ಭಕ್ತಕೋಡಿಯಲ್ಲಿ ಅನಧಿಕೃತ ಕಟ್ಟೆ ಎಂಬ ಕಾರಣವೊಡ್ಡಿ, ಭಗಾವಾದ್ವಜ ತೆರವುಗೊಳಿಸಿರುವ ಘಟನೆ ನಡೆದಿದ್ದು ಇದನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಖಂಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯ ರಾಜಕಾರಣಿಗಳ ಜೊತೆ ಸೇರಿಕೊಂಡು ರಾಜಕೀಯ ಉದ್ದೇಶದಿಂದ ಭಗವಾಧ್ವಜದ ಕಟ್ಟೆಯನ್ನು ತೆರೆವುಗೊಳಿಸಿದೆ.
ಅಧಿಕಾರಿಗಳು ಇದನ್ನು ಮಾಡಿದ್ದು ಸರಿಯಲ್ಲ ಎಂದಿದ್ದಾರೆ.ಪಂಚಾಯತ್ ಅಧ್ಯಕ್ಷರ ಮಾತಿಗೆ ಅಧಿಕಾರಿಗಳು ಬೆಲೆ ಕೊಟ್ಟಿಲ್ಲ.ಈ ಕಾರಣಕ್ಕಾಗಿ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ,ತುಂಬಾ ಹಿಂದಿನಿಂದ ಹಲವಾರು ವರ್ಷಗಳಿಂದ ಇಲ್ಲಿ ಭಗವಾದ್ವಜ ಕಟ್ಟೆ ಇತ್ತು.ಇದನ್ನು ಈಗ ತೆರವುಗೊಳಿಸಿರುವುದು ಹಿಂದೂ ಧಾರ್ಮಿಕ ನಂಬಿಕೆಗಳಿಗೆ ತೀವ್ರ ಘಾಸಿಯಾಗಿದೆ ಎಂದು ಪುತ್ತಿಲ ತಿಳಿಸಿದ್ದಾರೆ.
ಕಾಂಗ್ರೆಸ್ ಹಿಂದೂಗಳ ಧಮನ ನೀತಿಯನ್ನು ಅನುಸರಿಸುತ್ತಾ ಬರುತ್ತಿದೆ.ರಾಜಕೀಯ ಉಪಯೋಗಕ್ಕೆ ಹಿಂದೂ ಸಮಾಜವನ್ನು ಕೆಣಕುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಾ ಬರುತ್ತಿದೆ.ಇಂತಹ ದ್ವೇಷ ರಾಜಕಾರಣ ಅತೀಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಕಠಿಣವಾದ ಉತ್ತರ ನೀಡಲಿದೆ ಎಂದು ಪುತ್ತಿಲ ಎಚ್ಚರಿಸಿದ್ದಾರೆ.
Destruction of the Bhagavadhwaja flag in Bhaktakodi: Arun Puttila condemnsಇದನ್ನೂ ಓದಿ : ನಿಮ್ಮ ವಾಹನಗಳು ದೇವರ ಸೂಚನೆಯನ್ನು ನಿಮಗೆ ತಲುಪಿಸುತ್ತವೆ.!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/@tulutimess











