ಬ್ರೇಕಿಂಗ್ ನ್ಯೂಸ್
ಕರ್ನಾಟಕ

ನೀವು ಟ್ರಾವೆಲ್ ಮಾಡುವಾಗ ವಾಂತಿ ಮಾಡುತ್ತೀರಾ..? ಈ ಸ್ಟೋರಿ ಓದಿ!

ಜೀವನಶೈಲಿ: Tulu Times | ಪ್ರಯಾಣ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಎಲ್ಲರಿಗೂ ಪ್ರಯಾಣಿಸುವುದು ಅಂದರೆ ಬಹಳ ಇಷ್ಟ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಫ್ಯಾಮಿಲಿ ಸಮೇತ ತೆರಳುವುದು ಎಲ್ಲರಿಗೂ ಕೂಡ ಇಷ್ಟ. ಹಾಗಾದ್ರೆ ಪ್ರಯಾಣ ಮಾಡುವಾಗ ನೀವು ವಾಂತಿ ಮಾಡುತ್ತೀರಿ ಅಂದರೆ ಕಾರಣ ಏನಿರಬಹುದು ಅಥವಾ ಟ್ರಾವೆಲ್ ಮಾಡುವಾಗ ವಾಂತಿ ಮಾಡುತ್ತೀರಿ ಅಂದ್ರೆ ಈ ಸ್ಟೋರಿ ನೀವು ಓದಲೇಬೇಕು…

ಇದನ್ನೂ ಓದಿ: ದೇವರಲ್ಲಿ ಅತಿಯಾಗಿ ಭಕ್ತಿ, ನಂಬಿಕೆಯಿರುವವರು ಈ ಒಂದು ಸೂಚನೆಯನ್ನು ಪಾಲಿಸಿ !

ಟ್ರಾವೆಲ್‌ ಮಾಡೋರು ಈ ನಿಯಮ ಪಾಲಿಸಿ!

ನೀವು ಟ್ರಾವೆಲ್ ಮಾಡುವಾಗ ವಾಂತಿ ಮಾಡಿದರೆ ಕೈಯಲ್ಲಿ ಶುಂಠಿಯನ್ನು ತೆಗೆದುಕೊಂಡು ಹೋಗಲು ಮರೆಯದಿರಿ. ಶುಂಠಿಯನ್ನು ಬಾಯಲ್ಲಿ ಜಗಿಯುವುದರಿಂದ ವಾಂತಿ ಬರುವುದಿಲ್ಲ. ಹಾಗೆ ಸಾಕಷ್ಟು ನೀರನ್ನು ಸೇವಿಸುವುದು ಒಳ್ಳೆಯದು. ತಂಪು  ಪದಾರ್ಥಗಳನ್ನು ಟ್ರಾವೆಲ್ ಮಾಡುವಾಗ ಬಳಸುವುದು ಒಳ್ಳೆಯದು. ಇದರಿಂದ ನಿಮಗೆ ವಾಂತಿ ಆಗುವುದು ತಪ್ಪುತ್ತದೆ. ಇನ್ನು ನಿಮ್ಮ ಮನೆಯಲ್ಲಿ ತುಳಸಿ ಇದ್ದರೆ ಆ ತುಳಸಿಯನ್ನು ಕೊಯ್ದುಕೊಂಡು ಟ್ರಾವೆಲ್ ಮಾಡುವಾಗ ತೆಗೆದುಕೊಂಡು ಹೋಗಿ ಎರಡರಿಂದ ಮೂರು ತುಳಸಿ ಎಲೆಗಳನ್ನು ಬಾಯಿಗೆ ಹಾಕಿ ತೆಗೆದುಕೊಂಡು ಅದರ ರಸವನ್ನು ನುಂಗಿ. ಇದರಿಂದ, ನಿಮಗೆ ಟ್ರಾವೆಲ್ ಮಾಡುವಾಗ ವಾಂತಿಯಾಗುವುದು ಕಡಿಮೆಯಾಗುತ್ತದೆ.

ಜಾಸ್ತಿ ನೀರು ಕುಡಿಯಿರಿ!

ಬಹಳಷ್ಟು ಜನ ಟ್ರಾವೆಲ್ ಮಾಡುವಾಗ ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗುತ್ತಾರೆ. ಕೈಯಲ್ಲಿ ನಿಂಬೆಹಣ್ಣನ್ನು ಹಿಡಿದುಕೊಂಡು ಅದರ ವಾಸನೆಯನ್ನು ತೆಗೆದುಕೊಂಡರೆ ನಿಮಗೆ ಟ್ರಾವೆಲ್ ಮಾಡುವಾಗ ವಾಂತಿ ಆಗುವುದು ಕಡಿಮೆ ಆಗುತ್ತದೆ. ಈ ವಿಚಾರ ಖಂಡಿತವಾಗಲೂ ನಿಮಗೆಲ್ಲರಿಗೂ ಗೊತ್ತಿರಬಹುದು, ಸಾಮಾನ್ಯವಾಗಿ ನಿಂಬೆಹಣ್ಣನ್ನು ಟ್ರಾವೆಲ್ ಮಾಡುವಾಗ ವಾಂತಿ ಮಾಡುವ ಮಂದಿ ಮರೆಯದೆ ಹಿಡಿದುಕೊಂಡು ಹೋಗುತ್ತಾರೆ. ಇದರಿಂದ ವಾಂತಿ ಬರುವುದು ತಪ್ಪುತ್ತದೆ. ಪ್ರಯಾಣ ಶುರು ಮಾಡುವ ಮುಂಚೆ ಸೇಬು ಅಥವಾ ದಾಳಿಂಬೆ ಜ್ಯೂಸ್ ಕುಡಿದರೆ, ಆಗ ವಾಕರಿಕೆ ಬರುವುದನ್ನು ತಪ್ಪಿಸಬಹುದು. ಸಕ್ಕರೆ ಹಾಕದೆ ಇದನ್ನು ಸೇವನೆ ಮಾಡಿದರೆ ಒಳ್ಳೆಯದು. ತಾಜಾ ಕಿತ್ತಳೆ ಜ್ಯೂಸ್ ಕೂಡ ಒಳ್ಳೆಯರು.

Do you vomit when you travel? Read this story!- ತುಳುಟೈಮ್ಸ್

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page