ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಮದುವೆಯಾದ ಹೆಣ್ಣು ಮಕ್ಕಳು ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡುತ್ತಿದ್ದೀರಾ ಹಾಗಾದ್ರೆ ಗಮನಿಸಿ!

ಜೀವನಶೈಲಿ:Tulu Times | ಹೆಣ್ಣಿಗೆ ತಾಯ್ತನ ಎನ್ನುವುದು ಅಮೂಲ್ಯವಾದಂತಹ ಸಂಗತಿ. ತಾನು ಮದುವೆಯಾಗಿ ಮಗುವಿಗೆ ಜನ್ಮ ನೀಡುತ್ತೇನೆ ಅನ್ನುವಂತಹ ಖುಷಿ ಪ್ರತಿಯೊಬ್ಬಳು ಹೆಣ್ಣು ಮಕ್ಕಳಿಗೂ ಇರುತ್ತೆ. ಹಾಗಾದ್ರೆ, ಮದುವೆಯಾದ ಹೆಣ್ಣುಮಕ್ಕಳು ಗರ್ಭಿಣಿಯಾಗಲು ಪ್ಲ್ಯಾನ್ ಮಾಡುತ್ತಿದ್ದೀರಾ? ಹಾಗಾದ್ರೆ ಸರಳ ಸೂಚನೆಗಳನ್ನುತಿಳಿದುಕೊಳ್ಳಿ..

ಇಂದಿನ ದಿನಗಳಲ್ಲಿ ಮದುವೆ ಆದ್ರೂ ಮಕ್ಕಳು ಆಗುವುದು ಬಹಳ ಕಷ್ಟ. ಕೆಲವೊಬ್ಬರು ವರ್ಷಾನುಗಟ್ಟಲೆಯಿಂದ ಮಗುವಿಗಾಗಿ ಕಾಯುತ್ತಾರೆ.ಇನ್ನು ಕೆಲವರು ತಮ್ಮ ಯೋಚನೆಯನ್ನು ಬದಲಾಯಿಸಿಕೊಂಡು ವರ್ಷಗಳನ್ನ ದೂಡುತ್ತಾ ಇರುತ್ತಾರೆ. ಇತ್ತೀಚಿನ ಆಹಾರ ಶೈಲಿಯಿಂದಾಗಿ ಮಕ್ಕಳು ಹುಟ್ಟುವುದು ಕೂಡ ಕಷ್ಟವಾಗಿದೆ. ದಿನ ನಿತ್ಯದ ಜೀವನದಲ್ಲಿ ಇರುವಂತಹ ಒತ್ತಡಗಳಿಂದ ಹೆಣ್ಣು ಮಕ್ಕಳು ಮಕ್ಕಳೇ ಬೇಡ ಅನ್ನೋ ಮಟ್ಟಿಗೆ ತಲುಪಿಬಿಟ್ಟಿದ್ದಾರೆ.

ಮದ್ವೆಯಾದ ತಕ್ಷಣ ಮಗು ಆಗಲೇಬೇಕು ಅಂತ ಏನಿಲ್ಲ! ಕೂಲ್

ಮದುವೆಯಾದ ಹೆಣ್ಣು ಮಕ್ಕಳು ಮಗುವಿನ ಪ್ಲಾನ್ ಮಾಡುತ್ತಿದ್ದೀರಿ ಅಂದ್ರೆ ಕೆಲವೊಂದು ಸರಳ ಸೂಚನೆಗಳನ್ನು ಫಾಲೋ ಮಾಡಿದರೆ ಒಳ್ಳೆಯದು. ಅವುಗಳು ಏನೆಂದರೆ.. ಮದುವೆಯಾದ ಹೆಣ್ಣು ಮಕ್ಕಳು ಮೊದಲು ನಿಮ್ಮ ಆದ್ಯತೆಗಳನ್ನು ತಿಳಿದುಕೊಳ್ಳಿ. ಫ್ಯಾಮಿಲಿ ಹೇಳುತ್ತಾರೆ ಅಂತ ನೀವು ಮದುವೆಯಾದ ತಕ್ಷಣ ಗರ್ಭಿಣಿಯಾಗಲು ಹೊರಟರೆ ನಿಮ್ಮ ಮದುವೆಯ ಜೀವನವನ್ನು ನೀವು ಅನುಭವಿಸದೆ ಇಡೀ ಮಗುವಿನ ಹಾರೈಕೆ ಅಥವಾ ಮನೆಯ ಜವಾಬ್ದಾರಿಗಳನ್ನು ನೀವು ಹೊರುತ್ತೀರಿ. ಇದರಿಂದ ನಿಮ್ಮ ಗಂಡನ ಜೊತೆಗೆ ಸಮಯ ಕಳೆಯುವುದು ಅಥವಾ ನಿಮ್ಮ ವೈವಾಹಿಕ ಜೀವನ ಅನುಭವಿಸುವ ಖುಷಿ ನಿಮಗೆ ಸಿಗುವುದಿಲ್ಲ.

ಒತ್ತಡ ಹೇರುತ್ತಿದ್ದಾರೆ ಅಂತ ನೀವು ಚಿಂತೆ ಮಾಡದಿರಿ!

ಮೊದಲು ನಿಮ್ಮ ಆದ್ಯತೆಯನ್ನು‌ ನೀವು ನೋಡಿಕೊಳ್ಳಿ. ನಿಮ್ಮ ಮನಸ್ಸು ಹಾಗೂ ನಿಮ್ಮ ಕನಸುಗಳನ್ನು ಮೊದಲು ಸರಿಪಡಿಸಿಕೊಳ್ಳಿ. ನಂತರ ಮಗುವಿನ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಸುತ್ತಮುತ್ತಲಿನ ವಾತಾವರಣ ಹೇಗಿದೆ ಎನ್ನುವುದನ್ನು ಕೂಡ ತಿಳಿದುಕೊಳ್ಳಿ. ಪ್ರತಿ ಬಾರಿ ಜಗಳ, ಪ್ರತಿ ಬಾರಿ ಕೋಪ, ಪ್ರತಿ ಬಾರಿ ಕಿರಿಕಿರಿ ಎನ್ನುವಂತಹ ಅನುಭವ ನಿಮ್ಮ ಗಂಡನ ಮನೆಯಲ್ಲಿದ್ದರೆ ಸ್ವಲ್ಪ ನಿಧಾನವಾಗಿ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ನಂತರ ನೀವು ನಿಮ್ಮ ಪ್ರೆಗ್ನೆನ್ಸಿ ಪ್ಲಾನ್ ಅನ್ನು ಮಾಡಿಕೊಳ್ಳಿ.

ನಿಮ್ಮ ದೇಹ.. ನಿಮ್ಮ ಆರೋಗ್ಯ..ನಿಮಗಷ್ಟೇ ಗೊತ್ತು!

ಯಾವತ್ತೂ ಹೆಣ್ಣುಮಕ್ಕಳಿಗೆ ಪ್ರೆಗ್ನನ್ಸಿ ಸಮಯದಲ್ಲಿ ಜಗಳ ಭಿನ್ನಾಭಿಪ್ರಾಯ, ಮನಸ್ತಾಪ,  ಕಿರಿಕಿರಿ ಎನ್ನುವಂತಹ ಅನುಭವ ಆದ್ರೆ ತಮ್ಮ ಹೊಟ್ಟೆಯಲ್ಲಿರುವಂತಹ ಮಗುವಿಗೂ ಇದೆಲ್ಲ ಹಾನಿಯಾಗುತ್ತದೆ. ಗರ್ಭಿಣಿಯ ಮನಸ್ಸು ಬಹಳ ನಿರ್ಭೀತಿಯಿಂದ ಇರಬೇಕಾದರೆ ಮೊದಲು ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸರಿಪಡಿಸಿಕೊಳ್ಳಿ. ನಂತರ ನಿಮ್ಮ ನಿರ್ಧಾರವನ್ನು ಕೈಗೊಳ್ಳಿ. ಇದರಿಂದ ನಿಮ್ಮ ಜೀವನ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೂ ಒಳ್ಳೆಯದು.

ಹಿರಿಯರು ಹೇಳೋದು ಇದ್ದೇ ಇದೆ.. ಡೋಂಟ್‌ ವರಿ!

ವಯಸ್ಸಾದ ಹಿರಿಯರು ನಿಮಗೆ ಒತ್ತಡ ಹಾಕುತ್ತಿದ್ದರೆ ಅದರ ಬಗ್ಗೆ ಜಾಸ್ತಿಯಾಗಿ ಯೋಚನೆ ಮಾಡದಿರಿ! ಯಾಕೆಂದರೆ ನಿಮ್ಮ ಆರೋಗ್ಯ ನಿಮ್ಮ ಮನಸ್ಸು.. ನಿಮ್ಮ ಜೊತೆ ಇರುತ್ತದೆ. ಚಿಂತನೆ ಭಾವನೆಯಿಂದ ನಿಮ್ಮ ಹೊಟ್ಟೆಯಲ್ಲಿರುವ  ಮಗುವಿಗೆ ಹಾನಿಯಾಗುವಂತಹ ಸಂಭವ ಜಾಸ್ತಿ ಆಗಿರುತ್ತದೆ. ಹಾಗಾಗಿ ನಿಮ್ಮ ಪ್ರೆಗ್ನೆನ್ಸಿ ಸಮಯದಲ್ಲಿ ಆರೋಗ್ಯಕರವಾಗಿ ಇರುವಂತದ್ದು ಒಳ್ಳೆಯದು. ಇಂತಹ ಸರಳ ವಿಚಾರಗಳನ್ನು ವಿದ್ಯಾವಂತರಾದ ನಾವುಗಳು ಅರ್ಥ ಮಾಡಿಕೊಂಡು ಬದುಕಬೇಕಾಗಿದೆ.

If married girls are planning a pregnancy, be careful!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page