ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸಿಕ್ಕ ಸಿಕ್ಕಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದ್ರೆ ಜೈಲೂಟ ಗ್ಯಾರಂಟಿ !

ಬೆಂಗಳೂರು : Tulu Times | ಕಂಡ ಕಂಡಲ್ಲಿ ಪಾರಿವಾಳಗಳಿಗೆ ಆಹಾರವನ್ನು ಹಾಕಿದ್ರೆ ಜೈಲು ಶಿಕ್ಷೆ ಖಚಿತ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಬಸ್ ಸ್ಟ್ಯಾಂಡ್ ಗಳಲ್ಲಿ ಅಥವಾ ಪೇಟೆಗಳಲ್ಲಿ ನಾವು ಪಾರಿವಾಳಗಳನ್ನು ಕಾಣುತ್ತೇವೆ ಹಾಗೂ ಈ ಪಕ್ಷಿಗಳು ಹಸಿವಿನಿಂದ ಆಹಾರದ ಹುಡುಕಾಟದಲ್ಲಿ ಇರುತ್ತಾರೆಂದು ಜನರು ಅವರಿಗೆ ತಮ್ಮ ಕೈಯಲ್ಲಿದ್ದ ಆಹಾರವನ್ನು ಹಾಕುತ್ತಾರೆ. ಆದರೆ ಇನ್ನು ಮುಂದೆ ಈ ರೀತಿ ಮಾಡುವ ಹಾಗೆ ಇಲ್ಲ ಎಂದು ಹೇಳಲಾಗಿದೆ. ಪಕ್ಷಿ ಪ್ರೇಮಿಗಳು ಇನ್ನು ಮುಂದೆ ಪಾರಿವಾಳಗಳಿಗೆ ಆಹಾರವನ್ನು ಹಾಕುವಾಗ ಎಚ್ಚರದಿಂದ ಇರಬೇಕು ಎಂದು ಆರೋಗ್ಯ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ.

ಬೆಂಗಳೂರಿನಲ್ಲಿಯೇ ಸಾಕಷ್ಟು ಪಾರಿವಾಳಗಳಿರುವ ಪ್ರದೇಶಗಳಲ್ಲಿ ಆಹಾರವನ್ನು ಹಾಕುವುದರ ಬಗ್ಗೆ ಕಟ್ಟುನಿಟ್ಟಾಗಿ ಕ್ರಮವನ್ನ ಕೈಗೊಳ್ಳಲಾಗುವುದು ಎಂದು ಇಲಾಖೆಯು ತಿಳಿಸಿದೆ. ನಿಗದಿತ ಸ್ಥಳವನ್ನು ಬಿಟ್ಟು, ಕಂಡ ಕಂಡಲ್ಲಿ ಪಾರಿವಾಳಗಳಿಗೆ ಆಹಾರವನ್ನು ಹಾಕುವಂತಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ಬರೆದಿದೆ. ಗ್ರೇಟರ್ ಬೆಂಗಳೂರಿನಲ್ಲಿ ಈ ಬಗ್ಗೆ ಮಾರ್ಗಸೂಚಿಯನ್ನು ತರಲು ಪತ್ರದಲ್ಲಿ ಬರೆಯಲಾಗಿದೆ. ಪಾರಿವಾಳದ ಹಿಕ್ಕೆಗಳು, ಗರಿಗಳು ಹಾಗೂ ಅವರು ಹಾರುವಾಗ ಸಿಡಿಯುವಂತಹ ಧೂಳು ಶ್ವಾಸಕೋಶ ಸಂಬಂಧಿ ಕಾಯಿಲೆ ತರುವ ಕಾರಣ, ಈ ಬೆಳವಣಿಗೆ ಮಕ್ಕಳು, ವೃದ್ಧರು ಹಾಗೂ ಉಸಿರಾಟ ತೊಂದರೆ ಇರುವವರಿಗೆ ಆರೋಗ್ಯ ಸಮಸ್ಯೆ ತರುತ್ತದೆ ಎಂಬ ವರದಿಯನ್ನು ಆರೋಗ್ಯ ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ಇದರಿಂದ ಸಾರ್ವಜನಿಕರಿಗೆ ಅಪಾಯ ಹೆಚ್ಚುವ ಸಾಧ್ಯತೆಯಿದ್ದು ಆದಷ್ಟು ಪಾರಿವಾಳಗಳಿಂದ ದೂರವಿರುವುದು ಉತ್ತಮ ಎಂದು ಹೇಳಲಾಗಿದೆ.

ಸೆಕ್ಷನ್ 270, 271, 272 ರ ಅಡಿಯಲ್ಲಿ ಕೇಸ್ ದಾಖಲಿಸಲು ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಇದರಂತೆ ಆರು ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಪಾರಿವಾಳಗಳಿಂದ ಹರಡುವ ಈ ರೋಗವು ಬಹಳ ಗಂಭೀರವಾಗಿರುವ ಕಾರಣ ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯು ತಿಳಿಸಿದೆ. ಈ ಹಿಂದೆ ಮುಂಬೈಯಲ್ಲಿ ಕೂಡ ಪಾರಿವಾಳಗಳಿಗೆ ಆಹಾರ ಹಾಕುವ ಬಗ್ಗೆ ನಿಯಮ ಉಲ್ಲಂಘಿಸಿದವರಿಂದ ದಂಡವನ್ನ ವಸೂಲಿ ಮಾಡಲಾಗಿತ್ತು. ಹಾಗಾಗಿ, ಬೆಂಗಳೂರಿನಲ್ಲಿ ಬಿಬಿಎಂಪಿ ನಿರ್ದೇಶಿಸಿದ ಸ್ಥಳಗಳಲ್ಲಿ ಮಾತ್ರ ಪಾರಿವಾಳಕ್ಕೆ ಆಹಾರ ನೀಡಲು ಸೂಚನೆ ನೀಡಲಾಗಿದೆ. ಸಾರ್ವಜನಿಕ ರಸ್ತೆಗಳು, ಪಾರ್ಕ್ ಗಳು, ದೇವಸ್ಥಾನಗಳು, ಅಪಾರ್ಟ್ಮೆಂಟ್ ಗಳು ಮುಂತಾದವು ಕಡೆ ನಿಷೇಧಿಸಲಾಗಿದೆ.

If you are caught feeding pigeons, you are guaranteed to go to jail! – ತುಳು ಟೈಮ್ಸ್

ಇದನ್ನೂ ಓದಿ :2026 ರ ಮೊದಲ ದಿನದ ಸಂಭ್ರಮಾಚರಣೆಗೆ ವಿಶೇಷ ಮಾರ್ಗಸೂಚಿ ಬಿಡುಗಡೆ

=====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=2uWsULpUSalxRjy9

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page