ಸಿನಿಮಾ: Tulu Times | ಕಾಂತಾರ ಚಾಪ್ಟರ್-1 ಯಶಸ್ಸಿನ ಹಿನ್ನೆಲೆ ನಟ ರಿಷಬ್ ಶೆಟ್ಟಿ ಹರಕೆ ನೇಮೋತ್ಸವ ವಿವಾದ ಸೃಷ್ಟಿಯಾಗಿತ್ತು, ಇದೀಗ ಈ ವಿವಾದಕ್ಕೆ ದೈವಸ್ಥಾನದ ಆಡಳಿತ ಸಮಿತಿ ಸ್ಪಷ್ಟನೆ ನೀಡಿದೆ. ದೇವಸ್ಥಾನದ ನೇಮೋತ್ಸವದಲ್ಲಿ ಸಂಪ್ರದಾಯ ಮೀರಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಮಂಗಳೂರಿನ ಬಾರೆಬೈಲ್ ಜಾರಂದಾಯ ಬಂಟ, ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಹೇಳಿಕೆ ನೀಡಿದ ದೈವ ನರ್ತಕ ಮುಖೇಶ್ ಹಿರಿಯರು ಹೇಳಿದ ಉಪದೇಶದ ಪ್ರಕಾರವೇ ದೈವ ನರ್ತನ ಮಾಡಿದ್ದೇನೆ ಎಂದು ಸ್ಪಷ್ಟೀಕರಿಸಿದ್ದಾರೆ. ನಾವು ಕಟ್ಟುಕಟ್ಟಳೆ ಪ್ರಕಾರವೇ ನಡೆದುಕೊಂಡಿದ್ದೇವೆ. ಈ ವಿಚಾರದಲ್ಲಿ ದೈವ ನರ್ತಕರ ಮೇಲೆ ಯಾವುದೇ ಸಂಶಯವಿಲ್ಲ. ಎಣ್ಣೆಬೂಳ್ಯದಲ್ಲಿ ದೈವವೇ ನರ್ತನ ಮಾಡುತ್ತದೆ. ನಮ್ಮ ದೈವ ಅಪವಾದದಿಂದ ಮುಕ್ತ ಎಂದಿದ್ದಾರೆ.
ರಿಷಬ್ ಶೆಟ್ಟಿ ಕುಟುಂಬ ತಮ್ಮ ಮಗನ ಹುಟ್ಟುಹಬ್ಬಕ್ಕಾಗಿ ನೇಮೋತ್ಸವ ಸೇವೆ ಕೊಟ್ಟಿದ್ದರು. ಈ ವೇಳೆ ರಿಷಬ್ ಬೇರೆಲ್ಲೂ ನಡೆಯದ ಚಮತ್ಕಾರ ನಮ್ಮ ಕ್ಷೇತ್ರದಲ್ಲಿ ಆಗಿದೆ ಎಂದಿದ್ದರು. ದೀಪಾವಳಿ ವೇಳೆ ದೈವದ ಅನುಮತಿ ಕೇಳಿಯೇ ಹರಕೆ ನೇಮಕ್ಕೆ ಒಪ್ಪಿಗೆ ಪಡೆದಿದ್ದೆವು. ಪಂಜುರ್ಲಿ ನೇಮ, ಜಾರಾಂದಾಯಗೆ ತುಡರ ಬಲಿ ನೀಡಲು ದೈವ ಒಪ್ಪಿಗೆ ನೀಡಿತು ಎಂದರು.
ವಿವಾದ ಹುಟ್ಟು ಹಾಕಿರುವವರ ಬಗ್ಗೆ ದೂರು ದಾಖಲು!
ನಮಗೆ ನಮ್ಮ ದೈವ ನರ್ತಕರ ಮೇಲೆ ಯಾವುದೇ ಅನುಮಾನವಿಲ್ಲ.ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಚರ್ಚೆಗಳು ನಡೆಯುತ್ತಿವೆ. ಎಣ್ಣೆಬೂಳ್ಯ ಸಂಧರ್ಭದಲ್ಲಿ ದೈವವೇ ನರ್ತನ ಮಾಡುತ್ತದೆ ಎಂಬ ನಂಬಿಕೆ ನಮ್ಮದು. ಫೆಬ್ರವರಿಯಲ್ಲಿ ಮತ್ತೊಂದು ಹರಕೆಯ ನೇಮ ನಡೆಯಲಿದೆ. ವಿವಾದ ಹುಟ್ಟು ಹಾಕಿರುವವರ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿನ ಚರ್ಚೆಗಳಿಗೆ ದೈವಗಳೇ ಉತ್ತರ ನೀಡುತ್ತವೆ. ನಟ ರಿಷಬ್ ಶೆಟ್ಟಿ ಹರಕೆ ನೇಮೋತ್ಸವ ವಿವಾದ ಕುರಿತಂತೆ ಮಂಗಳೂರಿನ ಬಾರೆಬೈಲ್‌ನ ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿ ಸ್ಪಷ್ಟನೆ ನೀಡಿದೆ.
What does the governing committee have to say about the Rishabh Shetty Harake Nemotsava?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











