ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಪುತ್ತೂರು

ಪುತ್ತೂರಿನಲ್ಲಿ ನೀರಿನ ಟ್ಯಾಂಕ್ ಗೆ ಬಿದ್ದು ಮಗು ಸಾವು

ಪುತ್ತೂರು: Tulu Times | ಸಾವು ಹೇಗೆ ಬರುತ್ತೆ ಅಂತ ಹೇಳೋಕೆ ಅಸಾಧ್ಯ. ಕೆಲವೊಮ್ಮೆ ಎಷ್ಟು ಜಾಗರೂಕರಾಗಿ ಇದ್ರೂ ಹಠಾತ್‌ ಜೀವ ಹೋಗುತ್ತೆ ಅದೇ ರೀತಿ ಪುತ್ತೂರು ಸಮೀಪದ ಬನ್ನೂರು ನೀರ್ಪಾಜಿಯಲ್ಲಿ ಪುಟಾಣಿ ಮಗುವೊಂದು  ತಾವರೆ ಗಿಡ ಇದ್ದ ನೀರಿನ ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿರುವ  ಹೃದಯವಿದ್ರಾವಕ ಘಟನೆ ನಡೆದಿದೆ.

ಇದನ್ನೂ ಓದಿ: ಈ ತರಕಾರಿಗಳನ್ನು ಅಡುಗೆಗೆ ಉಪಯೋಗಿಸುವ ಮುನ್ನ ಎಚ್ಚರ !

ಘಟನೆ ನಡೆದದ್ದು ಹೇಗೆ..?

ಸಾಮಾನ್ಯವಾಗಿ ಪುಟಾಣಿ ಮಕ್ಕಳು ಊಟ ಮಾಡಲು ಕಷ್ಟ ಪಡುತ್ತಾರೆ. ಹೀಗಾಗಿ ತಾಯಂದಿರು ಮನೆಯ ಅಂಗಳದಲ್ಲಿ ಆಟ ಆಡಿಸಿಕೊಂಡು ಮನೆಯಂಗಳದಲ್ಲಿ ಮಗುವಿಗೆ ಊಟ ಕೊಡುತ್ತಾರೆ.ಇದೇ ರೀತಿಯಾಗಿ ತಾಯಿ ಮಗುವಿಗೆ ಊಟ ತಿನ್ನಿಸಿ,  ಮನೆಯೊಳಗೆ ಹೋಗಿ ಬರುತ್ತಿದ್ದಂತೆ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಹುಡುಕಾಡಿದಾಗ ಮನೆಯಂಗಳದ ತಾವರೆ ನೀರಿನ ಟ್ಯಾಂಕ್‌ಗೆ ಬಿದ್ದಿರುವುದು ಕಂಡು ಬಂದಿದೆ. ತಕ್ಷಣವೇ ಮಗುವನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು, ಆದ್ರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಗು ಮೃತಪಟ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ: ಅತಿಯಾಗಿ ನಿಮ್ಮ ಕೂದಲು ಉದುರುತ್ತಿದ್ಯಾ..? ಪರಿಹಾರ ಇಲ್ಲಿದೆ

ಸುಬ್ರಹ್ಮಣ್ಯ ಅರ್ಚಕರ ಕಾರಿಗೆ ಕಡವೆ ಡಿಕ್ಕಿ!

ಪ್ರತ್ಯೇಕ ಪ್ರಕರಣದಲ್ಲಿ, ಸುಬ್ರಹ್ಮಣ್ಯ ಬಳ ಸಮೀಪದ ಎಡೋಣಿ ಎಂಬಲ್ಲಿ ಅರ್ಚಕರ ಬೈಕ್ ಗೆ ಕಡವೆ ಡಿಕ್ಕಿಯಾದ ಪರಿಣಾಮ ಪಂಜ ಗ್ರಾಮದ ವಾಸು ಭಟ್ ಎಂಬ ಅರ್ಚಕರಿಗೆ ಗಂಭೀರ ಗಾಯಗಳಾಗಿವೆ. ಸುಮಾರು ನಾಲ್ಕರಿಂದ ಐದು ಗಂಟೆಯ ವೇಳೆಗೆ ವಾಸು ಭಟ್ ಅವರು ಪಂಜದ ತನ್ನ ಮನೆಯಿಂದ ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ಸರ್ಪಸಂಸ್ಕಾರ ಪೂಜೆ ಮಾಡಲು ಬರುತ್ತಿರುವ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ತೆಂಗು ಬೆಳೆಗಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ

ಅಪಘಾತ ಸ್ಥಳದಲ್ಲಿ ಪ್ರಾಣಿಯ ರೋಮದಂತಿರುವ ಕುರುಹುಗಳ ಕಂಡು ಬಂದಿದ್ದು ಕಡವೆಯಂತಿರುವ ಕಾಡು ಪ್ರಾಣಿ ಢಿಕ್ಕಿ ಹೊಡೆದಿರುವುದು ಶಂಕೆ ವ್ಯಕ್ತವಾಗಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುವನ್ನು ಸ್ಥಳೀಯರು ತಕ್ಷಣವೇ ಆಂಬುಲೆನ್ಸ್ ಮೂಲಕ ಪುತ್ತೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಇದೀಗ ತುರ್ತು ಚಿಕಿತ್ಸೆಗೆ ಅವರನ್ನು ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Child dies after falling into water tank in Puttur- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess‌

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page