ಉಪ್ಪಿನಂಗಡಿ – ತುಳು ಟೈಮ್ಸ್: ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್‌ನನ್ನು ಕ್ರೀಡಾಂಗಣದಲ್ಲೇ ಹಲ್ಲೆಗೆ ಯತ್ನಿ ನಡೆಸಿದ ಘಟನೆ ವರದಿಯಾಗಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಬಾರ್ ಸ್ಪೋರ್ಟಿಂಗ್ ಕ್ಲಬ್ ಆಶ್ರದಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಈ ಘಟನೆ ನಡೆದಿದೆ.
`ಉಬಾರ್ ಕಪ್ 2025’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ವೇಳೆ ಅಂಪೈರ್ ಮೇಲೆ ಹಲ್ಲೆ ನಡೆಸಲಾಗಿದೆ. ಉಪ್ಪಿನಂಗಡಿಯಲ್ಲಿ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ವೇಳೆ ಮಂಗಳೂರಿನ ರೋಲನ್ ಪಿಂಟೋ ಎಂಬ ತೀರ್ಪುಗಾರನ ಕೆಲ ಯುವಕರು ಹಲ್ಲೆಯನ್ನು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಂಗಳೂರಿನ ಕಾನಾ ಮತ್ತು ಕೆಜಿಎಫ್ ನಡುವೆ ನಡೆಯುತ್ತಿದ್ದ ಸೆಮಿಫೈನಲ್ ಪಂದ್ಯಾಟದ ವೇಳೆ ಅಂಪೈರ್ ರೋಲನ್ ಪಿಂಟೋ ಎಲ್‍ಬಿಡಬ್ಲ್ಯು ತೀರ್ಪು ನೀಡಿದ್ದರು. ಆದರೆ ಅದು ತಪ್ಪು ಕೆಲ ಯುವಕರಿಂದ ಸೀದಾ ಮೈದಾನಕ್ಕೆ ನುಗ್ಗಿ ಅಂಪೈರ್‌ನನ್ನು ತರಾಟೆಗೆ ತೆಗೆದುಕೊಂಡು ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದ ಬಳಿಕ ಪಂದ್ಯಾಟ ಕೆಲ ಕಾಲ ನಿಂತಿದೆ. ಬಳಿಕ ಇತ್ಯರ್ಥಗೊಳಿಸಿ ಮರು ಪಂದ್ಯಾಟ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ: ಸುಳ್ಯ: ಇಲಿಪಾಷಾಣ ಸೇವನೆ – ಚಿಕಿತ್ಸೆ ಫಲಿಸದೆ ಯುವಕ ಮೃತ್ಯು
Uppinangady: People attempt to attack on umpire in Ubar Cup Cricket Tournament macth. Tulu Times
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











