ಬ್ರೇಕಿಂಗ್ ನ್ಯೂಸ್
ಕರಾವಳಿಮಂಗಳೂರು

ಉಳ್ಳಾಲ: ಕಾಮಗಾರಿ ವೇಳೆ ಗುಡ್ಡ ಕುಸಿತ – ಮಣ್ಣಿನಡಿ ಸಿಲುಕಿ ಕಾರ್ಮಿಕ ಮೃತ್ಯು

ಉಳ್ಳಾಲ – ತುಳು ಟೈಮ್ಸ್:‌ ಆವರಣಗೋಡೆ ನಿರ್ಮಾಣದ ಕಾಮಗಾರಿ ವೇಳೆ ಗುಡ್ಡ ಕುಸಿದು ಬಿದ್ದು ವಲಸೆ ಕಾರ್ಮಿಕ ದಾರುಣವಾಗಿ ಮೃತಪಟ್ಟಿದ್ದಾರೆ. ತೊಕ್ಕೊಟ್ಟುವಿನ ಕಲ್ಲಾಪು ಸೇವಂತಿಗುತ್ತು ಬಳಿ ಈ ದುರಂತ ಸಂಭವಿಸಿದೆ.

ಮಂಗಳೂರಿನ ಕೂಳೂರಿನಲ್ಲಿ ವಾಸವಾಗಿರುವ ಬಾಗಲಕೋಟೆ ಹುನಗುಂದ ತಾಲೂಕು ನಿವಾಸಿ ಬಾಳಪ್ಪ (45) ಮೃತಪಟ್ಟ ಕಾರ್ಮಿಕ. ಸೇವಂತಿಗೆ ಗುತ್ತುವಿನ ಗೌತಮ್‌ ರಾಜ್‌ ಎಂಬವರ ಮನೆ ಹಿಂಭಾಗದಲ್ಲಿ ಕೆಲಸ ಮಾಡ್ತಿದ್ದಾಗ ಈ ದುರಂತ ನಡೆದಿದೆ.

ಇದನ್ನೂ ಓದಿ: ಸುರತ್ಕಲ್ ನಲ್ಲಿ ಸಹೋದರಿಯನ್ನೇ ಅತ್ಯಾಚಾರಗೈದ ಪಾಪಿ ಸಹೋದರ

ಖಾಸಗಿ ಆಸ್ತಿಯಲ್ಲಿ ಐವರು ಕಾರ್ಮಿಕರು ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಕೆಲಸದ ಸಮಯದಲ್ಲಿ, ದಿಬ್ಬವನ್ನು ಅಗೆಯಲು ಜೆಸಿಬಿ ಬಳಸುತ್ತಿದ್ದಾಗ ಗುಡ್ಡದ ಮಣ್ಣು ಏಕಾಏಕಿ ಕುಸಿದಿದೆ. ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾಳಪ್ಪ ದಿಢೀರ್‌ ಕುಸಿತಗೊಂಡ ಮಣ್ಣಿನಡಿಯಲ್ಲಿ ಹೂತುಹೋಗಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹನುಮಂತ ಮತ್ತು ಭೀಮಪ್ಪ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಗೌತಮ್‌ ರಾಜ್‌ ಮನೆಯ ಹಿಂಭಾಗದಲ್ಲಿ ಕಳೆದ ಮಳೆಗಾಲದಲ್ಲಿ ಎತ್ತರ ಪ್ರದೇಶದ ಗುಡ್ಡ ಕುಸಿತವಾಗಿತ್ತು. ಕೆಲ ದಿನಗಳ ಹಿಂದಷ್ಟೇ ಮನೆಯ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರು ಎನ್ನಲಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Ullal: A labourer died after land slide during retaining wall construction work near Shantigudde at Kallapu, within the Ullal City Municipal Council limits, on Tuesday (December 16). Tulu Times


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ  : https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 35

You cannot copy content of this page