ಆರೋಗ್ಯ : Tulu Times | ನಮ್ಮಲ್ಲಿ ರಸ್ತೆಬದಿಯ ಅಂಗಡಿಗಳಲ್ಲಿ, ಜಾತ್ರೆಗಳಲ್ಲಿ, ಬೇಸಿಗೆ ದಿನಗಳಲ್ಲಿ ಎಲ್ಲೆಡೆ ಹೆಚ್ಚು ಕಂಡುಬರುವ ಆರೋಗ್ಯಕರ ಪಾನೀಯವೆಂದರೆ ಕಬ್ಬಿನ ರಸ. ಸಿಹಿಯಾದ ರುಚಿ, ತಕ್ಷಣ ಶಕ್ತಿ ನೀಡುವ ಗುಣ ಹಾಗೂ ದೇಹಕ್ಕೆ ಅಗತ್ಯವಾದ ಪೋಷಕಾಂಶ, ಎನರ್ಜಿ ನೀಡುವ ಕಾರಣದಿಂದ ಕಬ್ಬಿನ ರಸವನ್ನು ನೈಸರ್ಗಿಕ ಎನರ್ಜಿ ಡ್ರಿಂಕ್ ಎಂದು ಕರೆಯಲಾಗುತ್ತದೆ.
ಕಬ್ಬಿನ ರಸವು ಸ್ವಲ್ಪ ಪ್ರಮಾಣದ ನಾರಿನಂಶವನ್ನು ಹೊಂದಿದ್ದು, ಇದು ದೇಹದಲ್ಲಿ ನೀರು ಮತ್ತು ಎಲೆಕ್ಟ್ರೋಲೈಟ್ ಕೊರತೆಯನ್ನು ತಡೆಯುತ್ತದೆ. ಕಬ್ಬಿನ ರಸವು ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ಬೇಸಿಗೆಯಲ್ಲಿ ಬೆವರು ಮತ್ತು ಸೂರ್ಯನ ಬೆಳಕು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ಶಕ್ತಿಯನ್ನು ಕಡಿಮೆ ಮಾಡುತ್ತದೆ ಈ ಕಾರಣ ತಾಜಾ ಕಬ್ಬಿನ ರಸವು ನಿಮ್ಮ ದೇಹವನ್ನು ರಿಫ್ರೆಶ್ ಮಾಡಲು ಆರೋಗ್ಯಕರ ಮಾರ್ಗವಾಗಿದೆ.
ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧ ;
ಕಬ್ಬಿನ ರಸದಲ್ಲಿ ಪೊಟ್ಯಾಸಿಯಮ್ ಇರುತ್ತದೆ. ಇದು ದೇಹದಲ್ಲಿ ಎಲೆಕ್ಟ್ರೋಲೈಟ್‌ಗಳನ್ನು ನಿರ್ವಹಿಸಿ, ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಕಬ್ಬಿನ ರಸವು ಸ್ವಲ್ಪ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಇದು ದೇಹದಲ್ಲಿ ನೀರು ಮತ್ತು ಎಲೆಕ್ಟ್ರೋಲೈಟ್ ಕೊರತೆಯನ್ನು ತಡೆಯುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ. ಕಬ್ಬಿನ ರಸವು ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದೆ. ಇದು ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಇತರ ಎಲೆಕ್ಟ್ರೋಲೈಟ್‌ಗಳಲ್ಲಿ ಸಮೃದ್ಧವಾಗಿದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಕಬ್ಬಿನ ರಸವು ಅತ್ಯುತ್ತಮವಾಗಿದೆ ಎಂದು ಹೇಳಲಾಗುತ್ತದೆ.
ಇದು ಮೂತ್ರ ವಿಸರ್ಜನೆಗೆ ಸಹಾಯ ಮಾಡುವುದಲ್ಲದೇ ಮಧುಮೇಹ ಇರುವವರು ಕಬ್ಬಿನ ರಸವನ್ನು ಕುಡಿಯುವುದು ಸೂಕ್ತವಲ್ಲ. ಇದರಲ್ಲಿರುವ ಸಕ್ಕರೆ ಅಂಶವು ಇದ್ದಕ್ಕಿದ್ದಂತೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ, ಕಬ್ಬಿನ ರಸ ಪ್ರಕೃತಿ ನೀಡಿರುವ ಅತ್ಯುತ್ತಮ, ಆರೋಗ್ಯಕರ ಮತ್ತು ಶಕ್ತಿದಾಯಕ ಪಾನೀಯಗಳಲ್ಲಿ ಒಂದು. ಇದು ದೇಹವನ್ನು ತಂಪಾಗಿಸಿ, ಶಕ್ತಿ ತುಂಬಿಸಿ, ಅನೇಕ ರೀತಿಯಲ್ಲಿ ಆರೋಗ್ಯ ಕಾಪಾಡುತ್ತದೆ. ಸಕ್ಕರೆ ಪಾನೀಯಗಳಿಗೆ ಪರ್ಯಾಯವಾಗಿ ನೈಸರ್ಗಿಕವಾಗಿ ದೊರೆಯುವ ಕಬ್ಬಿನ ರಸವೇ ಉತ್ತಮ ಆಯ್ಕೆಯಾಗಿದೆ. For this reason, refresh your body and health! – ತುಳು ಟೈಮ್ಸ್
ಇದನ್ನೂ ಓದಿ :ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ; ಪ್ರಾಂಶುಪಾಲನಿಗೆ ಧರ್ಮದೇಟು
=====
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/TxoTNdzv6vY?si=qtQxam8q85z8Dtw7











