ಬ್ರೇಕಿಂಗ್ ನ್ಯೂಸ್
ದೇಶ

Hijab Verdict: ತರಗತಿಯಲ್ಲಿ ಹಿಜಾಬ್‌ ಧರಿಸಲು ಅನುಮತಿ ನೀಡಿ – ಶಿಕ್ಷಣ ಸಚಿವ ಆದೇಶ

Hijab Verdict: ಕರ್ನಾಟಕದ ಹಿಜಾಬ್‌ ಪ್ರಕರಣ ದೇಶವ್ಯಾಪಿ ಸುದ್ದಿಯಾಗಿದ್ದು ಗೊತ್ತೇ ಇದೆ. ಈಗ ನೆರೆರಾಜ್ಯ ಕೇರಳದಲ್ಲಿ ಹಿಜಾಬ್‌ ಮತ್ತೆ ವಿವಾದದ ಕೇಂದ್ರ ಬಿಂದು ಆಗಿದೆ. ಕೊಚ್ಚಿಯಲ್ಲಿನ ಕ್ರಿಶ್ಚಿಯನ್‌ ಮಿಶನರಿ ನಡೆಸುತ್ತಿರುವ ಖಾಸಗಿ ಶಾಲೆಯ ಆಡಳಿತ ಮಂಡಳಿಯ ನಿರ್ಧಾರ ಸ್ವತಃ ಶಿಕ್ಷಣ ಸಂಸ್ಥೆಗೆ ತೂಗುಗತ್ತಿಯಾಗಿ ಪರಿಣಮಿಸಿದೆ. ಎಂಟನೇ ತರಗತಿ ವಿದ್ಯಾರ್ಥಿನಿ ಹಿಜಾಬ್‌ ಧರಿಸಿಯೇ ಶಾಲೆಗೆ ಬರುತ್ತೇನೆ ಎಂದಿದ್ದು ಇದಕ್ಕೆ ಪೋಷಕರು ಸಾಥ್‌ ಕೊಟ್ಟಿದ್ದಾರೆ. ಪೋಷಕರ ನಿರ್ಧಾರ ಹಿಂದೆ ಎಸ್‌ಡಿಪಿಐ ಕೈವಾಡ ಇದೆ ಎಂಬ ಆರೋಪವೂ ಇದೆ.

ಎಂಟನೇ ತರಗತಿಯ ವಿದ್ಯಾರ್ಥಿನಿಯು ಹಿಜಾಬ್‌ ಧರಿಸಿಯೇ ತರಗತಿಗೆ ಹಾಜರಾಗುತ್ತೇನೆ ಎಂದಿದ್ದು ವಿವಾದ ಹಬ್ಬಿಸಿದೆ. ಪಲ್ಲೂರುತಿಯ ಸೈಂಟ್ ರೀಟಾ ಪಬ್ಲಿಕ್ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯ ನಿರ್ಧಾರಕ್ಕೆ ಶಾಲಾ ಆಡಳಿತ ಮಂಡಳಿ ನೋ ಎಂದಿದೆ. ಇದಾದ ತಕ್ಷಣ ಪೋಷಕರು ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ಈ ವಿವಾದದ ನಡುವೆಯೇ ಸೋಮವಾರದಿಂದ ಶಾಲೆಗೆ ಎರಡು ದಿನಗಳ ರಜೆ ಘೋಷಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಈ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ರಾಜಕೀಯ, ಶಿಕ್ಷಣ ಇಲಾಖೆಯ ಪ್ರವೇಶವಾಗಿದೆ.

ಈ ಹಿಜಾಬ್‌ ವಿವಾದದ ಬಗ್ಗೆ ತನಿಖೆ ನಡೆಸಿದ ಎರ್ನಾಕುಲಂ ಶಿಕ್ಷಣ ಉಪ ನಿರ್ದೇಶಕರ ತಂಡವು, ಶಾಲೆಯು ವಿದ್ಯಾರ್ಥಿನಿ ಹಿಜಾಬ್‌ ಧರಿಸುವುದನ್ನು ನಿಷೇಧಿಸಿತ್ತು. ಇದರಿಂದಾಗಿ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರು ಇಬ್ಬರೂ ಮಾನಸಿಕವಾಗಿ ತೊಂದರೆ ಅನುಭವಿಸಿದ್ದಾರೆ ಎಂದು ವರದಿ ಮಾಡಿತ್ತು.

ಶಿಕ್ಷಣ ಸಚಿವರು ಕೂಡ ಸಾಥ್‌
ಕೇರಳ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಮುಸ್ಲಿಂ ಹುಡುಗಿಗೆ ಹಿಜಾಬ್ ಧರಿಸಿ ಶಿಕ್ಷಣ ಮುಂದುವರಿಸಲು ಅವಕಾಶ ನೀಡುವಂತೆ ನಿರ್ದೇಶನ ನೀಡಿದ್ದಾರೆ. “ಶಾಲೆಯ ಕ್ರಮವು ಭಾರತೀಯ ಸಂವಿಧಾನದ ಅಡಿಯಲ್ಲಿ ಮೂಲಭೂತ ಧಾರ್ಮಿಕ ಸ್ವಾತಂತ್ರ್ಯಗಳಿಗೆ ವಿರುದ್ಧವಾಗಿದೆ ಎಂದು ವರದಿ ಹೇಳುತ್ತದೆ” ಎಂದು ವಿಚಾರಣಾ ಸಂಶೋಧನೆಗಳನ್ನು ಉಲ್ಲೇಖಿಸಿ ಶಿವನ್‌ಕುಟ್ಟಿ ಹೇಳಿದ್ದಾರೆ. ಶಿವನ್‌ ಕುಟ್ಟಿ ಶಾಲೆಯ ಕ್ರಮವನ್ನು “ಗಂಭೀರ ಕರ್ತವ್ಯ ಉಲ್ಲಂಘನೆ” ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ ಎಂದು ಹೇಳಿದ್ದಾರೆ. ಕೇರಳ ಜಾತ್ಯತೀತ ಮೌಲ್ಯಗಳನ್ನು ಬೆಂಬಲಿಸುತ್ತದೆ ಮತ್ತು ಯಾವುದೇ ಮಗು ಧಾರ್ಮಿಕ ಅಭಿವ್ಯಕ್ತಿಯ ಕಾರಣದಿಂದಾಗಿ ಅಂತಹ ತೊಂದರೆಯನ್ನು ಎದುರಿಸಬಾರದು ಎಂದು ಹೇಳಿದ್ದಾರೆ.

ವಿದ್ಯಾರ್ಥಿನಿ ಮತ್ತು ಆಕೆಯ ಕುಟುಂಬಕ್ಕೆ ಆಗಿರುವ ಹಾನಿಯನ್ನು ಪರಿಹರಿಸಲು ಲಿಖಿತ ವರದಿಯನ್ನು ಸಲ್ಲಿಸುವಂತೆ ಸಚಿವರು ಶಾಲೆಯ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಗೆ ಆದೇಶಿಸಿದ್ದಾರೆ. ಶಾಲೆಯು ಹಿಜಾಬ್‌ನ ಬಣ್ಣ ಮತ್ತು ವಿನ್ಯಾಸವನ್ನು ನಿರ್ಧರಿಸಬಹುದಾದರೂ, ಹುಡುಗಿ ಅದನ್ನು ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಸಚಿವರು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಎಸ್‌ಡಿಪಿಐ ಕೈವಾಡ.!
ಪ್ರಾಂಶುಪಾಲೆ ಸಿಸ್ಟರ್ ಹೆಲೀನಾ ಆಲ್ಬಿ ಅವರು ಹೊರಡಿಸಿದ್ದ ರಜೆ ಘೋಷಣೆ ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಶಾಲಾ ಪಿಟಿಎ ಸದಸ್ಯರೊಬ್ಬರು ವಿದ್ಯಾರ್ಥಿನಿಯ ಪೋಷಕರನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ. SDPI ಕಾರ್ಯಕರ್ತರು ಶಾಲಾ ಅಧಿಕಾರಿಗಳೊಂದಿಗೆ, ಅವರು ಮುಖ್ಯವಾಗಿ ಪ್ರಾಂಶುಪಾಲರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಶಿಕ್ಷಣ ಸಚಿವರಿಗೆ ಮಾಜಿ ಡಿಜಿಪಿ ತಿರುಗೇಟು!
ಶಿಕ್ಷಣ ಸಚಿವ ವಿ ಶಿವನ್‌ ಕುಟ್ಟಿ ಅವರು ಆಗಿದ್ದಾಂಗೆ ನಿಲುವು ಬದಲಾಯಿಸುವುದನ್ನು ಮಾಜಿ ಡಿಜಿಪಿ ಸೇನ್‌ ಕುಮಾರ್‌ ವಿರೋಧಿಸಿದ್ದಾರೆ. ಶಿಕ್ಷಣ ಪಡೆಯದ ಶಿಕ್ಷಣ ಸಚಿವರು ಓಲೈಕೆ ಮಾಡುತ್ತಿದ್ದಾರೆ. ಸಚಿವರು ಹೈಕೋರ್ಟ್‌ನ ಆದೇಶ ಮೀರಿ ನಡೆದುಕೊಳ್ಳುತ್ತಿದ್ದಾರೆ. ಶಿಕ್ಷಣದ ಕೊರತೆಯಿಂದ ಹೈಕೋರ್ಟ್‌ ಏನು ಹೇಳಿದೆ ಎಂದು ತಿಳಿದಿಲ್ಲ. ಶಾಲೆಯಲ್ಲಿ ಈ ರೀತಿ ವಿವಾದ ಏರ್ಪಡಲು ನೇರ ಕಾರಣ ಎಸ್‌ಡಿಪಿಐ. ಎಸ್‌ಡಿಪಿಐ ಅನ್ನು ದೂಷಿಸಲು ಧೈರ್ಯವಿಲ್ಲ. ಸಂಸದ ಹೈಬಿ ಈಡನ್‌ ಎಸ್‌ಡಿಪಿಐ ಪರ ನಿಂತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಇಂತಹದ್ದೇ ಪ್ರಕರಣರದಲ್ಲಿ ಕೇರಳ ಹೈಕೋರ್ಟ್‌ನ ತೀರ್ಪು ಕೂಡ ಈ ಹಿಂದೆ ಬಂದಿದೆ. ಇದು ತಿರುವನಂತಪುರಂನ ಸೀನಿಯರ್ ಸೆಕೆಂಡರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಸಲ್ಲಿಸಿದ ಇದೇ ರೀತಿಯ ಅರ್ಜಿಗೆ ಸಂಬಂಧಿಸಿದೆ. ಅವರ ಧಾರ್ಮಿಕ ನಂಬಿಕೆಗಳ ಪ್ರಕಾರ ಅವರು ಆಯ್ಕೆ ಮಾಡಿದ ಉಡುಪನ್ನು ಧರಿಸುವುದು ಸರಿಯಾಗಿದ್ದರೆ, ಕೆಲವು ಜೈನ ಸಮುದಾಯಗಳಿಗೆ (ದಿಗಂಬರರು) ಅವರ ಉಡುಗೆಯೇ ಆಕಾಶ. ಅವರು ಶಾಲೆಗೆ ಬೆತ್ತಲೆಯಾಗಿ ಬಂದರೆ, ಈ ಶಿಕ್ಷಣ ಸಚಿವ ಶಿವನಕುಟ್ಟಿ ಒಪ್ಪುತ್ತಾರೆಯೇ? ಅದು ಅವರ ಧಾರ್ಮಿಕ ಹಕ್ಕು ಕೂಡ. ಧರ್ಮವು ಅವರು ಬೆತ್ತಲೆಯಾಗಿ ಬರಬೇಕೆಂದು ಹೇಳುತ್ತದೆ. ಅವರು ಕೂಡ ಅಲ್ಪಸಂಖ್ಯಾತರು. ಅವರಿಗೆ ಅದನ್ನು ಅನುಮತಿಸಬಹುದೇ? ಎಂದು ಸೇನ್‌ ಕುಮಾರ್ ಪ್ರಶ್ನಿಸಿದರು.

ಇದನ್ನೂ ಓದಿ: Udupi: ಸಮುದ್ರಕ್ಕೆ ಇಳಿದ ಮೂರು ವಿದ್ಯಾರ್ಥಿಗಳು ದುರಂತ ಅಂತ್ಯ


ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 20

You cannot copy content of this page