ಬ್ರೇಕಿಂಗ್ ನ್ಯೂಸ್
ಕ್ರೀಡೆ

ನಿಮ್ಮ ವಾಹನಗಳು ದೇವರ ಸೂಚನೆಯನ್ನು ನಿಮಗೆ ತಲುಪಿಸುತ್ತವೆ.!

ಅರೇ ಇದೇನಿದೂ ವಾಹನ ಗಳು ಏನಾದರೂ ಸೂಚನೆಯನ್ನು ಕೊಡೋದಿಕ್ಕೆ ಸಾಧ್ಯಾನಾ ಟೈಟಲ್ ನೋಡಿ ನಿಮ್ಗೆ ಈ ರೀತಿ ಅನಿಸಿರಬಹುದು.ನಾವು ಓಡಾಡುವ ವಾಹನಗಳು ಸರಿ ಇದ್ರೆ ಅದನ್ನು ನಾವು ಚಲಾಯಿಸಬಹುದು.ಕೆಟ್ಟೋದ್ರೆ ಅಲ್ಲಾಡಲ್ಲ ಅಂತದ್ರಲ್ಲಿ ಅವುಗಳು ಯಾವ ಸೂಚನೆ ಕೊಡೋದಿಕ್ಕೆ ಸಾಧ್ಯ ಎಂಬ ಅನುಮಾನ ನಿಮ್ಮಲ್ಲಿ ಮೂಡಬಹುದು.ನಿಮ್ಮ ಸ್ವಂತ ವಾಹನಗಳು ಕೂಡ ನಿಮ್ಮ ಭವಿಷ್ಯದ ಸೂಚನೆಯನ್ನು ನೀಡುತ್ತವೆ.ಇದನ್ನು ನೀವು ನಂಬಲೇಬೇಕು.

ಜೀವನದ ಜಂಜಾಟದಲ್ಲಿ ನೀವೇನೋ ಹೊಸ ಯೋಜನೆ ಮಾಡುವುದಕ್ಕೆ ಮುಂದಾಗಿರುತ್ತೀರಿ.ಅದಕ್ಕಾಗಿ ಒಂದು ಯೋಜನೆಯನ್ನು ನಿಮ್ಮ ಅನುಭವ ಶ್ರಮದ ಆಧಾರದಲ್ಲಿ ರೂಪಿಸುತ್ತೀರಿ.ಅದನ್ನೂ ಜಾರಿಗೊಳಿಸುವುದಕ್ಕೆ ಒಂದಷ್ಟೂ ಹೂಡಿಕೆಯನ್ನು ಮಾಡಿ ಸಿದ್ದರಾಗಿರುತ್ತೀರಿ.ಇದೇ ಸಮಯದಲ್ಲಿ ಸಹಾಯದ ಕಾರಣಕ್ಕೆ ಬಂದ ಸ್ನೇಹಿತರನ್ನೂ ನಂಬಿ ನಿಮ್ಮ ಕನಸಿನ ಯೋಜನೆಯೊಂದನ್ನು ವಿವರಿಸುತ್ತೀರಿ.ನಂಬಿ ಜೀವನ ಹಾಳು ಮಾಡಿಕೊಂಡ ಘಟನೆಗಳನ್ನೆಲ್ಲಾ ಮರೆತು ಹೊಸತಕ್ಕೆ ಮುನ್ನುಡಿ ಬರೆಯುತ್ತೀರಿ.

ಯಾವುದೇ ವ್ಯವಹಾರ ನಿಂತಿರುವುದು ಯೋಜನೆಯಿಂದ,ಐಡಿಯಾ ಇದ್ದರಷ್ಟೇ ಕೆಲಸ ನಡಿಯೋದಿಕ್ಕೆ ಸಾಧ್ಯ.ಹೂಡಿಕೆದಾರರನ್ನು ಆಕರ್ಷಿಸುವ ಪ್ಲಾನ್ ಇದ್ದರಷ್ಟೇ ಬಂಡವಾಳ ಹಾಕುವವರು ಸಿಗುವುದಕ್ಕೆ ಸಾಧ್ಯ.ಉತ್ತಮ ಯೋಜನೆ ಬೆಂಬಲಿಸುವವರು ತುಂಬಾ ಜನ ಸಿಗುತ್ತಾರೆ.ಮನೆ ಕಟ್ಟುವುದಕ್ಕೆ ಜಾಗ ಎಷ್ಟು ಮುಖ್ಯವೋ ಒಂದು ವ್ಯವಹಾರಕ್ಕೆ ಯೋಜನೆಯೂ ಅಷ್ಟೇ ಮುಖ್ಯ.ಕೆಲಸಕ್ಕೆ ಬೆಲೆ ಕಟ್ಟಬಹುದು ಆದರೇ ಐಡಿಯಾಗಳಿಗೆ ಬೆಲೆ ಕಟ್ಟುವುದಕ್ಕೆ ಸಾಧ್ಯಾವೇ ಇಲ್ಲ.!

ಇಂತಹ ಕನಸಿನ ಯೋಜನೆಯನ್ನು ಕೆಲಸದ ವೇಗಕ್ಕಾಗಿ ಎಲ್ಲರಿಗೂ ಅನೂಕೂಲವಾಗಲಿ ಎಂಬ ಕಾರಣಕ್ಕಾಗಿ ವಿಶ್ವಾಸವಿಟ್ಟು ನಿಮ್ಮ ಆಪ್ತರ ಜೊತೆ ಹಂಚಿಕೊಳ್ಳುತ್ತೀರಿ.ಎಲ್ಲವೂ ಕೈಗೂಡುತ್ತದೆ.ಇನ್ನೇನೂ ಹೊಸ ಯೋಜನೆ. ಮರುದಿನ ಎದ್ದು ಬೈಕ್ ಸ್ಟಾರ್ಟ್ ಮಾಡಿ ಕೆಲಸದ ಕಾರಣಕ್ಕಾಗಿ ಸುತ್ತಾಡುವುದಕ್ಕೆ ಹೊರಡುತ್ತೀರಿ.ಇದ್ದಕ್ಕಿದ್ದಂತೆ ಬೈಕ್ ಕೆಟ್ಟು ನಿಲ್ಲುತ್ತದೆ.ಮುಂದೆ ಚಲಾಯಿಸುವುದಕ್ಕೆ ಸಾಧ್ಯಾವೇ ಇಲ್ಲ..ಬೈಕ್ ಜೊತೆಯಾದಂದಿನಿಂದ ಕೆಟ್ಟು ನಿಂತ ಉದಾಹರಣೆಯೇ ಇಲ್ಲ.ಆದರೆ ಯೋಜನೆ ಶುರುವಾದ ಮೊದಲ ದಿನಾನೇ ಬೈಕ್ ಕೆಟ್ಟು ನಿಂತಿದೆ.ಆದರೆ ನಾವೇನೂ ಬೇರೇನೂ ಯೋಚಿಸದೆ ಬೈಕ್ ಗೆ ಶಾಪ ಹಾಕುತ್ತಾ ಬೈಕ್ ನ ಮೆಕ್ಯಾನಿಕ್ ಗೆ ಒಪ್ಪಿಸಿ ಬರುತ್ತೇವೆ.

ಮರುದಿನ ಅದೇ ಕೆಲಸದ ಕಾರಣಕ್ಕೆ ನಮ್ಮದೇ ಕಾರಿನಲ್ಲಿ ಹೊರಟು ನಿಲ್ಲುತ್ತೇವೆ.ಆದರೆ ಕಾರು ಕೂಡ ವಿಚಿತ್ರ ಸೌಂಡ್ ಮಾಡಿ  ನಾನು ಮುಂದೆ ಹೋಗುವುದಿಲ್ಲ ಎಂದು ನಿಂತು ಬಿಡುತ್ತೆ.ಅದರಲ್ಲೂ ಮಧ್ಯರಾತ್ರಿಯಲ್ಲೂ ಒಮ್ಮೆ ಕಾರು ನಿಂತು ಬಿಡುತ್ತೆ.ಯಾವತ್ತೂ ಕೈಕೊಡದ ಕಾರು ಸಡನ್ನಾಗಿ ಕೈ ಕೊಟ್ಟಾಗ ಆಶ್ವರ್ಯ ಆಗುವುದು ಸಹಜ.ಒಂದು ಯೋಜನೆ ಶುರುವಾದಂದಿನಿಂದ ಪದೇ ಪದೇ ಹೀಗಾದರೆ ನಿಮಗೂ ಗಾಬರಿಯಾಗಬಹುದು.

ನಿಮ್ಮ ಅಪ್ತರಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ನೋಡಿ.ಅದ್ಯಾರೋ ನಿಮಗೆ ಒಳ್ಳೆಯದಾಗಬಾರದು ಎಂಬ ಕಾರಣಕ್ಕೆ ಮಾಟ ಮಂತ್ರ ಮಾಡಿರಬಹುದು ಏನಾದ್ರೂ ಪರಿಹಾರ ಮಾಡ್ಕೊಳ್ಳಿ ಅಂದಿರ್ತಾರೆ.ಆದ್ರೆ ಇನ್ನೊಂದು ರೀತಿಯಲ್ಲಿ ನಾವು ಯೋಚಿಸುವುದಿಲ್ಲ.ನೀವು ನಿಮ್ಮ ಕನಸ್ಸಿನ ಪ್ಲ್ಯಾನ್ ನ್ನು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಂಚಿದ್ದು ಸರಿಯಾ? ನಂಬಿಕೊಂಡವ್ರು ಮುಂದೆ ಕತ್ತು ಕುಯ್ಯುತ್ತಾರಾ? ಇದರ ಬಗ್ಗೆ ಯೋಚಿಸಿಯೇ ಇರುವುದಿಲ್ಲ.

ನಮ್ಮನ್ನು ಹೊತ್ತು ಸಾಗುವ ವಾಹನಗಳಿವೆಯಲ್ಲಾ ಅದು ಭಾವನೆಗಳಿಲ್ಲದ ಮನುಷ್ಯನಿಗಿಂತ ಶ್ರೇಷ್ಠವಾದುದು,ನಿಮಗೇನಾದರೂ ಕಷ್ಟಗಳಿದ್ದರೆ ಅವುಗಳು ಸೂಚನೆ ಕೊಡುತ್ತವೆ.ಅವುಗಳನ್ನು ನಂಬುವ ಬದಲು ಕಂಡೋರ ಮಾತು ನಂಬಿ ಕಕ್ಕಾಬಿಕ್ಕಿಯಾಗುವ ಘಟನೆಗಳು ಜೀವನದಲ್ಲಿ ನಡೆಯುತ್ತವೆ.

ವಾಹನಗಳು ನಿಮಗೇನಾದರೂ ಸೂಚನೆ ನೀಡಿದ್ದರೆ ಅದನ್ನು ಕಡೆಗಣಿಸಬೇಡಿ,ಯಾಕೆಂದರೆ ವಾಹನಗಳ ಮೂಲಕ ಸೂಚನೆ ನೀಡುತ್ತಿರುವುದು ನಿಮ್ಮನ್ನು ಕಾಯುವ ನಿಮ್ಮದೇ ಶಕ್ತಿಗಳು ಎಂಬುದರ ಅರಿವಿರಲಿ.

ಒಂದುವೇಳೆ ನೀವು ದೇವರು ಕೊಟ್ಟ ವಾಹನಗಳ ಸೂಚನೆಯನ್ನು ದಿಕ್ಕರಿಸಿ ಮುನ್ನಡೆದು ತೊಂದರೆಯಲ್ಲಿದ್ದರೆ.ಅದೇ ವಾಹನಗಳನ್ನು ಅಪ್ಪಿಕೊಂಡು ಕಣ್ಣೀರು ಹರಿಸಿ ಕ್ಷಮಿಸುವಂತೆ ಕೇಳಿಕೊಳ್ಳಿ.ಯಾಕೆಂದರೆ ಸೂಚನೆ ಕೊಟ್ಟ ಶಕ್ತಿ ತಪ್ಪಿನ ಪಶ್ವಾತ್ತಾಪವನ್ನು ನಿಮ್ಮಿಂದ ನಿರೀಕ್ಷೆ ಮಾಡುತ್ತಿದೆ.ನೀವು ನಿಮ್ಮ ವಾಹನಗಳ ಮುಂದೆ ನಿಮ್ಮ ಶಕ್ತಿಗಳಿಗೆ ಶರಣಾಗಿ ಯಾಕೆಂದರೆ ನಿಮ್ಮ ಕನಸಿನ ಯೋಜನೆ ಅಂದರೆ ನಿಮ್ಮ ಮಗು ಅದನ್ನು ಕಾಪಾಡುವ ಜವಬ್ದಾರಿಯನ್ನು ನಿಮಗೆ ಸೂಚನೆ ಕೊಟ್ಟ ದೇವರುಗಳೇ ಹೊರುತ್ತಾರೆ.ಅದಕ್ಕಾಗಿ ನಿಮಗೆ ದೇವರು ವಾಹನಗಳ ಮೂಲಕ ಕೊಟ್ಟ ಸೂಚನೆಯನ್ನು ಬರೀ ನಕರಾತ್ಮಕವಾಗಿ ಯೋಚಿಸದೆ ಸಕಾರಾತ್ಮಕವಾಗಿಯೂ ಯೋಚಿಸಿ ನೋಡಿ.ಜೀವನದ ಫಲಿತಾಂಶವೇ ಬದಲಾಗುವ ಸಾಧ್ಯತೆ ಇರುತ್ತದೆ.

Your vehicles will deliver God's message to you!

ಇದನ್ನೂ ಓದಿ :‘ಗೃಹಲಕ್ಷ್ಮೀ’ ತಪ್ಪು ಲೆಕ್ಕಾಚಾರದಿಂದ ಸದನದಲ್ಲಿ ಗದ್ದಲ : ತಪ್ಪು ಒಪ್ಪಿಕೊಂಡ ಲಕ್ಷ್ಮೀ ಹೆಬ್ಬಾಳ್‌ಕರ್
……………………………………………………………………………………………………………..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ : https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 5

You cannot copy content of this page