ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಉಗುರು ಕಚ್ಚುವ ಕೆಟ್ಟ ಹವ್ಯಾಸ ನಿಮಗಿದ್ಯಾ..? ಹಾಗಾದ್ರೆ ಈಗಲೇ ಬಿಟ್ಟುಬಿಡಿ!

ಜೀವನಶೈಲಿ: Tulu Times | ಬಹುತೇಕ ಜನ ಆಗಾಗ ಸುಮ್ಮನೆ ಉಗುರುಗಳನ್ನು ಕಚ್ಚುತ್ತಾ ಇರುತ್ತೇವೆ. ನಿಜಕ್ಕೂ ಇದಕ್ಕೆ ಕಾರಣ ಯಾವುದೂ ಇಲ್ಲ. ಆದರೆ ಉಗುರುಗಳನ್ನು ಮಾತ್ರ ಕಚ್ಚುತ್ತೇವೆ. ಹಾಗಾದ್ರೆ ಉಗುರು ಕಚ್ಚುವಂತಹ ಹವ್ಯಾಸ ನಿಮಗಿದ್ಯಾ? ಅದಕ್ಕೆ ಕಾರಣಗಳೇನು? ಎನ್ನುವುದನ್ನು ನೋಡೋಣ ಈ ಸ್ಟೋರಿಯಲ್ಲಿ..

ಬಾಯಿಯಿಂದ ಬ್ಯಾಕ್ಟೀರಿಯಾ ನಿಮ್ಮ ದೇಹ ಸೇರುತ್ತೆ!

ನಾವು ಬಹುತೇಕರು ಆಗಾಗ ಉಗುರುಗಳನ್ನು ಕಚ್ಚುತ್ತಾ ಇರುತ್ತೇವೆ. ವಿಶೇಷವಾಗಿ, ಮಕ್ಕಳಂತೆ ಈ ರೀತಿಯಾದಂತಹ ಅಭ್ಯಾಸವನ್ನು  ಮಾಡಿಕೊಂಡಿರುತ್ತೇವೆ. ಇನ್ನು, ಉಗುರು ಕಚ್ಚುವಿಕೆ ಉದ್ವೇಗ ನಿಯಂತ್ರಣದ ಅಸ್ವಸ್ಥತೆಯಾಗಿದೆ ಎಂದು ಹೇಳುತ್ತಾರೆ. ಇದರಿಂದ ನಿಮ್ಮ ಬಾಯಿಯ ಒಳಗೆ ಬ್ಯಾಕ್ಟೀರಿಯಗಳು ಹೋಗುತ್ತವೆ. ಬಾಯಿಯ ಒಳಗೆ ಸೂಕ್ಷ್ಮ ಜೀವಿಗಳು ಹೋಗಿ ನಿಮ್ಮ ದೇಹಕ್ಕೆ ಸೋಂಕು ಹರಡುವಂತೆ ಮಾಡುತ್ತದೆ. ಉಗುರು ಕಚ್ಚುವುದು ನಿಮ್ಮ ಉಗುರುಗಳು ಹಲ್ಲುಗಳನ್ನು ಶಾಶ್ವತವಾಗಿ ಇದು ಹಾನಿಗೊಳಿಸುತ್ತದೆ. ಇನ್ನು ಉಗುರುಗಳನ್ನು ಯಾಕೆ ಕಚ್ಚುತ್ತಾರೆ ಎನ್ನುವುದನ್ನು ನೋಡುವುದಾದರೆ, ಕೆಲವರಿಗೆ ಉಗುರು ಕಚ್ಚುವಂತ ಅಭ್ಯಾಸ ಬಾಲ್ಯದಿಂದಲೇ ಶುರುವಾಗುತ್ತದೆ. ಇನ್ನು, ಕೆಲವರಿಗೆ ಏಕಾಗ್ರತೆಯ ಕೊರತೆ ಇರುತ್ತದೆ. ಇಂಥವರು ಹೆಚ್ಚಾಗಿ ಉಗುರನ್ನು ಕಚ್ಚುತ್ತಾರೆ. ಯಾವುದೇ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವಾಗ ನಾವು ಉಗುರನ್ನು ಕಚ್ಚುತ್ತೇವೆ.

ಒತ್ತಡದಿಂದ ಉಗುರು ಕಚ್ಚುವುದು ನೋಡುವವರಿಗೆ ಅಸಹ್ಯ !

ಅತಿಯಾದ ಒತ್ತಡ ಆತಂಕಕ್ಕೆ ನೀವು ಒಳಗಾಗಿದ್ದರೆ ಉಗುರು ಕಚ್ಚುವಂತಹ ಅಭ್ಯಾಸವನ್ನು ಮಾಡಿಕೊಂಡಿರುವಿರಿ. ಇದು ಭಾವನಾತ್ಮಕ ಅಥವಾ ಮಾನಸಿಕ ಸಮಸ್ಯೆಗಳು ಇದರಿಂದ ಉಂಟಾಗುತ್ತದೆ. ಇನ್ನೂ ಅಸಹನೆ ಹತಾಶೆ ಬೇಸರ ಆದಾಗ ನಮ್ಮ ನಡವಳಿಕೆ ಬದಲಾಗುತ್ತದೆ. ಕ್ರಮೇಣ ನಾವು ಉಗುರನ್ನು ಕಚ್ಚುತ್ತೇವೆ. ತನ್ನಿಂದ ತಾನೇ ಕೈ ಬಾಯಿಗೆ ಹೋಗುತ್ತದೆ. ನಂತರ ಉಗುರನ್ನು ಕಚ್ಚಲು ನಾವು ಪ್ರಾರಂಭ ಮಾಡುತ್ತೇವೆ. ನೀವು ಉಗುರನ್ನು ಕಚ್ಚುತ್ತಿದ್ದರೆ, ಇದು ನೋಡುವವರಿಗೆ ಅಸಹ್ಯವಾಗಿ ಕಾಣುತ್ತದೆ. ಇನ್ನು ಕೆಲವರು ಕಚ್ಚಿದ ಉಗುರುಗಳನ್ನು ನುಂಗುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇದರಿಂದ ಹೊಟ್ಟೆ ಮತ್ತು ಕರುಳಿನ ಸೋಂಕಿನ ಅಪಾಯ  ಹೆಚ್ಚುತ್ತದೆ ಅಂತ ಹೇಳಲಾಗುತ್ತದೆ. ಹೀಗಾಗಿ ನೀವು ಉಗುರು ಕಚ್ಚುವಂತಹ ಅಭ್ಯಾಸವನ್ನು ಇಟ್ಟುಕೊಂಡಿದ್ದರೆ ಈಗಲೇ ದೂರ ಮಾಡಿಕೊಳ್ಳಿ.

Do you have a bad habit of biting your nails? If so, quit it now!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page