್ಚೆ ಆಗುತ್ತಿದೆ.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ DMK ಸರ್ಕಾರ ಈ ಬಿಲ್ಅನ್ನು ತರಲು ತಯಾರಿ ನಡೆಸಿದೆ. ಸಾರ್ವಜನಿಕ ಸ್ಥಳ ಹಾಗೂ ಮನರಂಜನಾ ಕ್ಷೇತ್ರದಲ್ಲಿ ಹಿಂದಿ ಬಳಕೆ ಆಗದಂತೆ ತಡೆಹಿಡಿಯಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಸ್ಟಾಲಿನ್ ಮನೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
‘ಭಾಷೆ ಉಳಿದರೆ ಮಾತ್ರ, ಜನಾಂಗ ಉಳಿಯುತ್ತದೆ’ ಎಂದು ಎಮ್.ಕೆ ಸ್ಟಾಲಿನ್ ಹೇಳುತ್ತಲೇ ಬರುತ್ತಿದ್ದಾರೆ. ‘ಡಿಎಂಕೆ ಹಿಂದಿಯನ್ನು ಒಂದು ಭಾಷೆಯಾಗಿ ವಿರೋಧಿಸುವುದಿಲ್ಲ ಆದರೆ ತಮಿಳುನಾಡಿನಲ್ಲಿ ಅದರ ಹೇರಿಕೆಯನ್ನು ಬಲವಾಗಿ ವಿರೋಧಿಸುತ್ತದೆ’ ಎಂದು ಹೇಳಿದ್ದರು. ಶೈಕ್ಷಣಿಕ ನೀತಿ ಮೂಲಕ ಹಿಂದಿ ಹಾಗೂ ಸಂಸ್ಕೃತವನ್ನು ಪ್ರಚಾರ ಮಾಡುವ ಕೆಲಸವನ್ನು ಭಾರತೀಯ ಜನತಾ ಪಕ್ಷ ಮಾಡುತ್ತಿದೆ ಎಂಬುವುದು ಸ್ಟಾಲಿನ್ ಆರೋಪ. ಈ ಎಲ್ಲಾ ಚರ್ಚೆಗಳ ಮಧ್ಯೆ ಹಿಂದಿ ನಿಷೇಧ ಅಧಿವೇಶನದ ಕದ ತಟ್ಟಿದೆ.
2026ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ತಮಿಳುನಾಡಿನಲ್ಲಿ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಈಗಾಗಲೇ ಕಸರತ್ತು ಪ್ರಾರಂಭವಾಗಿದೆ. ನಟ ದಳಪತಿ ವಿಜಯ್ ಕೂಡ ತಮ್ಮದೇ ಪಕ್ಷ (ತಮಿಳಗ ವೆಟ್ರಿ ಕಳಗಂ) ಸ್ಥಾಪಿಸಿ ಚುನಾಚಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಡಿಎಂಕೆಗೆ ಪ್ರಬಲ ಸ್ಪರ್ಧಿ ಆಗುವ ಸೂಚನೆ ಇದೆ. ಈ ಕಾರಣದಿಂದ ಡಿಎಂಕೆ ದ್ರಾವಿಡ ಹಾಗೂ ಭಾಷಾ ವಿಚಾರ ಮುಂದಿಟ್ಟುಕೊಂಡು ಮತ ಬ್ಯಾಂಕ್ನ ಗಟ್ಟಿಮಾಡಿಕೊಳ್ಳುವ ತಂತ್ರದಂತೆಯೂ ಕಾಣುತ್ತಿದೆ.
ಇದನ್ನೂ ಓದಿ: Karnataka ಸರ್ಕಾರದ ಅನುದಾನ ಠುಸ್ ಪಟಾಕಿ.ಕೈ ಕೊಡ್ತಿದೆಯಾ ಸರ್ಕಾರ?
ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4











