ಜೀವನಶೈಲಿ: Tulu Times | ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಜೀವನಶೈಲಿಯ ಕಾರಣದಿಂದ ನಮ್ಮ ತಲೆಕೂದಲು ಉದುರುವ ಸಮಸ್ಯೆ ಬಿಟ್ಟು ಬಿಡದೆ ಕಾಡುತ್ತದೆ. ಹೀಗಾಗಿ, ನಮ್ಮ ತಲೆಕೂದಲು ಉದುರುವ ಸಮಸ್ಯೆಗೆ ಕಾರಣ ಏನು ನೋಡೋಣ ಈ ಸ್ಟೋರಿಲಿ..
ಇದನ್ನೂ ಓದಿ: ಮತ್ತೆ ದೆಹಲಿಯತ್ತ ಪ್ರಯಾಣ ಬೆಳೆಸಿದ ಡಿಕೆ ಶಿವಕುಮಾರ್.! ಏಕೆ ಗೊತ್ತಾ?
ಈ ಆಹಾರಗಳ ಸೇವನೆ ಬಿಟ್ಟುಬಿಡಿ!
ಲವು ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದರಿಂದಲೂ ಕೂದಲು ಉದುರಬಹುದು. ಎಣ್ಣೆ, ರಾಸಾಯನಿಕ ಶಾಂಪೂಗಳ ಬಳಕೆ, ಒತ್ತಡ ಮತ್ತು ದುರ್ಬಲ ಜೀವನಶೈಲಿ ಈ ಸಮಸ್ಯೆಗೆ ಪ್ರಮುಖ ಕಾರಣ. ನಾವು ಸೇವಿಸುವ ಆಹಾರ ಕೂದಲು ಉದುರುವಿಕೆಗೆ ಕಾರಣವಾಗಿದೆ. ಇತ್ತೀಚಿನ ಪ್ರತಿನಿತ್ಯ ನಾವು ಕೆಲವು ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕೂದಲಿನ ಬೇರುಗಳು ದುರ್ಬಲಗೊಳ್ಳುತ್ತವೆ. ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚಾಗುತ್ತದೆ.
ಇದನ್ನೂ ಓದಿ: ತೆಂಗು ಬೆಳೆಗಾರರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ
ಸಕ್ಕರೆ ಅಂಶ ಕಡಿಮೆ ಮಾಡಿ!
ಸಕ್ಕರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಮತ್ತು ಆಂಡ್ರೊಜೆನ್ ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ಕೂದಲಿನ ಉದುರುವಿಕೆಗೆ ಕಾರಣವಾಗುತ್ತದೆ. ಫಾಸ್ಟ್ ಫುಡ್ ಮತ್ತು ಕರಿದ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿ ಅನಾರೋಗ್ಯಕರ ಕೊಬ್ಬನ್ನು ಹೊಂದಿದ್ದು ಇವು ಕೂದಲನ್ನು ದುರ್ಬಲಗೊಳಿಸುತ್ತವೆ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಹಾರಗಳು DHT ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತವೆ.
ಇದನ್ನೂ ಓದಿ: ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ! ತಿರುವನಂತಪುರಂ ಪಾಲಿಕಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ
ಹೆಚ್ಚು ಕೆಫೀನ್ ಸೇವನೆಯಿಂದ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಹೆಚ್ಚು ಉಪ್ಪು ಸೇವಿಸುವುದರಿಂದ ದೇಹವು ನಿರ್ಜಲೀಕರಣಗೊಳ್ಳುವುದಲ್ಲದೆ, ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ. ಮದ್ಯಪಾನ ದೇಹದಲ್ಲಿ ಸತು ಮತ್ತು ಇತರ ಅಗತ್ಯ ಪೋಷಕಾಂಶಗಳ ಕೊರತೆಗೆ ಕಾರಣವಾಗುತ್ತದೆ. ಸತುವಿನ ಕೊರತೆಯು ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ನಿಮ್ಮ ಕೂದಲನ್ನು ಶುಭ್ರವಾಗಿಟ್ಟುಕೊಂಡರೆ ನಿಮ್ಮ ಕೂದಲು ಉದುರುವಿಕೆಗೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: ಪಂಚಾಯಿತಿ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ: ಅರುಣ್ ಕುಮಾರ್ ಪುತ್ತಿಲ ಆರೋಪ!
Is your hair falling out excessively? Here’s the solution-ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











