ಬ್ರೇಕಿಂಗ್ ನ್ಯೂಸ್
ಕರ್ನಾಟಕ

‘ಬಿಪಿಎಲ್’ ಹೊಸ ಸದಸ್ಯರ ಹೆಸರು ಸೇರ್ಪಡೆಯಲ್ಲಿ ಮತ್ತಷ್ಟು ಬಿಗಿ

ಬೆಂಗಳೂರು‌ : Tulu Times | ಬಿಪಿಎಲ್ ಕಾರ್ಡ್ ನ್ನು ಆರ್ಥಿಕವಾಗಿ ದುರ್ಬಲ ಮತ್ತು ಅತೀ ಕೆಳಗಿನ ಆದಾಯ ಹೊಂದಿರುವ ಕುಟುಂಬಗಳಿಗೆ ಸರ್ಕಾರ ನೀಡುವ ಒಂದು ಬಗೆಯ ಗುರುತಿನ ಚೀಟಿಯಾಗಿದೆ. ಇದನ್ನು ಬಳಸಿ ಕುಟುಂಬಗಳು ಸಬ್ಸಿಡಿ ದರದಲ್ಲಿ ಆಹಾರ ಪದಾರ್ಥಗಳು, ಇಂಧನ ಮತ್ತು ಅನೇಕ ಕಲ್ಯಾಣ ಯೋಜನೆಗಳ ಲಾಭ ಪಡೆಯುತ್ತಾರೆ.

ಇದೀಗ ಅನರ್ಹ ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತಿದ್ದು, ಆಹಾರ ಇಲಾಖೆ ಪಡಿತರ ಚೀಟಿಗೆ ಹೊಸದಾಗಿ ಸದಸ್ಯರ ಹೆಸರು ಸೇರ್ಪಡೆ ಮಾಡುವ ಕ್ರಮಗಳನ್ನು ಮತ್ತಷ್ಟು ಬಿಗಿ ಮಾಡಿದೆ. ಕೆಲವರು ಸುಮ್ಮ ಸುಮ್ಮನೆ ಸುಳ್ಳು ದಾಖಲೆಗಳನ್ನು ನೀಡಿ ಬಿಪಿಎಲ್ ಕಾರ್ಡ್ ನ್ನು ಮಾಡಿಸಿಕೊಳ್ಳುತ್ತಾ ಇದ್ದರು. ಇದೆನ್ನೆಲ್ಲಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಖಡಕ್ ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿದೆ.

ಹೊಸದಾಗಿ ಪಡಿತರ ಚೀಟಿ ಪಡೆಯಲು ಮಾತ್ರವಲ್ಲ, ತಮ್ಮ ಕುಟುಂಬ ಸದಸ್ಯರ ಹೆಸರುಗಳನ್ನು ಸೇರ್ಪಡೆ ಮಾಡಲು ಕೂಡ ಜಾತಿ, ಆದಾಯ, ವಿವಾಹ ಮತ್ತಿತರ ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸಲಾಗಿದೆ. ಪಡಿತರ ಚೀಟಿಗಳಲ್ಲಿ ಇನ್ನು ಮುಂದೆ ತಮ್ಮ ಕುಟುಂಬದ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಬೇಕಾದಲ್ಲಿ ಅಥವಾ ತಿದ್ದುಪಡಿ ಮಾಡಬೇಕಾದಲ್ಲಿ ಕೆಲವು ದಾಖಲೆಗಳ ಸಲ್ಲಿಕೆ ಕಡ್ಡಾಯವಾಗಿದೆ. ಆರು ವರ್ಷ ಮೇಲ್ಪಟ್ಟಿದ್ದರೆ ಅವರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆರು ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ, ತಂದೆ- ತಾಯಿಯ ಆಧಾರ್ ಕಾರ್ಡ್, ತಂದೆ -ತಾಯಿಯ ಪಡಿತರ ಚೀಟಿಯ ಮೂಲ ದಾಖಲೆಗಳು ಕಡ್ಡಾಯವಾಗಿದೆ.

ಹೊಸದಾಗಿ ಮದುವೆಯಾಗಿದ್ದಲ್ಲಿ ಪತಿ-ಪತ್ನಿ ಹೆಸರು ಸೇರಿಸಬಹುದು. ಹೆಸರು ತಿದ್ದುಪಡಿ, ಫೋಟೋ, ವಿಳಾಸ ಬದಲಾವಣೆ, ಹೆಸರು ಡಿಲೀಟ್, ಅಂಗಡಿ ಬದಲಾವಣೆ, ಕಾರ್ಡ್ ನಲ್ಲಿರುವ ಮುಖ್ಯಸ್ಥರ ಬದಲಾವಣೆ ಮಾಡಿಸಬಹುದು. ಮದುವೆಯಾಗಿ ಬರುವ ಸೊಸೆಗೆ ವಿವಾಹ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಳೆಯ ಕಾರ್ಡ್ ನಿಂದ ಹೆಸರು ತೆಗೆದ ದಾಖಲೆ ಕಡ್ಡಾಯವಾಗಿದೆ. ಬೆಂಗಳೂರು ಒನ್, ಸೈಬರ್ ಸೆಂಟರ್ ಗಳಲ್ಲಿ ಅಥವಾ ಇಲಾಖೆಯ ಅಧಿಕೃತ ವೆಬ್ ಸೈಟ್ ಮೂಲಕ ಸ್ವಯಂ ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಕಾರ್ಡ್ ಗಳನ್ನು ಹೊಸದಾಗಿ ಪಡೆಯಲು ಇನ್ನು ಅವಕಾಶ ಕಲ್ಪಿಸಿರುವುದಿಲ್ಲ ಎಂದು ವರದಿಯಾಗಿದೆ. ‘BPL’ tightens up further in adding new members – ತುಳು ಟೈಮ್ಸ್

ಇದನ್ನೂ ಓದಿ :ತೊಗರಿ ಬೇಳೆಗೆ ಮುಕ್ತ ಮಾರುಕಟ್ಟೆಯಲ್ಲಿಯೇ ಬೆಲೆ ಇಳಿಕೆ

========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zMmTTxS-BuE?si=1yUtHsrxHEvo0JIp

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page