ಕರ್ನಾಟಕ: Tulu Times | ಕನ್ನಡ ಕಿರುತೆರೆ ನಟಿ, ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಇವರ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಸದ್ದಿಲ್ಲದೆ ಮದುವೆ ಆದ ಕಿರುತೆರೆ ನಟಿ ಗೀತಾ ಭಾರತಿ ಭಟ್!
ಗೀತಾ ಭಾರತಿ ಭಟ್, ಜೀ ಕನ್ನಡದಲ್ಲಿ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ 2017ರಲ್ಲಿ ಗುಂಡಮ್ಮ ಹೆಸರಿನ ಪಾತ್ರದ ಮೂಲಕ ಜನ ಮನಗೆದ್ದಿದ್ದರು.
ಬಳಿಕ ಸೀಸನ್ 8ರ ಬಿಗ್ ಬಾಸ್ ಕನ್ನಡದಲ್ಲಿ ಕಂಟೆಸ್ಟೆಂಟ್ ಆಗಿಯೂ ಇದ್ದರು. ಆ ಬಳಿಕ ಅವರು ‘ಲವ್ ಮಾಕ್ಟೇಲ್’ ಸಿನಿಮಾದಲ್ಲಿ ನಟಿಸಿದರು. ಇದೀಗ ಸಡನ್ ಮದುವೆಯಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆ ಕೂಡ ಸುದ್ದಿಯಾಗಿದ್ದರು. ಹೀಗೆ ಆಗಾಗ ಸುದ್ದಿ ಆಗುತ್ತಾ ಇರುವ ಇವರು ಈಗ ಮದುವೆಯ ಸುದ್ದಿಯಿಂದ ಎಲ್ಲರಿಗೂ ಶಾಕ್ ನೀಡಿದ್ದಾರೆ. ಈಗ ಗೀತಾ ಭಾರತಿ ಅವರ ಹೊಸ ಫೋಟೋ ಒಂದು ವೈರಲ್ ಆಗಿದೆ. ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎನ್ನುವುದು ಸೋಷಿಯಲ್ ಮೀಡಿಯಾ ನೋಡಿಯೇ ಎಲ್ಲರಿಗೂ ತಿಳಿದಿದ್ದು. ಈಗ ಎಲ್ಲರೂ ಶುಭಾಶಯ ಕೋರುತ್ತಾ ಇದ್ದಾರೆ.
ಈ ಹಿಂದೆ ಬಾಡಿ ಶೇಮಿಂಗ್ ಬಗ್ಗೆ ಮಾತನಾಡುತ್ತಾ, ತನಗಾದ ಅವಮಾನದ ಬಗ್ಗೆ ನಟಿ ಹೇಳಿಕೊಂಡಿದ್ದರು. ಗೀತಾ ಭಾರತಿ ಭಟ್ ಬಾಡಿ ಶೇಮಿಂಗ್ ಬಗ್ಗೆ ಸಾಕಷ್ಟು ಬಾರಿ ಖಂಡಿಸಿದ್ದಾರೆ. ಗೀತಾ ಲವ್ ಮಾಕ್ಟೇಲ್’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಿಂದ ಇವರಿಗೆ ನೋವಾಗಿದೆ ಅನ್ನೋ ವಿಚಾರ ಕೂಡ ಈ ಹಿಂದೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ಇದೀಗ ಗೀತಾ ಭಾರತಿ ಭಟ್ ಅವರು ಸೈಲೆಂಟ್ ಆಗಿ ವಿವಾಹ ಆಗಿದ್ದಾರೆ. ಗೀತಾ ಮದುವೆ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಇನ್ನು ಗೀತಾ ಭಾರತಿ ಭಟ್ ವಿವಾಹ ಆಗಿರುವ ಹುಡುಗ ಯಾರು ಎಂಬುದು ಸ್ಪಷ್ಟವಾದ ಮಾಹಿತಿ ಇಲ್ಲ. ಲವ್ ಮ್ಯಾರೇಜೋ ಅಥವಾ ಅರೆಂಜ್ ಮ್ಯಾರೆಜೋ ಎಂಬ ಕುತೂಹಲವೂ ಮೂಡಿದೆ. ಎಲ್ಲಾ ಪ್ರಶ್ನೆಗಳಿಗೆ ಗೀತಾ ಭಾರತಿ ಭಟ್ ಅಧಿಕೃತವಾಗಿ ಉತ್ತರ ನೀಡಬೇಕಾಗಿದೆ. ಇವರ ಅಭಿಮಾನಿಗಳಂತೂ ಮದುವೆ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ.
Television actress Geeta Bharati Bhatt enters married life..!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











