ಬ್ರೇಕಿಂಗ್ ನ್ಯೂಸ್
ಕರ್ನಾಟಕ

Karnataka ಸರ್ಕಾರದ ಅನುದಾನ ಠುಸ್ ಪಟಾಕಿ.ಕೈ ಕೊಡ್ತಿದೆಯಾ ಸರ್ಕಾರ?

Karnataka:ಕಳೆದ ವರ್ಷ ಸುರಿದ ಮಳೆಗೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ತೊಂದರೆ ಉಂಟಾಗಿತ್ತು.ಅದರಲ್ಲೂ ವಿಶೇಷವಾಗಿ ರಸ್ತೆಗಳಂತೂ ಸಂಪೂರ್ಣವಾಗಿ ಕಿತ್ತು ಹೋಗಿತ್ತು.ಸ್ಥಳೀಯ ಶಾಸಕರಿಗೆ ರಸ್ತೆ ಹದಗೆಟ್ಟ ಬಗ್ಗೆ ಸಾರ್ವಜನಿಕರು ದೂರು ಕೊಟ್ಟಾಗ ಅನುದಾನ ಬರ್ತಿಲ್ಲ ಎಂಬ ಉತ್ತರ ಸಿಗ್ತಿತ್ತು.ಕಡೆಗೂ ಸರ್ಕಾರ ಕಳೆದ ನವಂಬರ್ ನಲ್ಲಿ ಗ್ರಾಮೀಣ ಪ್ರದೇಶದ ಅವ್ಯವಸ್ಥೆಯನ್ನು ಮನಗಂಡು 189 ವಿಧಾನಸಭಾ ಕ್ಷೇತ್ರಗಳಿಗೆ 10 ಕೋಟಿ ಅನುದಾನ ನೀಡುವುದಾಗಿ ಕೈ ಸರ್ಕಾರ ಭರವಸೆ ಕೊಟ್ಟಿತ್ತು.
ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ರಸ್ತೆ ದುರಸ್ಥಿಗೆ ನೆರವು ಮತ್ತು 189 ಶಾಸಕರ ಕ್ಷೇತ್ರಕ್ಕೆ 10 ಕೋಟಿಯಂತೆ ಅನುದಾನದನ ಭರವಸೆ ವ್ಯಕ್ತವಾಗಿತ್ತು.ಈ ಅನುದಾನದಲ್ಲಿ ರಸ್ತೆ ರಿಪೇರಿ,ಚರಂಡಿ ವ್ಯವಸ್ಥೆಯ ನಿರ್ಮಾಣಕ್ಕಾಗಿ ಹಣಕಾಸು ಇಲಾಖೆ 1890 ಕೋಟಿ ರೂ ಮಂಜೂರು ಆದೇಶವನ್ನು ನೀಡಿತ್ತು.

ಆದ್ರೆ ಇದುವರೆಗೆ ಸರ್ಕಾರ ತನ್ನ ಭರವಸೆಯನ್ನು ಪೂರ್ಣಗೊಳಿಸಿಲ್ಲ.ಭರವಸೆ ಕೊಟ್ಟು ಒಂಬತ್ತು ತಿಂಗಳಾಗುತ್ತಾ ಬಂದರೂ,ಇದುವರೆಗೆ ಪಂಚಾಯತ್ ರಾಜ್ ಇಲಾಖೆಗೆ ಹಣ ಬಂದಿಲ್ಲ.ಇದ್ರಿಂದಾಗಿ ಶಾಸಕರಿಗೆ ಕೊಟ್ಟ ಭರವಸೆಯನ್ನು ಸರ್ಕಾರ ಮುರಿಯುತ್ತಾ ಎನ್ನುವ ಸಂಶಯ ಶುರುವಾಗಿದೆ.ಈಗಾಗ್ಲೇ ಈ ಬಗ್ಗೆ 189 ಕ್ಷೇತ್ರದ ಶಾಸಕರು ಮಾತಾಡುವುದಕ್ಕೆ ಶುರುಮಾಡಿದ್ದು ಸರ್ಕಾರದ ಅನುದಾನ ಡೌಟ್ ಎನ್ನಲಾಗ್ತಿದೆ.

ಇನ್ನೂ ಕಾಮಗಾರಿಯ ವಿಷಯಕ್ಕೆ ಬರೋದಾದ್ರೆ ಹಣಕಾಸಿನ ವ್ಯವಸ್ಥೆಯ ಬಗ್ಗೆ ಗೊಂದಲಗಳಿರೋದ್ರಿಂದ ಯಾವುದೇ ಗುತ್ತಿಗೆದಾರರು ಕಾಮಗಾರಿಯನ್ನು ವಹಿಸಿಕೊಳ್ತಿಲ್ಲ.ಹೀಗಾಗಿ ರಸ್ತೆ ಕಾಮಗಾರಿ ಸದ್ಯಕ್ಕೆ ಆರಂಭವಾಗುವ ಯಾವುದೇ ಲಕ್ಷಣಗಳು ಕಾಣಿಸ್ತಿಲ್ಲ.
ಸರ್ಕಾರ ಅನುದಾನ ನೀಡುವ ಭರವಸೆ ಕೊಟ್ಟ 189 ಕ್ಷೇತ್ರಗಳ ಶಾಸಕರಲ್ಲಿ ಆಡಳಿತ ಪಕ್ಷದ ಶಾಸಕರ ಸಂಖ್ಯೆ ಹೆಚ್ಚಿದೆ.

ಎಲ್ಲಾ ಪಕ್ಷದವರು ರಾಜಕೀಯ ಮರೆತು ಅನುದಾನಕ್ಕೆ ಮನವಿ ಕೊಟ್ಟ ಕಾರಣದಿಂದ ಕಳೆದ ನವಂಬರ್ ನಲ್ಲಿ 10 ಕೋಟಿ ಅನುದಾನದ ಭರವಸೆಯನ್ನು ಸರ್ಕಾರ ಕೊಟ್ಟಿತ್ತು.ಈ ಅನುದಾನ ಬಂದಲ್ಲಿ ಕೆಟ್ಟುಹೋಗಿರುವ ರಸ್ತೆಗಳನ್ನು ಸರಿಪಡಿಸಿ ಜನರ ಟೀಕೆಗಳಿಂದ ಒಂದಷ್ಟೂ ತಪ್ಪಿಸಿಕೊಳ್ಳಬಹುದು ಎಂದು ಶಾಸಕರು ಅಂದ್ಕೊಂಡಿದ್ರು.ಆದ್ರೇ ಸರ್ಕಾರದಿಂದ ಈ ಅನುದಾನದ ರಿಲೀಸಾಗೋದ್ರ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ.

ಎಲ್ಲಾ ಗ್ರಾಮೀಣ ಭಾಗದ ಶಾಸಕರು ಸೇರಿಕೊಂಡು ಹೊಸ ಟೆಕ್ನಾಲಜಿ ಬಳಸಿಕೊಂಡು ದೀರ್ಘಕಾಲಕ್ಕೆ ಬರುವಂತ ರಸ್ತೆಗಳನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿದ್ರು,ಮಳೆಗಾಲದಲ್ಲಿ ನೀರು ಸರಿಯಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆಯನ್ನು ಮಾಡುವ ಪ್ಲಾನ್ ಮಾಡಲಾಗಿತ್ತು.

ಈ ಬಗ್ಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆಯನ್ನು ನೀಡಿದ್ದು ಗ್ರಾಮೀಣ ಭಾಗದ ಶಾಸಕರಿಗೆ 10 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದ ಸರ್ಕಾರ ಇನ್ನೂ ಭರವಸೆ ಈಡೇರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಸರ್ಕಾರ ಅನುದಾನದ ವಿಚಾರದಲ್ಲಿ ತಾರತಮ್ಯದ ಜೊತೆಗೆ ಗೊಂದಲ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.

ಸರ್ಕಾರದ ಈ ನಡೆಯಿಂದಾಗಿ ಸ್ವಪಕ್ಷದ ಶಾಸಕರೇ ತಿರುಗಿ ಬೀಳುತ್ತಿದ್ದಾರೆ.ಕ್ಷೇತ್ರಕ್ಕೆ ಅಭಿವೃದ್ದಿ ಭರವಸೆ ಕೊಟ್ಟು ಜನರಿಗೆ ಸಮರ್ಪಕ ರಸ್ತೆ ವ್ಯವಸ್ಥೆಯನ್ನೇ ಮಾಡಿಕೊಡಲಾಗದೆ,ಶಾಸಕರು ಓಡಾಡುತ್ತಿದ್ದು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಸಿದ್ದು, ಡಿಕೆಶಿ ನಾಟಕ: ಸಚಿವ ಸೋಮಣ್ಣ

……………………………………………………………………………………………………………………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page