ಬ್ರೇಕಿಂಗ್ ನ್ಯೂಸ್
ಕಡಬಕರಾವಳಿಕರ್ನಾಟಕ

ಸುಬ್ರಹ್ಮಣ್ಯದಲ್ಲಿ ಅರ್ಚಕರ ಬೈಕ್ ಗೆ ಕಡವೆ ಡಿಕ್ಕಿ..ಗಂಭೀರ ಗಾಯ

ಸುಬ್ರಮಣ್ಯ:Tulu Times | ಸುಬ್ರಹ್ಮಣ್ಯ ಬಳ್ಪ ಸಮೀಪದ ಎಡೋಣಿ ಎಂಬಲ್ಲಿ  ಅರ್ಚಕರ ಬೈಕ್ ಗೆ ಕಡವೆ ಡಿಕ್ಕಿಯಾದ ಪರಿಣಾಮ ಪಂಜ ಗ್ರಾಮದ ವಾಸು ಭಟ್ ಎಂಬ ಅರ್ಚಕರಿಗೆ ಗಂಭೀರ ಗಾಯಗಳಾಗಿವೆ. ಸುಮಾರು ನಾಲ್ಕರಿಂದ ಐದು ಗಂಟೆಯ ವೇಳೆಗೆ ವಾಸು ಭಟ್ ಅವರು ಪಂಜದ ತನ್ನ ಮನೆಯಿಂದ ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ಸರ್ಪಸಂಸ್ಕಾರ ಪೂಜೆ ಮಾಡಲು ಬರುತ್ತಿರುವ ಅಪಘಾತ ಸಂಭವಿಸಿದೆ.

ಅಪಘಾತ ಸ್ಥಳದಲ್ಲಿ ಪ್ರಾಣಿಯ ರೋಮದಂತಿರುವ ಕುರುಹುಗಳ ಕಂಡು ಬಂದಿದ್ದು,  ಕಡವೆಯಂತಿರುವ ಕಾಡು ಪ್ರಾಣಿ ಢಿಕ್ಕಿ ಹೊಡೆದಿರುವುದು ಶಂಕೆ ವ್ಯಕ್ತವಾಗಿದೆ.  ಗಂಭೀರವಾಗಿ ಗಾಯಗೊಂಡ ಗಾಯಾಳುವನ್ನು ಸ್ಥಳೀಯರು ತಕ್ಷಣವೇ ಆಂಬುಲೆನ್ಸ್‌ ಮೂಲಕ ಪುತ್ತೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು.  ಇದೀಗ ತುರ್ತು ಚಿಕಿತ್ಸೆಗೆ ಅವರನ್ನು ಮಂಗಳೂರು ಕೆ.ಎಸ್‌. ಹೆಗ್ಡೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಹನಿಟ್ರ್ಯಾಪ್’ ಗೆ ಬಲಿಯಾಗಿ ಯುವಕನೊಬ್ಬ ಬೆತ್ತಲಾಗಿ ಓಡಿದ!

ಪ್ರತ್ಯೇಕ ಪ್ರಕರಣದಲ್ಲಿ, ಮಡಿಕೇರಿಯಲ್ಲಿ ಹನಿಟ್ರ್ಯಾಪ್’ ಗೆ ಬಲಿಯಾಗಿ ಯುವಕನೊಬ್ಬ ಬೆತ್ತಲಾಗಿ ಓಡಿ ಬಂದಿರುವ ಘಟನೆ ನಡೆದಿದ್ದು ಇದೀಗ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಘಟನೆಯ ಹಿನ್ನೆಲೆ ಏನು..?

ಮಹೇಶ್ ಎನ್ನುವ ಯುವಕ ಫೇಸ್ಟುಕ್ ಗೆಳತಿಗಾಗಿ ಮಡಿಕೇರಿಗೆ ಬಂದು ಹೋಂ ಸ್ಟೇನಲ್ಲಿ ಹನಿ ಟ್ರ್ಯಾಪ್ ಮಾಡಿರುವ ಯುವಕ ಉಳಿದುಕೊಂಡಿದ್ದ ಹನಿ ಟ್ರ್ಯಾಪಿಗೆ ಒಳಗಾಗಿ ಮಹೇಶ್ ಬೆತ್ತಲಾಗಿ ಹೋಂ ಸ್ಟೇ ನಿಂದ ಬೆತ್ತಲಾಗಿ ಹೊರಗಡೆ ಓಡಿ ಬಂದಿದ್ದನ್ನು ಕಂಡು ಜನ ಶಾಕ್ ಆಗಿದ್ದಾರೆ. ತಕ್ಷಣ ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಡಿಕೇರಿ ಮೂಲದ ಮಹಿಳೆಯ ಜೊತೆಗೆ ಮಹೇಶ್ ಸ್ನೇಹ ಬೆಳೆಸಿದ್ದಾಳೆ, ಮಹೇಶ್‌ಗೆ ಹಾಗೂ ಮಹಿಳೆ ಫೇಸ್ಟುಕ್ ನಲ್ಲಿ ಪರಿಚಯವಾಗಿದ್ದರು. ಮಹಿಳೆ ಈತನನ್ನು ಮಡಿಕೇರಿಗೆ ಕರೆದಿದ್ದಳು, ಹಾಗಾಗಿ ಈತ ಬಂದಿದ್ದ ಮಂಗಳದೇವಿ ನಗರದಲ್ಲಿ ಇರುವ ಹೋಂ ಸ್ಟೇಗೆ ಮಹೇಶ್ ಬಂದಿದ್ದಾನೆ. ಗ್ರೀ ಹೋಂಸ್ಟೇನಲ್ಲಿ ಮಹೇಶ್‌ ಹನಿ ಟ್ರ್ಯಾಪ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ಸಹ ಕಿತ್ತುಕೊಂಡಿದ್ದಾರೆ. ಕೊನೆಗೆ ನಾನು ಅಲ್ಲಿಂದ ಓಡಿ ಬಂದಿದ್ದೇನೆ ಎಂದು ಮಹೇಶ್ ಹೇಳಿಕೊಂಡಿದ್ದಾನೆ.

ಎರಡು ಲಕ್ಷ ರೂ. ಬೆಲೆ ಬಾಳುವ ಗಿಳಿಯ ರಕ್ಷಣೆಗೆಂದು ಹೊರಟ ವ್ಯಕ್ತಿಯು ಶವವಾದ!

ಪ್ರತ್ಯೇಕ ಪ್ರಕರಣದಲ್ಲಿ ಎರಡು ಲಕ್ಷ ರೂ. ಬೆಲೆ ಬಾಳುವ ಗಿಳಿಯ ರಕ್ಷಣೆಗೆಂದು ಹೊರಟಿ ವ್ಯಕ್ತಿಯು ಶವವಾಗಿದ್ದಾನೆ. ಗಿಳಿಯಂದ್ರೆ ಆತನಿಗೆ ಅಚ್ಚುಮೆಚ್ಚು ಅದೇ ಪಕ್ಷಿ ಮನೆಯಿಂದ ಹಾರಿ ಪಕ್ಕದಲ್ಲಿದ್ದ ವಿದ್ಯುತ್ ಕಂಬದ ಮೇಲೆ ಕುಳಿತಿತ್ತು. ಆ ಗಿಳಿಯನ್ನು ರಕ್ಷಿಸಲು ಹೋಗಿ ಯುವಕ ಪ್ರಾಣವನ್ನೇ ಬಿಟ್ಟಿದ್ದಾನೆ.

A hawk hits a priest’s bike in Subrahmanya, causing serious injuries – ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 170

You cannot copy content of this page