ಬ್ರೇಕಿಂಗ್ ನ್ಯೂಸ್
ಬೆಳ್ತಂಗಡಿ

Belthangady:ಉಪ್ಪಿನಂಗಡಿ-ಕುಪ್ಪೆಟ್ಟಿ ರಸ್ತೆ ರಿಪೇರಿ ಸದ್ಯಕ್ಕಿಲ್ಲ!?

Belthangady:ತಾಲೂಕು ಪುತ್ತೂರು ತಾಲೂಕಿನ ಮುಖ್ಯ ರಸ್ತೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಅನುಭವಿಸುತ್ತಿರುವ ನರಕಯಾತನೆ ಯಾರಿಗೂ ಬೇಡ..ಅದ್ರಲ್ಲೂ ಉಪ್ಪಿನಂಗಡಿ ಕುಪ್ಪೆಟ್ಟಿ ರಸ್ತೆ ಅವ್ಯವಸ್ಥೆಯ ಕಾರಣಕ್ಕೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದೆ.ಈ ರಸ್ತೆಯಲ್ಲಿ ಪ್ರಯಾಣಿಸಿ ಸೊಂಟ ನೋವು,ಗಂಟು ನೋವು ಬರಿಸಿಕೊಂಡವ್ರು ಎಷ್ಟೋ ಜನ ಇದ್ದಾರೆ.ವಾಹನಗಳು ಕೆಟ್ಟು ಜೇಬು ಖಾಲಿ ಮಾಡಿಕೊಂಡ ಮಾಲೀಕರು ಮತ್ತೆ ಈ ರಸ್ತೆಗಳತ್ತ ಬರ್ತಿಲ್ಲ.

ಹೀಗಿರುವಾಗ ಇನ್ನಾದ್ರೂ ಈ ರಸ್ತೆ ಕಾಮಗಾರಿ ಆರಂಭಗೊಂಡು ಸಂಚಾರಕ್ಕೆ ಅನೂಕೂಲ ಆಗ್ಬೋದು ಅಂತಾ ಅಂದ್ಕೊಂಡಿದ್ದೆ ಬಂತು.ಆದ್ರೆ ಈ ಬಾರಿ ಈ ರಸ್ತೆಯ ಕಾಮಗಾರಿ ಆರಂಭವಾಗೋದು ಡೌಟ್ ಎನ್ನುವ ಪರಿಸ್ಥಿತಿ ನಿರ್ಮಾಣವಾಗ್ತಿದೆ.ಇದ್ಕೆ ಕಾರಣ ಸರ್ಕಾರ ಗ್ರಾಮೀಣ ಪ್ರದೇಶಗಳಿಗೆ ಘೋಷಣೆ ಮಾಡಿರುವ ರಸ್ತೆ ನಿರ್ಮಾಣದ ಹಣವನ್ನು ಇನ್ನೂ ನೀಡಿಲ್ಲ.

ಎಡೆ ಬಿಡದೆ ಸುರಿದ ಮಳೆಗೆ ಬೆಳ್ತಂಗಡಿ ಪುತ್ತೂರು ತಾಲೂಕುಗಳಲ್ಲಿ ಸಾಕಷ್ಟು ತೊಂದರೆ ಉಂಟಾಗಿತ್ತು..ವಿಶೇಷವಾಗಿ ರಸ್ತೆಗಳಂತೂ ಕಂಪ್ಲೀಟ್ ಎದ್ದು ಬಂದಿತ್ತು..ಜನರು ಸ್ಥಳೀಯ ಶಾಸಕರಿಗೆ ರಸ್ತೆಯ ಪರಿಸ್ಥಿತಿಯ ಬಗ್ಗೆ ದೂರು ಕೊಟ್ಟಾಗ ಅನುದಾನ ಸಿಗ್ತಿಲ್ಲ ಎಂಬ ಉತ್ತರ ನೀಡ್ತಿದ್ರು.ಸರ್ಕಾರ ಕಳೆದ ನವಂಬರ್ ನಲ್ಲಿ ಗ್ರಾಮೀಣ ಪ್ರದೇಶದ ತೊಂದರೆಯನ್ನು ಮನಗಂಡು 189 ಕ್ಷೇತ್ರಗಳಿಗೆ 10 ಕೋಟಿ ಅನುದಾನ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು.

ಪ್ರಕೃತಿ ವಿಕೋಪ ಪರಿಹಾರ ಫಂಡ್ ನಿಂದ ರಸ್ತೆ ದುರಸ್ಥಿಗೆ ನೆರವು ಮತ್ತು, 189 ಶಾಸಕರ ಕ್ಷೇತ್ರಕ್ಕೆ 10 ಕೋಟಿಯಂತೆ ಅನುದಾನದನ ಆಶ್ವಾಸನೆ ಸಿಕ್ಕಿತ್ತು. ಇದೇ ಅನುದಾನದಲ್ಲಿ ರಸ್ತೆ ರಿಪೇರಿ,ಚರಂಡಿ ವ್ಯವಸ್ಥೆಯ ನಿರ್ಮಾಣಕ್ಕಾಗಿ ಹಣಕಾಸು ಇಲಾಖೆ 1890 ಕೋಟಿ ರೂ ಮಂಜೂರಾತಿಯ ಆದೇಶ ನೀಡಿತ್ತು.ಆದ್ರೆ ಸರ್ಕಾರ ಇದುವರೆಗೆ ತನ್ನ ಭರವಸೆಯನ್ನು ಈಡೇರಿಸಿಲ್ಲ.ಭರವಸೆ ಕೊಟ್ಟು ಒಂಬತ್ತು ತಿಂಗಳಾಗುತ್ತಾ ಬಂದರೂ ಇದುವರೆಗೆ ಪಂಚಾಯತ್ ರಾಜ್ ಇಲಾಖೆಗೆ ಹಣ ಬಂದಿಲ್ಲ.ಇದ್ರಿಂದಾಗಿ ಶಾಸಕರಿಗೆ ಕೊಟ್ಟ ಭರವಸೆಯನ್ನು ಸರ್ಕಾರ ಮುರಿಯುತ್ತಾ ಎನ್ನುವ ಸಂಶಯ ಶುರುವಾಗಿದೆ.
ಈಗಾಗ್ಲೇ ಈ ಬಗ್ಗೆ 189 ಕ್ಷೇತ್ರದ ಶಾಸಕರು ಮಾತಾಡುವುದಕ್ಕೆ ಶುರುಮಾಡಿದ್ದು ಸರ್ಕಾರದ ಅನುದಾನ  ರಿಲೀಸ್ ಆಗೋದ್ರ ಬಗ್ಗೆ ಸಂಶಯ ವ್ಯಕ್ತಪಡಿಸ್ತಿದ್ದಾರೆ.

ಕಾಮಗಾರಿಯ ವಿಷಯಕ್ಕೆ ಬರೋದಾದ್ರೆ ಹಣಕಾಸಿನ ವ್ಯವಸ್ಥೆಯ ಬಗ್ಗೆ ಗೊಂದಲಗಳಿರೋದ್ರಿಂದ ಯಾವುದೇ ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸೋದಿಕ್ಕೆ ಬರ್ತಿಲ್ಲ.ಹೀಗಾಗಿ ರಸ್ತೆ ಕಾಮಗಾರಿ ಸದ್ಯಕ್ಕೆ ಆರಂಭವಾಗುವ ಯಾವುದೇ ಸೂಚನೆ ಸಿಗ್ತಿಲ್ಲ.
ಸರ್ಕಾರ ಅನುದಾನ ನೀಡುವ ಭರವಸೆ ಕೊಟ್ಟ 189 ಕ್ಷೇತ್ರಗಳ ಶಾಸಕರಲ್ಲಿ ಆಡಳಿತ ಪಕ್ಷದ ಶಾಸಕರ ಸಂಖ್ಯೆ ಹೆಚ್ಚಿದೆ.ಎಲ್ಲಾ ಪಕ್ಷದವರು ರಾಜಕೀಯ ಮರೆತು ಅನುದಾನಕ್ಕೆ ಮನವಿ ಕೊಟ್ಟ ಕಾರಣದಿಂದ ಕಳೆದ ನವಂಬರ್ ನಲ್ಲಿ 10 ಕೋಟಿ ಅನುದಾನದ ಭರವಸೆಯನ್ನು ಸರ್ಕಾರ ಕೊಟ್ಟಿತ್ತು.

ಅನುದಾನ ಬಂದಲ್ಲಿ ಕೆಟ್ಟುಹೋಗಿರುವ ರಸ್ತೆಗಳನ್ನು ಸರಿಪಡಿಸಿ ಜನರ ಟೀಕೆಗಳಿಂದ ಒಂದಷ್ಟೂ ತಪ್ಪಿಸಿಕೊಳ್ಳಬಹುದು ಎಂದು ಶಾಸಕರು ಅಂದ್ಕೊಂಡಿದ್ರು.ಆದ್ರೇ ಸರ್ಕಾರದಿಂದ ಈ ಅನುದಾನದ ರಿಲೀಸಾಗೋದ್ರ ಮಾಹಿತಿಯೇ ಸಿಗ್ತಿಲ್ಲ.
ಸ್ಥಳೀಯ ಶಾಸಕರು ಈ ಬಗ್ಗೆ ಇನ್ನೂ ಕಠಿಣವಾದ ಹೋರಾಟ ಮಾಡಿದರಷ್ಟೇ ಅನುದಾನ ಬಿಡುಗಡೆಯಾಗಿ ಉಪ್ಪಿನಂಗಡಿ ಕುಪ್ಪೆಟ್ಟಿ ಮತ್ತು ಇನ್ನಿತರ ಪ್ರದೇಶಗಳ ರಸ್ತೆ ಸರಿ ಹೋಗಬಹುದು.

ಇದನ್ನೂ ಓದಿ:Hijab Verdict: ತರಗತಿಯಲ್ಲಿ ಹಿಜಾಬ್‌ ಧರಿಸಲು ಅನುಮತಿ ನೀಡಿ – ಶಿಕ್ಷಣ ಸಚಿವ ಆದೇಶ
…………………………………………………………………………………………………………………………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page