ಪುತ್ತೂರು: Tulu Times | ಪುತ್ತೂರಿನ ಸವಣೂರಿನಲ್ಲಿ ಸ್ಕೂಟರ್ ಅಪಘಾತವಾಗಿ ಮಹಿಳೆಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಘಟನೆಯಲ್ಲಿ ಸ್ಕೂಟರ್ ನಲ್ಲಿದ್ದ ನರಿಮೊಗರು ಗ್ರಾಮದ ಪುತ್ತಿಲ ನಿವಾಸಿ, ಪುತ್ತೂರು ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಯದರ್ಶಿ ಭವ್ಯ ವಾದಿರಾಜ್ ಗಂಭೀರ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಪಂಚಾಯಿತಿ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ: ಅರುಣ್ ಕುಮಾರ್ ಪುತ್ತಿಲ ಆರೋಪ!
ಡಿ.13ರ ರಾತ್ರಿ ಸವಣೂರಿನಲ್ಲಿ ಭವ್ಯ ವಾದಿರಾಜ್ ತನ್ನ ಅಕ್ಕನ ಮಗನೊಂದಿಗೆ ಅನಾರೋಗ್ಯ ಪೀಡಿತ ಮಗುವೊಂದನ್ನು ನೋಡಲು ಸ್ಕೂಟರ್ ನಲ್ಲಿ ಹೋಗುತ್ತಿದ್ದರು, ಈ ವೇಳೆ ಅವರ ಸ್ಕೂಟರ್ ಅಪಘಾತಗೊಂಡಿದೆ. ತೀವ್ರ ಗಾಯಗೊಂಡ ಭವ್ಯ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ರಿಷಬ್ ಶೆಟ್ಟಿ ಹರಕೆ ನೇಮೋತ್ಸವದ ಬಗ್ಗೆ ಆಡಳಿತ ಸಮಿತಿ ಹೇಳೋದೇನು?
ಬಂಟ್ವಾಳದಲ್ಲಿ ಗಾಂಜಾ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ವಶಕ್ಕೆ!
ಪ್ರತ್ಯೇಕ ಪ್ರಕರಣದಲ್ಲಿ, ಬಂಟ್ವಾಳದಲ್ಲಿ ಗಾಂಜಾ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇವರಿಂದ 810 ಗ್ರಾಂ ಗಾಂಜಾ ಸ್ವಾಧೀನ ಪಡಿಸಿಕೊಂಡಿರುವ ಘಟನೆ ತುಂಬೆ ಗ್ರಾಮದ ಹನುಮನಗರದಲ್ಲಿ ನಡೆದಿದೆ. ಬಂಟ್ವಾಳ ತುಂಬೆ ನಿವಾಸಿ ಸಮೀರ್ (31) & ಮತ್ತೋರ್ವ ಬಂಟ್ವಾಳ ಗೂಡಿನ ಬಳಿ ನಿವಾಸಿ ಮೊಹಮ್ಮದ್ ಅಸೀಫ್ (35) ಬಂಧಿತರಾಗಿದ್ದಾರೆ.
ನಿನ್ನೆ ಸಂಜೆ, ರಾಷ್ಟ್ರೀಯ ಹೆದ್ದಾರಿ ಬಳಿ ಯಾರೋ ವ್ಯಕ್ತಿಗಳು ಅಕ್ರಮವಾಗಿ ನಿಷೇಧಿತ ಮಾದಕ ವಸ್ತುವನ್ನು ಮಾರಾಟ ಮಾಡಲು ವಶದಲ್ಲಿಟ್ಟುಕೊಂಡಿರುವ ಬಗ್ಗೆ ವಿಚಾರ ತಿಳಿದ ನಂತರ ಪೊಲೀಸ್ ಉಪ ನಿರೀಕ್ಷಕರಾದ ಮಂಜುನಾಥ ಟಿ, ಸಿಬ್ಬಂದಿಯೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾಗ ಇಬ್ಬರು ವ್ಯಕ್ತಿಗಳು KA-19-MN 3664 ನೇ ನೊಂದಣಿ ಸಂಖ್ಯೆಯ ಕಾರು ಮತ್ತು KA-19-AE-0166 ನೇ ನೊಂದಣಿ ಸಂಖ್ಯೆಯ ಆಟೋ ರಿಕ್ಷಾದ ಬಳಿ ಇಬ್ಬರು ನಿಂತುಕೊಂಡಿದ್ದರು.
ಅವರನ್ನು ವಿಚಾರಿಸಿದಾಗ ತಾವು ಅಧಿಕ ಹಣಗಳಿಸುವ ಉದ್ದೇಶದಿಂದ ನಿಷೇಧಿತ ಮಾದಕವಸ್ತುವಾದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವೇಳೆ ಕಾರನ್ನು ತಪಾಸಣೆ ನಡೆಸಿದಾಗ 450 ಗ್ರಾಂ. ಗಾಂಜಾ ಹಾಗೂ ರಿಕ್ಷಾದಲ್ಲಿ 360 ಗ್ರಾಂ 183/2025 50: 8(C), 20(B) ii (a) NDPS Act ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹೀಗಾಗಿ ವಾಹನಗಳನ್ನು ಹಾಗೂ 810 ಗ್ರಾಂ ಮಾದಕ ವಸ್ತು ಗಾಂಜಾವನ್ನು ಸ್ವಾಧೀನಪಡಿಸಲಾಗಿದೆ.
Scooter accident in Savanoor; Woman seriously injured- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











