ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಕಸದಿಂದ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿದೆ : ನಟಿ ಐಂದ್ರಿತಾ ರೇ

ಬೆಂಗಳೂರು‌: Tulu Times | ಬೆಂಗಳೂರಲ್ಲಿ ಕಸ‌ ನಿರ್ವಹಣೆ ಬಗ್ಗೆ ನಟಿ ಐಂದ್ರಿತಾ ರೇ ಬೇಸರ ವ್ಯಕ್ತಪಡಿಸಿರುತ್ತಾರೆ. ಬೆಂಗಳೂರಿನಲ್ಲಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದರ ಜೊತೆಗೆ, ಇದೀಗ ಕಸ ಸುಡುವ ಬಗ್ಗೆ ವಾಯುಮಾಲಿನ್ಯ ಮಾಡುತ್ತಿರುವ ಬಗ್ಗೆಯೂ ಆರೋಪ ಕೇಳಿಬರುತ್ತಿದೆ. ಇಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದೀಗ ಬೆಂಗಳೂರಿನ ವಿವಿಧ ಭಾಗದಲ್ಲಿ ಕಸ ಸುಡುವುದು ಹೆಚ್ಚಾಗಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಗ್ರೇಟರ್ ಬೆಂಗಳೂರು ಆಡಳಿತದ ಕಾರ್ಯವೈಖರಿಗೆ ಇದೀಗ ನಟಿ ಐಂದ್ರಿತಾ ರೇ ಕೂಡಾ ಕಸ ಹೊತ್ತಿ ಉರಿದು ಅದರ ದಟ್ಟ ಹೊಗೆ ಪಸರಿಸುತ್ತಿರುವ ವೀಡೀಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಛೀಮಾರಿ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹೆಚ್ಚಾಗುತ್ತಿದೆ. ಜನ ವಸತಿ ಪ್ರದೇಶದಲ್ಲಿ ಕಸ ಸುಡಲಾಗುತ್ತಿದೆ. ಕಳೆದ ಮೂರು ದಿನಗಳಿಂದಲೂ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಉಸಿರಾಡುವುದಕ್ಕೂ ಸಮಸ್ಯೆ ಆಗಿದೆ, ಪ್ಲಾಸ್ಟಿಕ್ ಕಸ ಸುಟ್ಟಿರುವ ವಾಸನೆ ಬರ್ತಿದೆ ಹೋಗಿ ನೋಡಿದ್ರೆ ದೊಡ್ಡ ಕಸದ ರಾಶಿಯಿಂದ ಹೊಗೆ ಅಟ್ಟಹಾಸ ಮೆರೆಯುತ್ತಿತ್ತು ಎಂದು ಅವರು ಹೇಳಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಅವರು ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಸುಡುತ್ತಿರುವುದರಿಂದ ವಾಯು ಗುಣಮಟ್ಟದ ಮೇಲೆ ಪ್ರಭಾವ ಬೀರಲಿದೆ. ಈಗಾಗಲೇ ಈ ವರ್ಷ ಬೆಂಗಳೂರಿನಲ್ಲಿ ವಾಯುಗುಣಮಟ್ಟ ಕುಸಿತ ಕಂಡಿದೆ. ಈ ರೀತಿ ಇರುವಾಗ ಕಸ ಸುಡುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಕಸವನ್ನು ವಿಂಗಡಣೆ ಮಾಡಿ‌ಕೊಟ್ಟರೂ ಈ ರೀತಿ ಕಾನೂನನ್ನು ದುರ್ಬಳಕೆ ಮಾಡುತ್ತಿರುವುದು ಯಾವ ಉದ್ದೇಶದಿಂದ ಎಂಬುವುದು ತಿಳಿಯೋದಿಲ್ಲ ಅಂತ ಕೆಲ ಜನರು ಹೇಳಿಕೆ ನೀಡಿದ್ದಾರೆ.

Garbage has caused health problems: Actress Aindrita Ray – ತುಳು ಟೈಮ್ಸ್

ಇದನ್ನೂ ಓದಿ :ಕಲರ್ಸ್ ಕನ್ನಡದಲ್ಲಿ ಬರಲಿದೆ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ಸ್ : ಡಿ.21 ಕ್ಕೆ ಆಡಿಷನ್

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=2uWsULpUSalxRjy9

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page