ಬಂಟ್ವಾಳ – ತುಳು ಟೈಮ್ಸ್: ಮದುಮಗಳೊಬ್ಬಳು ರಾತ್ರೋರಾತ್ರಿ ಮನೆಯಿಂದ ನಾಪತ್ತೆಯಾದ ಘಟನೆ ನಡೆದಿದೆ. ಈ ಬಗ್ಗೆ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ. ಇಪ್ಪತ್ತೊಂದು ವರ್ಷದ ಅಶ್ಪಿ ನಾಪತ್ತೆಯಾದ ಯುವತಿ. ಮದುಮಗಳು ನಾಪತ್ತೆಯಾದ ಬಗ್ಗೆ ಸಾಕಷ್ಟು ಅನುಮಾನ ಹಾಗೂ ಆರೋಪವಿದ್ದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಹಾಗೂ ಬಂದರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ಮದುವೆಯ ತಯಾರಿಯಲ್ಲಿದ್ದ ಮದುಮಗಳು ನಾಪತ್ತೆಯಾದ ಘಟನೆ ಪಲ್ಲಮಜಲು ಎಂಬಲ್ಲಿ ನಡೆದಿದೆ. ಡಿ.14 ರಂದು ಅಶ್ಪಿಯಳನ್ನು ಬಿ ಮೂಡ ಗ್ರಾಮದ ಯುವಕನೊಂದಿಗೆ ಮದುವೆ ಮಾಡೋದಾಗಿ ಮಾತುಕತೆ ನಡೆದಿತ್ತು. ಉಳ್ಳಾಲದ ಯುನಿಟಿ ಹಾಲ್‌ನಲ್ಲಿ ಮದುವೆ ರಿಸಪ್ಷನ್ ನಿಶ್ಚಯವಾಗಿತ್ತು. ಮದುವೆ ದಿನ ಬೆಳಗ್ಗೆ ಸುಮಾರು 04:30 ಗಂಟೆಗೆ ನೋಡಿದಾಗ ಅಕ್ಕನ ಮನೆಯಲ್ಲಿ ಅಶ್ಪಿ ಇಲ್ಲದೇ ಇರುವುದು ತಿಳಿದು ಬಂದಿದ್ದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಯುವತಿ ಸಹೋದರ ದೂರು ನೀಡಿದ್ದಾನೆ.
ಇದನ್ನೂ ಓದಿ: ಉಡುಪಿಯಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
ವರನ ಕಡೆಯವರಿಂದ ಗಂಭೀರ ಆರೋಪ.!
ಇನ್ನು, ಯುವತಿ ನಾಪತ್ತೆಯಾಗ್ತಿದ್ದಂತೆ ವರನ ಕಡೆಯವರು ಗಂಭೀರ ಆರೋಪ ಮಾಡಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಡಿ. 12ರಂದು ನಿಖಾ ಆಗಿದ್ದು, ಡಿ. 14ರ ಬೆಳಗ್ಗೆ ಯುವತಿ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ ಎಂದು ಆರೋಪಿಸಿದ್ದಾರೆ.
ಚಿನ್ನಾಭರಣ ದುಬಾರಿ ಉಡುಗೊರೆಯೊಂದಿಗೆ ಎಸ್ಕೇಪ್.!
ಪ್ರಿಯಕರೊನೊಂದಿಗೆ ಯುವತಿ ಓಡಿ ಹೋಗಿದ್ದು ಮಾತ್ರವಲ್ಲದೆ, ಆಕೆಗೆ ವರನ ಕಡೆಯಿಂದ ಸಿಕ್ಕಂತಹ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ದುಬಾರಿ ಉಡುಗೊರೆಗಳೊಂದಿಗೆ ಆಕೆಯು ಪ್ರಿಯಕರನೊಂದಿಗೆ ಎಸ್ಕೇಪ್ ಆಗಿದ್ದಾಳೆ ಎಂದು ವರನ ಕಡೆಯವರು ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ನಿಖಾ ಸಂಭ್ರಮದಲ್ಲಿದ್ದ ಯುವಕ, ಪೋಷಕರಿಗೆ ದಿಕ್ಕೇ ತೋಚದ ಸ್ಥಿತಿ ನಿರ್ಮಾಣವಾಗಿದೆ. ಮದುವೆ ಸಂಭ್ರಮದಲ್ಲಿದ್ದಾಗಲೇ ಮದುಮಗಳು ಶಾಕ್ ನೀಡಿದ್ದಾಳೆ.
In a shocking incident near BC Road in Pallamajalu, a 21-year-old bride disappeared on her wedding day, with the groom’s family alleging she eloped with a lover, taking gold and gifts. Tulu Times
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











