ಜೀವನಶೈಲಿ: Tulu Times | ನಾವು ಪ್ರತಿಯೊಬ್ಬರೂ ಸಿದ್ದಾಂತಗಳನ್ನು ಬಹಳಷ್ಟು ಬೇಗ ಇನ್ನೊಬ್ಬರಿಗೆ ಹೇಳುತ್ತೇವೆ. ಆದರೆ ಅದೆಷ್ಟೋ ಬಾರಿ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತೇವೆ. ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳದೆ ಎಡವುತ್ತೇವೆ. ಹಾಗಾದ್ರೆ ನಿಮ್ಮೊಳಗಿನ ನಿಮ್ಮನ್ನು ನೀವು ಕಾಣಬೇಕಾದರೆ ನಿಮ್ಮಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನೋಡೋಣ ಈ ಸ್ಟೋರಿಯಲ್ಲಿ..
ಇಂದು ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಕೆಲಸ, ಜೀವನವನ್ನು ತಾವೇ ನೋಡಿಕೊಳ್ಳುತ್ತಾರೆ. ಜೊತೆಗೆ ತಮಗೆ ಬೇಕಾದ ಜೀವನವನ್ನು ತಾವೇ ಬಿಂದಾಸ್ ಆಗಿ ಹಂಗಿಲ್ಲದೆ ನಡೆಸುತ್ತಾರೆ. ಯಾರದೇ ಹಂಗಿಲ್ಲದೆ ಜೀವನದಲ್ಲಿ ಯಶಸ್ಸನ್ನು ಪಡೆಯುವವರು ಹೆಚ್ಚಾಗಿದ್ದಾರೆ. ಇವೆಲ್ಲವನ್ನೂ ನೀವು ಕೂಡ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ ಕೆಲವೊಂದು ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.
ಓಶೋ ಏನಂತಾರೆ ಗೊತ್ತಾ..?
ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಸ್ವಾರ್ಥದ ಬದುಕನ್ನು ನಡೆಸುತ್ತಿದ್ದಾರೆ. ತಮಗೆ ಬೇಕಾದ ರೀತಿಯಾಗಿ ಕಟ್ಟುಪಾಡುಗಳನ್ನು ಇಟ್ಟುಕೊಂಡು ಗೊತ್ತಿದ್ದೋ.. ಗೊತ್ತಿಲ್ಲದೆಯೋ ತಪ್ಪು ಹಾದಿಯಲ್ಲಿಯೇ ನಡೆಯುತ್ತಾರೆ. ನಿಜಕ್ಕೂ ನೀವು ಯಾವತ್ತು ಸ್ವಾರ್ಥಿಗಳಾಗುತ್ತಿರಿ ಅವಾಗ ನಿಮ್ಮನ್ನು ನೀವು ಕಂಪ್ಲೀಟ್ ಆಗಿ ಅರ್ಥಮಾಡಿಕೊಳ್ಳಲು ಸಾಧ್ಯ. ಈ ಮಾತನ್ನು ಓಶೋ ಹೇಳುತ್ತಾರೆ. ಇವರು ಜಗತ್ತನ್ನು ನೀನು ಬದಲಾಯಿಸಲು ಪ್ರಯತ್ನಿಸುವೆಯಾ? ಆದರೆ ಅದಕ್ಕಿಂತ ಮೊದಲು ನಿನ್ನನ್ನು ನೀನು ಬದಲಾವಣೆ ಮಾಡಿಕೋ.. ನಿನ್ನ ಪ್ರಜ್ಞೆಯನ್ನು ನೀನು ಬದಲಾಯಿಸಿಕೊ..ಇದರಿಂದ ಜೀವನದಲ್ಲಿ ಮುನ್ನಡೆಯಬಹುದು. ಒಮ್ಮೆ ನೀನು ನಿನ್ನ ಪ್ರಜ್ಞೆಯ ಸ್ತರವನ್ನು ಹೆಚ್ಚಿಸಿದ್ದಲ್ಲಿ ಇದರಿಂದ ನಿನ್ನ ಬದಲಾವಣೆಗಳು ಸಾಧ್ಯ.
ನೀವು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಿ!
ಇಲ್ಲಿ ವಿಭಿನ್ನವಾದ ಮನಸ್ಥಿತಿಗಳು ಇವೆ. ಸಮಾಜಕ್ಕೆ ಬೇರೆ ತೆರನಾದ ಆಧ್ಯಾತ್ಮಿಕ ತರಂಗಗಳ ಅವಶ್ಯಕತೆ ಕೂಡ ಇದೆ. ಹಾಗಾಗಿ ಸಮಾಜವನ್ನು ನೀನು ಪರಿವರ್ತಿಸಬೇಕಾದರೆ ಮೊದಲು ನಿನ್ನನ್ನು ನೀನು ಬದಲಾವಣೆ ಮಾಡಿಕೋ ಮಿಕ್ಕಿದ್ದೆಲ್ಲ ನಂತರ! ನಿಮ್ಮನ್ನು ನೀವು ಪ್ರೀತಿಸಿ. ಇದು ಸ್ವಾರ್ಥದ ಎರಡನೆಯ ನಿಯಮ. ನಿಮ್ಮನ್ನು ನೀವು ಪ್ರೀತಿ ಮಾಡಿದ್ದಲ್ಲಿ ಬೇರೆಯವರನ್ನು ಕೂಡ ನೀವು ಪ್ರೀತಿಸಲು ಸಾಧ್ಯ. ಇದರಿಂದ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಕೂಡ ಬರುತ್ತದೆ. ನೀವು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕುವಿರಿ. ಹಾಗಾಗಿ, ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಂಡು ಮುನ್ನಡೆಯುವುದು ಒಳ್ಳೆಯದು.
First understand yourself..then see the change in others!- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











