ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕ

ಉಡುಪಿಯಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಉಡುಪಿ: Tulu Times | ಉಡುಪಿ ಜಿಲ್ಲೆಯ ‌ ಬ್ರಹ್ಮಾವರ ಸಮೀಪ ವ್ಯಕ್ತಿಯೋರ್ವ  ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ನಡೆದಿದೆ. ಮೃತರಾದ ವ್ಯಕ್ತಿಯನ್ನು  ಕುಶಲ್ ಶೆಟ್ಟಿ ಶೆಟ್ಟಿ (67)  ಎಂದು ಗುರುತಿಸಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಮೃತರ ಮಗ ಅತುಲ್ ಕೆ ಶೆಟ್ಟಿ ಪೊಲೀಸ್‌ ಕಂಪ್ಲೈಂಟ್‌ ಕೊಟ್ಟಿದ್ದಾರೆ.  ಕುಶಲ್ ಶೆಟ್ಟಿ ಕಳೆದ ಎರಡು ದಿನಗಳ ಹಿಂದೆ ಸಂಜೆ 5 ಗಂಟೆಗೆ ತಮ್ಮ ಮನೆಯಿಂದ ಹೇರೂರು ಗ್ರಾಮದ ಅಕ್ಷರ ಮನೆಯಿಂದ ಹಳ ಮನೆಯಾದ ಚೇರ್ಕಾಡಿಗೆ ಮನೆಗೆ ಹೋಗಿದ್ದರು.  ನಿನ್ನೆ 9 ಗಂಟೆಯಾದರೂ ಮನೆಗೆ ಬಂದಿಲ್ಲ. ಫೋನ್ ಮಾಡಿದ್ದರೂ ಸ್ವೀಕರಿಸಿಲ್ಲ. ಕೊನೆಗೆ ಮನೆಗೆ ಹೋಗಿ ನೋಡಿದಾಗ ಮನೆಯ ಉಪ್ಪರಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಈ  ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯು.ಡಿ.ಆರ್ 88/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.

ಮೂಲ್ಕಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ!

ಪ್ರತ್ಯೇಕ ಪ್ರಕರಣದಲ್ಲಿ, ಮೂಲ್ಕಿಯಲ್ಲಿ ಪುಟ್ಟ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಅಡಿಯಲ್ಲಿ ವೃದ್ಧನನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಈ ಬಗ್ಗೆ ಸುರತ್ಕಲ್ ಪೊಲೀಸರು ಹಳೆಯಂಗಡಿ ಬಳಿಯ ಚೇಳಾಯರು ಎಂಬಲ್ಲಿ ವೃದ್ಧನನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಟ್ಯೂಷನ್ ಗೆ ಹೋದಾಗ ರಸ್ತೆಯಲ್ಲಿ ಲೈಂಗಿಕ ಕಿರುಕುಳ!

ಟ್ಯೂಷನ್ ಮುಗಿಸಿಕೊಂಡು ಮಾಮೂಲಿಯಂತೆ ಬಸ್ ನಲ್ಲಿ ಬಂದು ಮುಕ್ಕದಲ್ಲಿ ಇಳಿದು ತನ್ನ ಮನೆಗೆ ಒಳ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವೃದ್ಧ ಆರೋಪಿ ನನ್ನನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಸಂತ್ರಸ್ತ ಬಾಲಕಿ ದೂರಿನಲ್ಲಿ ಉಲ್ಲೇಖ ಮಾಡಿ, ದೂರು ನೀಡಿದ್ದಾಳೆ. ಚೇಳಾಯರು ನಿವಾಸಿ ಸುಂದರ ಪೂಜಾರಿ (60) ಬಂಧಿತ ಆರೋಪಿಯಾಗಿದ್ದಾನೆ.

ತನ್ನ ಮೇಲೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ಬಾಲಕಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಈ ಘಟನೆಯು 2025ರ ಅಕ್ಟೋಬರ್‌ನಲ್ಲಿ ನಡೆದಿದೆ. ನಂತರ ಬಾಲಕಿಯ ತಾಯಿ ವೈದ್ಯರ ಬಳಿ ಕರೆದುಕೊಂಡು ಹೋಗಿ ತಪಾಸಣೆಗೆ ನೀಡಿದ್ದರು. ಈ ಸಂದರ್ಭ ಬಾಲಕಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಚಾರ ತಿಳಿಸಿದ್ದಾಗಿ ಪೊಲೀಸರು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ. ಇದೀಗ ಪೊಲೀಸರು ಹೆಚ್ಚಿನ ಗಮನದಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

A person committed suicide by hanging himself in Udupi- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 169

You cannot copy content of this page