ಜೀವನಶೈಲಿ: Tulu Times | ಹೆಣ್ಣು ಸಂಸಾರದ ಕಣ್ಣು. ಪ್ರತಿಯೊಬ್ಬಳು ಹೆಣ್ಣು ತನ್ನ ಜೀವನವನ್ನು ಅರ್ಧದಷ್ಟು ಭಾಗ ತನ್ನ ಗಂಡ, ಸಂಸಾರ, ಮನೆ ಅಂತ ತಲೆಕೆಡಿಸಿಕೊಳ್ಳಬೇಕು. ಇಲ್ಲವಾದಲ್ಲಿ, ಒಂದಲ್ಲಾ ಒಂದು ಸಮಸ್ಯೆ ಉಂಟಾಗಿ ನಿಮ್ಮ ಜೀವನ ನಿಂತ ನೀರಾಗಿ ಬಿಡುತ್ತದೆ.
ತಪ್ಪು ನಿಮ್ಮದಿದ್ರೂ ಗಂಡು ಮಕ್ಕಳನ್ನೇ ದೂಷಿಸುತ್ತೀರಾ!
ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಕೇಸ್ ಗಳು ಹೆಚ್ಚಾಗುತ್ತಿವೆ. ಗಂಡ ಹೆಂಡತಿಯ ಮಧ್ಯೆ ಬಿರುಕುಗಳು ಉಂಟಾಗಿ ಈ ದಾಂಪತ್ಯ ಜೀವನವೇ ಬೇಡ ಎನ್ನುವ ಮಟ್ಟಿಗೆ ಜೀವನ ಸಾಗಿದೆ. ಇಲ್ಲಿ ಸಾಕಷ್ಟು ಜನ ಹೆಣ್ಣು ಮಕ್ಕಳು ಕೇವಲ ಗಂಡು ಮಕ್ಕಳನ್ನೇ ದೋಷಿಸುವವರು ಹೆಚ್ಚಾಗಿದ್ದಾರೆ. ಗಂಡ, ಹೆಂಡತಿ ದೂರವಾದರೆ ಗಂಡನಂತೆ ತಪ್ಪು. ಆತನ ಫ್ಯಾಮಿಲಿಯದ್ದೇ ತಪ್ಪು ಎನ್ನುವಂತಹ ಮಾತುಗಳನ್ನು ಹೇಳುತ್ತಾರೆ. ಆದರೆ, ನಿಜಕ್ಕೂ ಇಲ್ಲಿ ನಡೆದದ್ದೇನು? ಇಲ್ಲಿ ಯಾರದ್ದು ತಪ್ಪು? ಗಂಡನದ್ದಾ? ಅಥವಾ ಹೆಂಡತಿಯದ್ದಾ? ಎನ್ನುವುದನ್ನು ಕೂಲಂಕುಷವಾಗಿ ಉತ್ತರ ಹುಡುಕಬೇಕು.
ಇಬ್ಬರೂ ಕೂತು ತಾಳ್ಮೆಯಿಂದ ಮಾತನಾಡಿ..!
ಜೀವನ ಎಂದ ಮೇಲೆ ಹೊಂದಾಣಿಕೆ ಮುಖ್ಯ. ಅದರಲ್ಲೂ, ಮದುವೆ ಬಳಿಕದ ಜೀವನ ಅಂದಾಗ ಗಂಡ ಹಾಗೂ ಹೆಂಡತಿ ಇಬ್ಬರೂ ಸಾಮರಸ್ಯದಿಂದ ಬದುಕಬೇಕು. ಇಲ್ಲಿ ಹೆಂಡತಿಗೆ ಮನಸ್ಸಿಗೆ ನೋವಾದಾಗ ಗಂಡ ಸರಿದೂಗಿಸಬೇಕು. ಗಂಡನಿಗೆ ಬೇಸರವಾದಾದ ಹೆಂಡತಿ ಜೊತೆ ನಿಲ್ಲಬೇಕು. ಇಬ್ಬರೂ ಕೂಡ ನೀನೊಂದು ತೀರ.. ನಾನೊಂದು ತೀರ ಅಂದ್ರೆ ನಿಮ್ಮ ಜೀವನದಲ್ಲಿ ನೆಮ್ಮದಿ ಅನ್ನೋದು ಹತ್ತಿರಕ್ಕೂ ಸುಳಿಯೋದೆ ಇಲ್ಲ!
ಇನ್ನೊಬ್ಬರ ಸಂಸಾರದ ಬಗ್ಗೆಯೇ ನಿಮ್ಗೆ ಚಿಂತೆ ಯಾಕೆ ?
ಸಾಕಷ್ಟು ಜನ ಹೆಣ್ಣು ಮಕ್ಕಳು ತನ್ನ ತಪ್ಪಿದ್ದರೂ ಗಂಡನದೇ ತಪ್ಪು ಎನ್ನುವಂತಹ ಧೋರಣೆ ಮಾಡುತ್ತಾರೆ. ತಾನು ನಡೆದದ್ದೇ ದಾರಿ ಎನ್ನುವಂತ ತಪ್ಪು ಕಲ್ಪನೆಯನ್ನು ಇಟ್ಟುಕೊಂಡು ಗಂಡನಿಂದ ದೂರವಾಗಿ ಒಬ್ಬರೇ ಇರುತ್ತಾರೆ. ಮದುವೆಯಾದ ಹೆಣ್ಣು ಗಂಡ ಹಾಗೂ ಆತನ ಮನೆಯವರನ್ನು ಪ್ರೀತಿಯಿಂದ ಕಾಣಬೇಕು. ಜೊತೆಗೆ, ಕೆಲವೊಂದು ಹೊಂದಾಣಿಕೆಗಳನ್ನು ತಾನಾಗಿಯೇ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ, ನಿಮಗೆ ಸಮಾಜದಲ್ಲಿ ಯಾವುದೇ ಗೌರವಗಳು ಸಿಗುವುದು ಕಷ್ಟ. ಇನ್ನೊಬ್ಬರ ಬಗ್ಗೆ ಮಾತನಾಡುವ ನಿಮಗೆ ನಿಮ್ಮ ಸಂಸಾರ ಸರಿಪಡಿಸಿಕೊಳ್ಳೋಕೆ ಸಾಧ್ಯವೇ ಆಗಲ್ಲ. ಇನ್ನು ಬಹುತೇಕ ಹೆಣ್ಣು ಮಕ್ಕಳು ಗಂಡನ ಜೊತೆ ಬಾಳುವ ಯೋಗ್ಯತೆ ಇಲ್ಲದೆ, ತವರು ಮನೆಯ ಹಾದಿ ಹಿಡಿಯುತ್ತಾರೆ. ಇಲ್ಲಿ ತಾನೂ ನೆಮ್ಮದಿಯಲ್ಲಿ ಇಲ್ಲದೆ, ತನ್ನ ತವರು ಮನೆಗೆ ಬಂದು ಎಲ್ಲರನ್ನೂ ಕಂಗಾಲು ಮಾಡುತ್ತಾರೆ. ಹಾಗಾಗಿ,ಇಂತವರು ಮೊದಲು ಮದುವೆಯ ಅರ್ಥವನ್ನು ತಿಳಿದುಕೊಂಡು ನಂತರ ಮದುವೆಯಾಗಬೇಕು.
Why do married girls forget their responsibilities? – ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











