Puttur: ಮನೆಯಿಂದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಬಕ ಗ್ರಾಮದ ನೆಹರುನಗರ ಸಿಟಿಗುಡ್ಡೆಯ ಮನೆಯೊಂದರಲ್ಲಿ ಅ.12ರಂದು ಕಳ್ಳತನ ನಡೆದಿತ್ತು. ಮನೆಯಿಂದ ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಪುತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಟಿಗುಡ್ಡೆ ನಿವಾಸಿ ಪ್ರವೀಣ್ (27ವ) ಎಂಬವರು ಕಳವು ಮಾಡಿದ ಆರೋಪಿ.
ನೆಹರುನಗರ ಸಿಟಿಗುಡ್ಡೆಯ ಮೋಹನ್ ಎಂಬವರ ಮನೆಯಲ್ಲಿ ಯಾರು ಇಲ್ಲದ ವೇಳೆ ಹಾಡಹಗಲೇ ಕಳ್ಳತನ ನಡೆದಿತ್ತು. ಮನೆ ಮಂದಿ ಸಂಜೆ ಮನೆಗೆ ಬಂದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿತ್ತು. ಕಳ್ಳರು ಚಿನ್ನದ ಬಳೆ, ಕಿವಿಯೋಲೆ, ಚಿನ್ನದ ಸರ ಮತ್ತು ನಗದು ಹಣ ಕಳವು ಮಾಡಿದ್ದರು.
ಈ ಕುರಿತು ಮನೆಯ ರೇವತಿ ಎಂಬವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದ ಪೊಲೀಸರು ಸ್ಥಳೀಯ ನಿವಾಸಿ ಆರೋಪಿ ಪ್ರವೀಣ್ ಎಂಬವರು ವಶಕ್ಕೆ ಪಡೆದು ಆತನಿಂದ ಕಳವಾದ ಚಿನ್ನಾಭರಣ ಮತ್ತು ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದನ್ನೂ ಓದಿ: Mangaluru: ಯು.ಕೆ ಪೌಂಡ್ಸ್ ಆಸೆಗೆ ಬಿದ್ದು 79 ಲಕ್ಷ ಹಣ ಕಳೆದುಕೊಂಡ ಮಹಿಳೆ
ವೀಡಿಯೋ ಸುದ್ದಿಗಳನ್ನು ವೀಕ್ಷಿಸಲು ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ Subscribe ಮಾಡಿ:https://www.youtube.com/watch?v=JJgZvG3Eep4











