ಕಲರ್ಸ್ ಕನ್ನಡ : Tulu Times | ಕಲರ್ಸ್ ಕನ್ನಡವು ಗಿಚ್ಚಿಗಿಲಿಗಿಲಿ ಶೋವನ್ನು ಮುಖ್ಯವಾಗಿ ಹಾಸ್ಯದ ಮೂಲಕ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ರೂಪಿಸಲಾಯಿತು. ದೈನಂದಿನ ಜೀವನದ ಸಣ್ಣಸಣ್ಣ ಘಟನೆಗಳು, ಸಾಮಾಜಿಕ ವಿಚಾರಗಳು ಮತ್ತು ಮಾನವ ಸ್ವಭಾವವನ್ನು ಹಾಸ್ಯಮಯವಾಗಿ ಪ್ರದರ್ಶಿಸುವುದು ಈ ಶೋದ ಮುಖ್ಯ ಆಶಯವಾಗಿದೆ.
ಅತ್ಯುತ್ತಮ ತರಬೇತಿಯನ್ನೂ ನೀಡಲಾಗುತ್ತದೆ ;
ಹಾಸ್ಯದ ಜೊತೆಗೆ ಈ ಶೋ ಕೆಲವೊಮ್ಮೆ ಸಮಾಜಕ್ಕೆ ಸಂದೇಶ ನೀಡುವ ಪ್ರಯತ್ನವನ್ನೂ ಮಾಡುತ್ತದೆ. ಕುಟುಂಬ ಸಂಬಂಧಗಳು, ಸಾಮಾಜಿಕ ಆಚರಣೆಗಳು, ಮಾನವ ದೌರ್ಬಲ್ಯಗಳು ಇತ್ಯಾದಿಗಳನ್ನು ಲಘು ಹಾಸ್ಯದ ಮೂಲಕ ತೋರಿಸಿ, ಪ್ರೇಕ್ಷಕರಿಗೆ ಯೋಚನೆ ಮಾಡುವಂತೆ ಮಾಡುತ್ತದೆ. ʻಕಲರ್ಸ್ ಕನ್ನಡʼ ವಾಹಿನಿಯ ʻಗಿಚ್ಚಿ ಗಿಲಿಗಿಲಿʼ ಜೂನಿಯರ್ಸ್ʼ ರಿಯಾಲಿಟಿ ಷೋಗಾಗಿ ಡಿಸೆಂಬರ್ 21ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಅಕ್ಷಯ ಸ್ಟುಡಿಯೋ, ನಾಗರಬಾವಿ ಆವರಣದಲ್ಲಿ ಆಡಿಷನ್ ನಡೆಯಲಿದೆ. 5ರಿಂದ 12 ವರ್ಷ ವಯೋಮಿತಿಯ ಮಕ್ಕಳು ಈ ಆಡಿಷನ್ನಲ್ಲಿ ಭಾಗವಹಿಸಬಹುದು. ಆಯ್ಕೆಯಾದ ಮಕ್ಕಳು ʼಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ರಿಯಾಲಿಟಿ ಶೋನಲ್ಲಿ ಜನಪ್ರಿಯ ಟಿವಿ ಕಲಾವಿದರೊಂದಿಗೆ ಪಾಲ್ಗೊಳ್ಳಬಹುದು. ಅವರಿಗೆ ಅತ್ಯುತ್ತಮ ತರಬೇತಿಯನ್ನೂ ನೀಡಲಾಗುತ್ತದೆ. ಮಕ್ಕಳ ಸಂಭಾಷಣಾ ಸಾಮರ್ಥ್ಯ, ತಕ್ಷಣದ ಪ್ರತಿಕ್ರಿಯೆ, ಕಥೆ ಹೇಳುವ ಶೈಲಿ ಇತ್ಯಾದಿ ಅಂಶಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಲಾಗುತ್ತದೆ. ಆಸಕ್ತ ಮಕ್ಕಳು ನಿಗದಿತ ದಿನಾಂಕದಂದು ಪೋಷಕರೊಂದಿಗೆ ಭಾವಚಿತ್ರ ಮತ್ತು ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿ ಸಹಿತ ಆಡಿಷನ್ಗೆ ಹಾಜರಾಗಬೇಕು ಎಂದು ʻಕಲರ್ಸ್ ಕನ್ನಡʼ ತಿಳಿಸಿದೆ.
ಈ ಬಾರಿ ʻಗಿಚ್ಚಿ ಗಿಲಿಗಿಲಿʼ ಶೋ ಸಂಪೂರ್ಣವಾಗಿ ಮಕ್ಕಳಿಗೆ ಸೀಮಿತವಾಗಿದೆ. ʻಗಿಚ್ಚಿ ಗಿಲಿಗಿಲಿʼ ಜೂನಿಯರ್ಸ್ ಟೈಟಲ್ನಲ್ಲಿ ಬರುತ್ತಿರುವ ಈ ಶೋ, 5ರಿಂದ 12 ವರ್ಷದೊಳಗಿನ ಮಕ್ಕಳ ಪ್ರತಿಭೆಯನ್ನ ಪ್ರದರ್ಶಿಸಲಿದೆ. ಮಕ್ಕಳು ತಮ್ಮ ಹಾಸ್ಯ, ನಟನೆ, ಇಮಿಟೇಷನ್ ಹಾಗೂ ಕಾಮಿಡಿ ಸ್ಕಿಟ್ಗಳ ಮೂಲಕ ವೀಕ್ಷಕರನ್ನ ಎಂಟರ್ಟೈನ್ ಮಾಡಲಿದ್ದಾರೆ. ಇದು ಮಕ್ಕಳಿಗೆ ದೊಡ್ಡ ವೇದಿಕೆಯಾಗಿದ್ದು, ಈ ಹಿಂದೆ ಡ್ರಾಮಾ ಜೂನಿಯರ್ಸ್ ಅಥವಾ ಇತರ ಮಕ್ಕಳ ಶೋಗಳಂತೆ, ಇದೂ ಕೂಡ ಮಕ್ಕಳ ಕಾರ್ಯಕ್ರಮ ನೀಡುವ ಶೋ ಆಗಿದೆ.
Colors Kannada to air ‘Gicchi Giligili’ Juniors: Auditions on Dec. 21 – ತುಳು ಟೈಮ್ಸ್
ಇದನ್ನೂ ಓದಿ :ಸಿಕ್ಕ ಸಿಕ್ಕಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದ್ರೆ ಜೈಲೂಟ ಗ್ಯಾರಂಟಿ !
==========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=2uWsULpUSalxRjy9











