ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಪುತ್ತೂರುರಾಜಕೀಯ

ಪುತ್ತೂರು ಶಾಸಕ ಅಶೋಕ್ ರೈ ಬ್ಯಾನ‌ರ್ ಗೆ ಹಾನಿ

ಪುತ್ತೂರು: Tulu Times | ಪುತ್ತೂರಿನ ಶಾಸಕ ಅಶೋಕ್ ರೈ ಬ್ಯಾನ‌ರ್ ಗೆ ಕಿಡಿಗೇಡಿಗಳು ಹಾನಿ ಮಾಡಿದ್ವಿದಾರೆ. ಈ ಕುರಿತಾಗಿ ಕಿಡಿಗೇಡಿಗಳ ವಿರುದ್ಧ  ದೂರು ದಾಖಲಾಗಿದೆ.  ಇಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನ ಕೊಟ್ಟ ಶಾಸಕರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ ಬ್ಯಾ‌ನರ್  ಹರಿದು ಹಾಕಿ ಕೃತ್ಯ ಎಸಗಿದ್ದಾರೆ.

ಇದನ್ನೂ ಓದಿ: ಸಿಕ್ಕ ಸಿಕ್ಕಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದ್ರೆ ಜೈಲೂಟ ಗ್ಯಾರಂಟಿ !

ಈ ಕುರಿತು ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಕೈಂದಾಡಿಯವರು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪುರುಷರಕಟ್ಟೆ-ಶಿಬರ – ನಡುವಾಲ್ ರಸ್ತೆ ಅಭಿವೃದ್ಧಿಯ ಮತ್ತು ಶಾಶ್ವತ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಟ್ಟ ಶಾಸಕರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ ಬ್ಯಾನರನ್ನು ಹರಿದು ಹಾಕಿದ್ದಾರೆ. ರಸ್ತೆ ಕಾಮಗಾರಿಗೆ  ಅಶೋಕ್ ರೈ 5 ಲಕ್ಷ ಅನುದಾನ ಒದಗಿಸಿದ್ದರು. ಈ ಸಂಬಂಧ ಸ್ಥಳೀಯರು ಶಾಸಕರಿಗೆ ಅಭಿನಂದನೆ ಸಲ್ಲಿಸಿ ಬ್ಯಾನರ್ ಅಳವಡಿಸಿದ್ದರು. ಆರೋಪಿಗಳನ್ನು ಬಂಧಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ: ‘ಚೋಲೆ ಬಟೂರೆ’ ಮಾಡುವ ವಿಧಾನ ಹಾಗೂ ಇದರ ವಿಶೇಷತೆ ಬಗ್ಗೆ ತಿಳಿಯಿರಿ

ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯೋರ್ವರ ಶವ ಪತ್ತೆ

ಪ್ರತ್ಯೇಕ ಪ್ರಕರಣದಲ್ಲಿ, ಬೆಳ್ತಂಗಡಿ ಸಮೀಪದ ಲಾಯಿಲಾದಲ್ಲಿ ಅಪರಿಚಿತ ವ್ಯಕ್ತಿಯೋರ್ವರ ಶವ ಪತ್ತೆಯಾಗಿದೆ. ಇಲ್ಲಿನ ಸೇತುವೆಯ ಬಳಿ ಅನಾರೋಗ್ಯದ ಕಾರಣದಿಂದನೋ ಅಥವಾ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಇನ್ನೂ ತಿಳಿದುಬಂದಿಲ್ಲ. ಅಪರಿಚಿತ ಶವ ನೋಡಿದ ಜನ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ‘ಬಿಸಿಯೂಟ’ ಯೋಜನೆ ಶಿಕ್ಷಣದ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ ?

ಅಪರಿಚಿತ ಮೃತದೇಹ ಕಂಡು ಜನ ತಕ್ಷಣವೇ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ, ಸ್ಥಳಕ್ಕೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಅನಂದ್.ಎಮ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ನಡೆಸಲು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹದ ಮಹಜರಿನ ಬಳಿಕ ಶವಪರೀಕ್ಷೆಗಾಗಿ ಸಾಯಿರಾಮ್ ಆಂಬುಲೆನ್ಸ್ ಮೂಲಕ ಶವವನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಚಾಲಕ ಪವನ್ ಬಂಗೇರ, ಕರುಣಾಕರ ರೆಂಕೆದಗುತ್ತು ಪೊಲೀಸರಿಗೆ ಸಹಕರಿಸಿದರು.

Puttur MLA Ashok Rai’s banner damaged- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 173

You cannot copy content of this page