ಬ್ರೇಕಿಂಗ್ ನ್ಯೂಸ್
ಕಡಬಕರ್ನಾಟಕ

ಸುಬ್ರಹ್ಮಣ್ಯದಲ್ಲಿ ಮರದ ಕೆಳಗೆ ಮಲಗಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಸುಬ್ರಹ್ಮಣ್ಯ: Tulu Times | ಸುಬ್ರಹ್ಮಣ್ಯದಲ್ಲಿ ಮರದ ಕೆಳಗೆ ಮಲಗಿದ್ದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ  ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕು ಕೂತ್ಕುಂಜ ಗ್ರಾಮದ ಕಲ್ಕ ನಿವಾಸಿ ದೇವಿ ಪ್ರಸಾದ್ ಎಂದು ಗುರುತಿಸಲಾಗಿದೆ.

ಮೃತದೇಹ ಪತ್ತೆಯಾದ ಜಾಗ ಯಾವುದು..?

ಸುಬ್ರಹ್ಮಣ್ಯದ  ಹಳೆಯ ಬ್ರಹ್ಮರಥ ಇರುವ ಸ್ಥಳದ ಮರದ ಕೆಳಗೆ ಮಲಗಿದ್ದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾಗಿದೆ.  ಸವಾರಿ ಮಂಟಪದ ಎದುರು ಇರುವ ಕುಕ್ಕೆಲಿಂಗ ಕಟ್ಟಡದ ಅಂಗಳದಲ್ಲಿ ಹಳೆಯ ಬ್ರಹ್ಮರಥ ಇರುವ ಜಾಗದಲ್ಲಿ ಮರದ ಕೆಳಗೆ ಮಲಗಿದ್ದ ಸ್ಥಿತಿಯಲ್ಲಿ, ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬರುತ್ತದೆ.

ಇವರಿಗೆ ಕಳೆದ  17 ವರ್ಷಗಳ ಹಿಂದೆ ಪಡ್ಡಿನಂಗಡಿಯ ಯುವತಿ ಜೊತೆ ಮದುವೆಯಾಗಿ ಎರಡು ಮಕ್ಕಳೊಂದಿಗೆ ವಾಸವಿದ್ದರು ಎನ್ನಲಾಗಿದೆ. ಈತ  ತಾಯಿ ಮನೆಯನ್ನು ಬಿಟ್ಟು ಬಂದಿದ್ದಎನ್ನಲಾಗಿದೆ.  4 ತಿಂಗಳ ಹಿಂದೆ ತನ್ನ ತಾಯಿಯನ್ನು ನೋಡಲು ಮನೆಗೆ ಬಂದು ನಂತರ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆ ಬಿಟ್ಟು ಹೋಗಿದ್ದ. ನಂತರ  ಡಿ 11 ರಂದು ಸಂಬಂಧಿಕರ ಮೂಲಕ ಸುಬ್ರಹ್ಮಣ್ಯದಲ್ಲಿ ರಕ್ತ ವಾಂತಿ ಮಾಡಿಕೊಂಡ ವಿಷಯ ತಿಳಿದು, ಸ್ಥಳಕ್ಕೆ ಮೃತರ ತಾಯಿ ಸಹಿತ ಸಂಬಂಧಿಕರು ಬಂದಿದ್ದರು.  ಮೃತರ ತಾಯಿ ಲಕ್ಷ್ಮೀ ನೀಡಿದ ದೂರಿನ ಅನ್ವಯ  ಮದ್ಯಪಾನ ಸೇವನೆ ಮಾಡುವ ಅಭ್ಯಾಸವಿರುವುದಾಗಿ ದೂರಿನಲ್ಲಿ ಹೇಳಿಕೆ ನೀಡಿದ್ಬದರು. ಈ ಬಗ್ಗೆ  ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯುಡಿಆರ್ ನಂಬ್ರ: 37/2025 ಕಲಂ: 194(3)(IV) BNSS. ಯಂತೆ ಪ್ರಕರಣ ದಾಖಲಾಗಿದೆ.

ತಾವರೆಕೆರೆಗೆ ಬಿದ್ದು ಮಗು ಸಾವು!

ಪ್ರತ್ಯೇಕ ಪ್ರಕರಣದಲ್ಲಿ  ಸಾವು ಹೇಗೆ ಬರುತ್ತೆ ಅಂತ ಹೇಳೋಕೆ ಅಸಾಧ್ಯ ಕೆಲವೊಮ್ಮೆ ಎಷ್ಟು ಜಾಗರೂಕರಾಗಿ ಇದ್ರೂ ಹರಾತ್ ಜೀವ ಹೋಗುತ್ತೆ ಅದೇ ರೀತಿ ಪುತ್ತೂರು ಸಮೀಪದ ಬನ್ನೂರು ನೀರ್ಪಾಜಿಯಲ್ಲಿ ಪುಟಾಣಿ ಮಗುವೊಂದು ತಾವರೆ ಗಿಡ ಇದ್ದ ನೀರಿನ ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ

ಸಾಮಾನ್ಯವಾಗಿ ಪುಟಾಣಿ ಮಕ್ಕಳು ಊಟ ಮಾಡಲು ಕಷ್ಟ ಪಡುತ್ತಾರೆ. ಹೀಗಾಗಿ ತಾಯಂದಿರು ಮನೆಯ ಅಂಗಳದಲ್ಲಿ ಆಟ ಆಡಿಸಿಕೊಂಡು ಮನೆಯಂಗಳದಲ್ಲಿ ಮಗುವಿಗೆ ಊಟ ಕೊಡುತ್ತಾರೆ. ಇದೇ ರೀತಿಯಾಗಿ ತಾಯಿ ಮಗುವಿಗೆ ಊಟ ತಿನ್ನಿಸಿ, ಮನೆಯೊಳಗೆ ಹೋಗಿ ಬರುತ್ತಿದ್ದಂತೆ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಹುಡುಕಾಡಿದಾಗ ಮನೆಯಂಗಳದ ತಾವರೆ ನಿಮಿನ ಟ್ಯಾಂಕ್‌ಗೆ ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ಮಗುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು, ಆದ್ರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಗು ಮೃತಪಟ್ಟಿದೆ ಎನ್ನಲಾಗಿದೆ.

Body found lying under a tree in Subrahmanya- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 124

You cannot copy content of this page