ಸುಳ್ಯ – ತುಳು ಟೈಮ್ಸ್: ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದ ಯುವಕ ಬೆಂಗಳೂರಿನಲ್ಲಿಯೇ ಇಲಿಪಾಷಾಣ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ಕಲ್ಪಡ ಕೊಡಿಯಾಲ ಗ್ರಾಮದ ಇಪ್ಪುಳ್ತಡಿ ನಿವಾಸಿ ಆಶಿತ್ (25) ಮೃತಪಟ್ಟ ಯುವಕ.
ಡಿ. 5 ರಂದು ಆಶಿತ್ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದ. ಅಲ್ಲಿಂದ ಚಾಲಕನಾಗಿ ಹೈದರಾಬಾದ್ ಗೆ ಹೋದಾಗ ವಾಂತಿ ಶುರುವಾಗಿದೆ. ಅಲ್ಲಿಯ ಸ್ಥಳೀಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಬಳಿಕ ಅತನ ಜೊತೆಗೆ ಇದ್ದವರು ಆತನನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.
ಯುವಕನ ಅರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಕುಟುಂಬಸ್ಥರು ಡಿ.10ರಂದು ಬೆಂಗಳೂರಿಗೆ ಹೋಗಿ ಊರಿಗೆ ಕರೆದುಕೊಂಡು ಬಂದಿದ್ದಾರೆ. ಡಿ. 11 ರಂದು ಆಶಿತ್ನನ್ನು ಪುತ್ತೂರಿನ ಅದರ್ಶ ಅಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಹೋದಾಗ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ವೈದ್ಯರು ಸಮಾಲೋಚನೆ ನಡೆಸಿದಾಗ ತಾನು ಡಿ.5 ರಂದು ಇಲಿಪಾಷಾಣವನ್ನು ಸೇವಿಸಿದ್ದಾಗಿ ತಿಳಿಸಿದ್ದಾನೆ.
ಇದನ್ನೂ ಓದಿ: ಮೂಲ್ಕಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ.. ವೃದ್ಧ ಅರೆಸ್ಟ್
ಅದರಂತೆ ಆತನನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಶಿತ್ ಚಿಕಿತ್ಸೆ ಫಲಕಾರಿಯಾಗದೇ ಡಿ. 13ರಂದು ಮೃತಪಟ್ಟಿದ್ದಾರೆ.
ಆತ್ತಾವರಕ್ಕೆ ಕರೆದುಕೊಂಡು ಹೋದಲ್ಲಿ ಆತನನ್ನು ಪರೀಕ್ಷಿಸಿದ ವೈದ್ಯರು ಆತನ್ನು ಒಳರೋಗಿಯಾಗಿ ದಾಖಲಿಸಿಕೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದು ಆತನಿಗೆ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ; 13-12-2025 ರಂದು ರಾತ್ರಿ ಸಮಯ 09-19 ಗಂಟೆಗೆ ಆತನು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿರುತ್ತಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯುಡಿಆರ್ ನಂಬ್ರ: 32/2025 ಕಲಂ: 194 BNSS-2023. ಯಂತೆ ಪ್ರಕರಣ ದಾಖಲಾಗಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ಯುಡಿಆರ್ ನಂಬ್ರ: 32/2025 ಕಲಂ: 194 BNSS-2023. ಯಂತೆ ಪ್ರಕರಣ ದಾಖಲಾಗಿರುತ್ತದೆ. ಇಲಿಪಾಷಾಣ ಯಾತಕ್ಕಾಗಿ ಸೇವಿಸಿದ್ದ ಎಂಬುವುದು ಸ್ಪಷ್ಟವಾಗಿಲ್ಲ.
Sullia: Youth dies after consuming rat poison at Bengaluru. The deceased youth identified as Ashith, 25 year from Sullia, Kalpada Kodiyala
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











