ಸೂಚನೆ : Tulu Times | ಇನ್ನೇನು ಡಿಸೆಂಬರ್ ತಿಂಗಳು ಮುಗೀತಾ ಬಂತು, 2026 ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಆದ್ರೆ, ಡಿಸೆಂಬರ್ 31ರಂದು ನಡೆಯಲಿರುವ ಹೊಸ ವರ್ಷದ ಕಾರ್ಯಕ್ರಮಗಳಿಗಾಗಿ ಎಲ್ಲಾ ಪಬ್, ಹೋಟೆಲ್, ಕ್ಲಬ್ ಮತ್ತು ರೆಸ್ಟೋರೆಂಟ್‌ಗಳಿಗೆ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿರುವುದು ವರದಿಯಾಗಿದೆ. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸುವುದು ಮುಖ್ಯ ಉದ್ದೇಶವಾಗಿದೆ. ಆಯೋಜಕರು ಎಲ್ಲಾ ಕಡ್ಡಾಯ ಅನುಮತಿಗಳನ್ನು ಪಡೆಯಬೇಕು ಮತ್ತು ಕಾರ್ಯಕ್ರಮದ ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ನೆಲಮಾಳಿಗೆ, ಪಾರ್ಕಿಂಗ್ ಪ್ರದೇಶಗಳು ಮತ್ತು ಟೆರೇಸ್‌ಗಳಲ್ಲಿ ಕಾರ್ಯಕ್ರಮ ನಡೆಸಲು ನಿರ್ಬಂಧವಿದ್ದು, ಸಾರ್ವಜನಿಕರಿಗೆ ಗೋಚರಿಸುವ ಲೈವ್ ಸ್ಕ್ರೀನ್‌ಗಳು ಮತ್ತು ಧ್ವನಿವರ್ಧಕ ವ್ಯವಸ್ಥೆಗಳನ್ನು ಆವರಣದೊಳಗೆ ಮಾತ್ರ ಅನುಮತಿಸಲಾಗಿದೆ.
ಹೊಸ ವರ್ಷದಂದು ಕಾರ್ಯಕ್ರಮ ಆಯೋಜಿಸಲು ಪೂರ್ವಾನುಮತಿ ಕಡ್ಡಾಯವಾಗಿದೆ.
ಕಾರ್ಯಕ್ರಮವು ರಾತ್ರಿ 12:30 ಒಳಗಾಗಿ ಪೂರ್ಣಗೊಳ್ಳಬೇಕು ;
2026 ರ ಮೊದಲ ದಿನಕ್ಕೆ ಇದೀಗ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಗೆ ಮಾರ್ಗಸೂಚಿಗಳು ಬಿಡುಗಡೆಯಾಗಿದ್ದು ಇದರಲ್ಲಿ ; ಹೊಸ ವರ್ಷದಂದು ಕಾರ್ಯಕ್ರಮ ಆಯೋಜಿಸಲು ಪೂರ್ವಾನುಮತಿ ಕಡ್ಡಾಯ. ಹಾಗಾಗಿ, ಡಿ.23ರ ಸಂಜೆ 5 ಗಂಟೆಯ ಒಳಗೆ ಅನುಮತಿ ಪಡೆಯಲು ಸೂಚನೆ ಹೇಳಲಾಗಿದ್ದು, ಹೊಸ ವರ್ಷದ ಕಾರ್ಯಕ್ರಮವು ರಾತ್ರಿ 12:30 ಒಳಗಾಗಿ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಸಮುದ್ರ ಬದಿಗಳಲ್ಲಿ ಮದ್ಯಪಾನ ಸೇವಿಸುವುದು ನಿಷೇಧ ;
ಧ್ವನಿಮುದ್ರಣ ವ್ಯವಸ್ಥೆಗಳು, ಲೌಡ್ ಸ್ಪೀಕರ್ ಗೂ ಅನುಮತಿ ಬೇಕು. ಡಿಜೆ ಬಳಕೆ ಕಟ್ಟುನಿಟ್ಟಾಗಿ ನಿಷೇಧ, ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವುದನ್ನು ನಿಷೇಧ, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ, ಅಶ್ಲೀಲ ಪ್ರದರ್ಶನ ನಿಷೇಧ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕ್ರಮ, ಹೆಣ್ಣುಮಕ್ಕಳನ್ನು ಚುಡಾಯಿಸುವುದನ್ನು ತಡೆಹಿಡಿಯಲು ವಿಶೇಷ ಕಾರ್ಯಪಡೆ, ಸ್ಟಂಟ್ ಚಟುವಟಿಕೆಗಳು, ವೀಲಿಂಗ್, ಸಮುದ್ರ ಬದಿಗಳಲ್ಲಿ ಮದ್ಯಪಾನ ಸೇವಿಸುವುದು ನಿಷೇಧ ಇತ್ಯಾದಿ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೋಲಿಸರಿಗೆ ಸೂಚನೆ ನೀಡಲಾಗಿದೆ. Special guidelines released for the celebration of the first day of 2026 – ತುಳು ಟೈಮ್ಸ್
ಇದನ್ನೂ ಓದಿ :ಕೇಂದ್ರ ಕಾರಾಗ್ರಹದಲ್ಲಿಯೇ ನೂರಕ್ಕಿಂತಲೂ ಹೆಚ್ಚು ಮೊಬೈಲ್ ಫೋನ್ ಗಳು ಪತ್ತೆ
====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/MOqjEYxAJa8?si=2uWsULpUSalxRjy9











