ಬ್ರೇಕಿಂಗ್ ನ್ಯೂಸ್
ಕರ್ನಾಟಕ

ದೇವರಲ್ಲಿ ಅತಿಯಾಗಿ ಭಕ್ತಿ, ನಂಬಿಕೆಯಿರುವವರು ಈ ಒಂದು ಸೂಚನೆಯನ್ನು ಪಾಲಿಸಿ !

ದೇವರ ಫೋಟೋ : Tulu Times | ದೇವರ ಮೇಲೆ ಅತಿಯಾಗಿ ಭಕ್ತಿ, ನಂಬಿಕೆಯಿರುವವರು ದೇವರ ಫೋಟೋಗಳನ್ನು ತಮ್ಮ ಬಳಿ ಇರಿಸಿಕೊಳ್ಳಲು ಇಷ್ಟಪಡುತ್ತಾರೆ. ತಾವು ಕೆಲಸ ಮಾಡುವ ಸ್ಥಳಗಳಲ್ಲಿ, ವ್ಯಾಪಾರ ಮಾಡುವ ಸ್ಥಳ ಇತ್ಯಾದಿ ಕಡೆ ದೇವರ ಫೋಟೋ ಇಟ್ಟುಕೊಂಡಿರುತ್ತಾರೆ. ಹೆಚ್ಚಿನವರು ತಮ್ಮ ಕಾರಿನಲ್ಲಿ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಇಟ್ಟುಕೊಂಡಿರುವುದನ್ನು ನಾವು ಗಮನಿಸಬಹುದು. ಸುರಕ್ಷಿತವಾದ ಪ್ರಯಾಣಕ್ಕಾಗಿ, ರಕ್ಷಣೆಗಾಗಿ ಮತ್ತು ಶಾಂತಿಯುತವಾದ ಪ್ರಯಾಣಕ್ಕಾಗಿ ಜನರು ತಮ್ಮ ಕಾರಿನಲ್ಲಿ ಗಣೇಶನ ವಿಗ್ರಹವನ್ನು ಅಥವಾ ಫೋಟೋವನ್ನು ಇಟ್ಟುಕೊಂಡಿರುತ್ತಾರೆ. ಆದರೆ, ಕಾರಿನ ಡ್ಯಾಶ್‌ಬೋರ್ಡ್‌ ಮೇಲೆ ದೇವರ ವಿಗ್ರಹವನ್ನು ಇಡುವಾಗಲು ನಾವು ಗೌರವಯುತವಾಗಿ ಇಡಬೇಕು.

ಸುಖಾಸುಮ್ಮನೆ ದೇವರ ಪುಟ್ಟ ವಿಗ್ರಹವನ್ನು ಇಡೋದಲ್ಲ. ಇದಕ್ಕೆ ಅದರದ್ದೇ ಆದ ಪಾವಿತ್ರ್ಯತೆಯಿದೆ. ದೇವರ ಫೋಟೋವನ್ನು ಒಂದು ಸ್ಥಳದಲ್ಲಿ ಇಡುವುದಕ್ಕೂ ಮುನ್ನ ಆ ಸ್ಥಳದ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ಕಾರು ಮನೆಯಂತೆ ಒಂದೇ ಸ್ಥಳದಲ್ಲಿ ನಿಲ್ಲುವುದಿಲ್ಲ. ಅದು ಆಗಾಗ್ಗೆ ಬಿಸಿಯಾಗುತ್ತದೆ. ಎಲ್ಲೋ ಸುತ್ತಾಡುತ್ತದೆ. ಹಾಳಾದ ರಸ್ತೆಗಳಲ್ಲೂ ಸಂಚಾರ ಮಾಡುತ್ತದೆ. ಹಾಗಾಗಿ, ಸಣ್ಣ ಮತ್ತು ಗಟ್ಟಿಮುಟ್ಟಾದ ಗಣೇಶನ ವಿಗ್ರಹವನ್ನು ಆರಿಸುವುದು ಉತ್ತಮ. ಕಾರಿನ ಡ್ಯಾಶ್‌ಬೋರ್ಡ್‌ ಮೇಲೆ ಲೋಹ, ಕಲ್ಲು ಅಥವಾ ಮರವು ಸಾಮಾನ್ಯವಾಗಿ ಚೆನ್ನಾಗಿ ಹಿಡಿದಿಟ್ಟುಕೊಳ್ಳುತ್ತದೆ. ನೀವು ಡ್ಯಾಶ್‌ಬೋರ್ಡ್‌ ಮೇಲೆ ಇಟ್ಟಿರುವ ಗಣೇಶನ ವಿಗ್ರಹ ಯಾವುದೇ ಕಾರಣಕ್ಕೂ ಕೆಳಗೆ ಬೀಳದಂತೆ ಕಾಪಾಡಿಕೊಳ್ಳಿ. ನೀವು ನಿಮ್ಮ ಕಾರಿನಲ್ಲಿ ಗಣೇಶನ ವಿಗ್ರಹವನ್ನು ಇಟ್ಟುಕೊಳ್ಳಲು ಬಯಸಿದರೆ ಅಥವಾ ಇಟ್ಟಿದ್ದರೆ ನಿಮ್ಮ ಕಾರನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಗಣೇಶನ ವಿಗ್ರಹದ ಮೇಲೆ ಧೂಳು ಅಥವಾ ಕೊಳೆಗಳು ಕೂರದಂತೆ ಕಾಳಜಿವಹಿಸಿ.

ನೀವು ಕಾರಿನಲ್ಲಿ ಇಟ್ಟುಕೊಳ್ಳುವ ಗಣೇಶನ ವಿಗ್ರಹವು ಮುರಿದು ಹೋಗಿದ್ದರೆ, ಹಾಳಾಗಿದ್ದರೆ ಅಥವಾ ಅದಕ್ಕೆ ಯಾವುದೇ ರೀತಿಯಾದ ಹಾನಿಯಾಗಿದ್ದರೆ ಅದನ್ನು ನೀವು ನಿಮ್ಮ ಕಾರಿನಲ್ಲಿ ಇಟ್ಟುಕೊಳ್ಳಬೇಡಿ. ಒಂದು ವೇಳೆ ಕಾರಿನಲ್ಲಿ ಇಟ್ಟ ಮೇಲೆ ಅದು ಒಡೆದು ಹೋದರೆ ತಕ್ಷಣವೇ ಅದನ್ನು ತೆಗೆದು ಮರದ ಕೆಳಗೆ ಅಥವಾ ಹರಿಯುವ ನೀರಿನಲ್ಲಿ ತೇಲಿಬಿಡಲು ಹೇಳಲಾಗುತ್ತದೆ. ನಂತರ ಆ ವಿಗ್ರಹದ ಬದಲು ಇನ್ನೊಂದು ವಿಗ್ರಹವನ್ನು ತಂದು ಆ ಸ್ಥಳದಲ್ಲಿಡಬೇಕಾಗುತ್ತದೆ. ಇನ್ನು ಅನೇಕರು ಸಹಜವಾಗಿ ಮಾಡುವ ತಪ್ಪು ಚಪ್ಪಲಿ ಹಾಕಿಕೊಂಡು ಗಣೇಶನ ವಿಗ್ರಹವನ್ನು ಮುಟ್ಟುವಿದು. ಈ ರೀತಿ ಮಾಡಲೇ ಬೇಡಿ, ಹೂವುಗಳನ್ನು ಅರ್ಪಿಸುವುದಾಗಲಿ, ಕಾರಿನಲ್ಲಿ ಗಣೇಶನ ವಿಗ್ರಹ ಇಟ್ಟುಕೊಂಡಾಗ ಮಾಂಸ, ಮದ್ಯ ಸೇವಿಸುವುದಿ, ಕೆಟ್ಟ ಚಟುವಟಿಕೆಗಳನ್ನು ಆದಷ್ಟು ದೂರವಿಡಿ. ಈ ರೀತಿಯಾಗಿ ಗಣೇಶನ ವಿಗ್ರಹಕ್ಕೆ ಗೌರವಸೂಚಕವಾಗಿ ಕಾರಿನಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಉತ್ತಮ. Those who have great devotion and faith in God should follow this one piece of advice! – ತುಳು ಟೈಮ್ಸ್

ಇದನ್ನೂ ಓದಿ :ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zMmTTxS-BuE?si=1yUtHsrxHEvo0JIp

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page