ಸರ್ಕಾರ : Tulu Times | ಸರ್ಕಾರಿ ಪ್ರಾಯೋಜಿತ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗಣ್ಯರಿಗೆ ಸ್ಮರಣಿಕೆ, ಟ್ರೋಫಿ ಮತ್ತು ಇನ್ನಿತರೇ ಸ್ಮರಣಾರ್ಥ ವಸ್ತುಗಳನ್ನು ನೀಡುವುದು ನಿಯಮಿತ ಅಭ್ಯಾಸವಾಗಿರುತ್ತದೆ. ಈ ಪದ್ಧತಿಯು ಆರಂಭದಲ್ಲಿ ಸದ್ಭಾವನೆ ಮತ್ತು ಮೆಚ್ಚುಗೆಯ ಸಂಕೇತದ ಉದ್ದೇಶವಾಗಿದ್ದರೂ ಸಹ ಗಣ್ಯರನ್ನು ಸನ್ಮಾನಿಸುವ ಇಂತಹ ಅಭ್ಯಾಸವು ಆರ್ಥಿಕ ಮಿತವ್ಯಯ, ಪರಿಸರ ಸುಸ್ಥಿರತೆ ಮತ್ತು ಕೆಲವು ಕಳವಳಗಳಿಗೆ ಕಾರಣವಾಗಿದೆ.
ಪರಿಸರ ಕಾಳಜಿಯ ಉದ್ದೇಶಗಳನ್ನು ಈಡೇರಿಸುವಲ್ಲಿ ವಿಫಲ ;
ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ ಹಾರ, ತುರಾಯಿ, ಹಣ್ಣಿನ ಬುಟ್ಟಿ ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದೆಂದು ಬದಲಾಗಿ ಕನ್ನಡ ಪುಸ್ತಕಗಳನ್ನು ನೀಡಬಹುದೆಂದು ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಲಾಗಿದ್ದು, ಸುತ್ತೋಲೆಯನ್ನು ಕಳುಹಿಸಲಾಗಿದೆ. ಈ ಸುತ್ತೋಲೆಯ ಪ್ರಕಾರ, ಜೈವಿಕವಾಗಿ ವಿಘಟನೆಯಲ್ಲದ ಲ್ಯಾಮಿನೇಟೆಡ್ ಮರ, ಪ್ಲಾಸ್ಟಿಕ್, ಲೋಹ ಮತ್ತು ಗಾಜಿನಂತಹ ಮರುಬಳಕೆ ಮಾಡಲಾಗದ ವಸ್ತುಗಳಿಂದ ತಯಾರಿಸಲ್ಪಟ್ಟ ವಸ್ತುಗಳಿಂದ ಸುತ್ತಮುತ್ತಲಿನ ನೈಸರ್ಗಿಕ ಪರಿಸರದ ಅವನತಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ. ಈ ವಸ್ತುಗಳನ್ನು ಬೇರ್ಪಡಿಸುವುದು ಅಥವಾ ಮರುಬಳಕೆ ಮಾಡುವುದು ಕಷ್ಟಕರವಾಗಿದ್ದು, ಹೀಗೆ ನಿರಂತರವಾಗಿ ಶೇಖರಣೆಗೊಳ್ಳುವ ತ್ಯಾಜ್ಯವು ರಾಜ್ಯದ ಘನತ್ಯಾಜ್ಯ ನಿರ್ವಹಣಾ ಹೊರೆಯನ್ನು ಹೆಚ್ಚಿಸುವುದರೊಂದಿಗೆ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸಲು ಮತ್ತು ಅನಿವಾರ್ಯವಲ್ಲದ ತ್ಯಾಜ್ಯವನ್ನು ಕಡಿಮೆ ಮಾಡುವ ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ತದ್ವಿರುದ್ಧವಾಗುವುದಲ್ಲದೇ ಪರಿಸರ ಕಾಳಜಿಯ ಉದ್ದೇಶಗಳನ್ನು ಈಡೇರಿಸುವಲ್ಲಿ ವಿಫಲವಾಗುತ್ತದೆ.
ಅಂತೆಯೇ ವಿವಿಧ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳು ಸ್ಮರಣಿಕೆ ಮತ್ತು ಟ್ರೋಫಿಗಳ ಖರೀದಿಗೆ ವಾರ್ಷಿಕವಾಗಿ ಬೃಹತ್ ಮೊತ್ತವನ್ನು ಖರ್ಚು ಮಾಡುತ್ತಿದ್ದು, ಆರ್ಥಿಕ ದೃಷ್ಟಿಕೋನದಿಂದ ಇದೇ ಹಣವನ್ನು ಅಭಿವೃದ್ಧಿ ಆಧಾರಿತ ಚಟುವಟಿಕೆಗಳಿಗೆ ಉತ್ತಮವಾಗಿ ಬಳಸಿಕೊಳ್ಳಬಹುದಾಗಿರುತ್ತದೆ. ಇದಲ್ಲದೇ, ಗಣ್ಯರ ಅಥವಾ ಇಲಾಖಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಮಾಡಲಾಗುವ ಇಂತಹ ಅನಗತ್ಯ ಕಳಪೆ ವಸ್ತುಗಳ ಪುನರಾವರ್ತಿತ ಖರೀದಿಯಿಂದ ಅವುಗಳ ಸಂಗ್ರಹಣೆ, ನಿರ್ವಹಣೆ ಹಾಗೂ ವಿಲೇವಾರಿಯು ಕಠಿಣ ಸವಾಲಾಗಿ ಪರಿಣಮಿಸುತ್ತದೆ.
ಸ್ಥಳೀಯವಾಗಿ ರಚಿಸಲಾದ ಪರಿಸರ ಸ್ನೇಹಿ ಸ್ಮರಣಿಕೆ ;
ಸಸಿಗಳು, ಪುಸ್ತಕಗಳು, ಕೈ ಮಗ್ಗ ಉತ್ಪನ್ನಗಳು ಅಥವಾ ಸ್ಥಳೀಯವಾಗಿ ರಚಿಸಲಾದ ಪರಿಸರ ಸ್ನೇಹಿ ಸ್ಮರಣಿಕೆಗಳಂತಹ ಸಾಂಕೇತಿಕ ಪರ್ಯಾಯಗಳು ಸುಸ್ಥಿರ ಆಡಳಿತ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗೆ ರಾಜ್ಯದ ಬದ್ಧತೆಯನ್ನು ಪ್ರತಿಬಿಂಬಿಸುವಲ್ಲಿ ಉತ್ತಮ ಆಯ್ಕೆಯಾಗಿರುತ್ತವೆ ಎಂದು ಇಲ್ಲಿ ಉಲ್ಲೇಖಿಸಲಾಗಿದೆ. ಇದು ಉದ್ಘಾಟನೆಗಳು, ಶಿಲಾನ್ಯಾಸಗಳು, ಸಮ್ಮೇಳನಗಳು, ಕಾರ್ಯಾಗಾರಗಳು, ಸನ್ಮಾನ ಕಾರ್ಯಕ್ರಮಗಳು, ಸಾರ್ವಜನಿಕ ಸಭೆ ಮತ್ತು ಸಮಾರಂಭಗಳು ಮತ್ತು ರಾಜ್ಯ ಭೇಟಿಗಳಂತಹ ಎಲ್ಲಾ ಅಧಿಕೃತ ಚಟುವಟಿಕೆಗಳಿಗೆ ಅನ್ವಯಿಸುತ್ತದೆ. Cancellation of giving trophies and mementos at events: What is the alternative solution to this? – ತುಳು ಟೈಮ್ಸ್
ಇದನ್ನೂ ಓದಿ :ಮೊಬೈಲ್ ರಿಚಾರ್ಜ್ ಬೆಲೆಯಲ್ಲಿ ಮತ್ತೆ ಹೆಚ್ಚಳದ ನಿರ್ಧಾರ ನಿಜಾನಾ ?
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/z7Cg1RxfZUI?si=_td0VgNf95KJtYXF











