ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಗ್ಯದಲ್ಲಿ ಧಿಡೀರ್‌ ಏರುಪೇರು!

ಕರ್ನಾಟಕ: Tulu Times | ಸಿಎಂ ಸಿದ್ರಾಮಯ್ಯ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ.  ಬೆಳಗಾವಿ ಅಧಿವೇಶನ ಆಗುವ ಸಮಯದಲ್ಲಿ  ಮುಖ್ಯಮಂತ್ರಿಗಳ ಆರೋಗ್ಯದಲ್ಲಿ ತುಸು ಏರುಪೇರು ಉಂಟಾಗಿದೆ. ಹೀಗಾಗಿ,  ನಾಯಕರು ಭೇಟಿ  ಮಾಡಿ,  ಆರೋಗ್ಯ ವಿಚಾರಣೆ ನಡೆಸಿದ್ದಾರೆ. ಪ್ರವಾಸಿ ಮಂದಿರದಲ್ಲಿ ಸಿಎಂ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿ ನೂತನ ಕಾರ್ಯಾಧ್ಯಕ್ಷರಾಗಿ ನಿತಿನ್ ನಬೀನ್ ಜೀ ಆಯ್ಕೆ

ಕಳೆದ ರಾತ್ರಿ ಆಹಾರದಲ್ಲಿ ವ್ಯತ್ಯಾಸವಾಗಿದ್ದರಿಂದ ಮುಖ್ಯಮಂತ್ರಿಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆಗಿದೆ.  ನಾಳೆ ಸದನಕ್ಕೆ ಬರುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ,   ಹೊಟ್ಟೆನೋವಿನ ಕಾರಣ ಮಧ್ಯಾಹ್ನದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗದೆ ಮುಖ್ಯಮಂತ್ರಿಗಳು ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದರು ಎನ್ನಲಾಗಿದೆ. ಇನ್ನು ಶಾಸಕ ರಮೇಶ ಜಾರಕಿಹೊಳಿ ಒಬ್ಬರೇ  ಬಂದು ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿ, ಮಾತುಕೆತೆ ನಡೆಸಿ ತೆರಳಿದ್ದಾರೆ.

ಇದನ್ನೂ ಓದಿ: ಮಸ್ತ್ ಮಲೈಕಾಗೆ ಸಾನ್ವಿ ಸುದೀಪ್ ಧ್ವನಿ…ಮಗಳ ಧ್ವನಿಗೆ ಕಿಚ್ಚನ ಜರ್ಬದಸ್ತ್ ಕುಣಿತ

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶಾಸಕ ರಮೇಶ ಜಾರಕಿಹೊಳಿ, ನಾನು ಕೇವಲ  ಸಿಎಂ ಆರೋಗ್ಯ ವಿಚಾರಣೆಗೆ ಬಂದಿದ್ದೇನೆ . ಯಾವುದೇ ರಾಜಕೀಯ, ಅಭಿವೃದ್ಧಿಯ ಕುರಿತು ಇಲ್ಲಿ ಚರ್ಚೆ  ಆಗಿಲ್ಲ. ನಾವು ಏನು ಧೈರ್ಯ ಹೇಳುವುದು. ನಮಗೇ ಧೈರ್ಯ ಹೇಳುವ ಹಾಗೇ ಇದ್ದಾರೆ ಎಂದು ಜಾರಕಿಹೊಳಿ ಹಾಸ್ಯ ಮಾಡಿದ್ದಾರೆ. ಶಾಸಕ ಜಿ ಟಿ ದೇವೇಗೌಡ ಶಾಸಕ ಜಿ ಟಿ ದೇವೇಗೌಡ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕ್ಷೇತ್ರದೆ ಅಭಿವೃದ್ಧಿಯ ಕುರಿತು ಚರ್ಚೆ ನಡೆಸಿದ್ದಾರೆ. ನಂತರ ಮಾಧ್ಯಗಳ ಜೊತೆ ಮಾತನಾಡಿ, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಬಹಳ ದೊಡ್ಡದು. ಸಿದ್ದರಾಮಯ್ಯ ಅವರು ಸಹ ಅಲ್ಲಿಂದಲೇ ಸ್ಪರ್ಧಿಸಿ ಮಂತ್ರಿಯಾಗಿದ್ದರು. ಈ ಹಿನ್ನಲೆಕ್ಷೇತ್ರದ ಏತ್ತ ನೀರಾವರಿ ಬಗೆ ಅನುಮತಿ ನೀಡಲು ಮನವಿ ಮಾಡಿದ್ದೇನೆ ಎಂದರು. ಸಚಿವ ಬೈರತಿ ಸುರೇಶ ಅವರೂ ಸಹ ಮುಖ್ಯಮಂತ್ರಿಗಳನ್ನು ಭೇಟಿಯಾಗಿ  ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾತನಾಡಿ, ಸಿಎಂ ಚೆನ್ನಾಗಿದ್ದಾರೆ. ನಾಳೆ ಸದನದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

Chief Minister Siddaramaiah’s health is in a state of flux.- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page