ಬಿಗ್ ಬಾಸ್: Tulu Times | ಬಿಗ್ ಬಾಸ್ ಸೀಸನ್ 12 ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಿದೆ. ಇಡೀ ಕರ್ನಾಟಕದ ಜನತೆ ಬಿಗ್ ಬಾಸ್ ನೋಡುತ್ತಿದ್ದಾರೆ. ಸಮಯ ಕಳೆಯಲು ಮನೆಯಲ್ಲಿ ಟಿವಿ ಹಾಕಿಕೊಂಡು ಬಿಗ್ ಬಾಸ್ ನೋಡುವ ಮಂದಿ ಹೆಚ್ಚಾಗಿದ್ದಾರೆ.
ಇನ್ನು, ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಬಗ್ಗೆ ಹಲವಾರು ಮಿಮ್ಸ್ ಗಳು ಹರಿದಾಡುತ್ತವೆ. ಹಾಗೆಯೇ ಥೀಮ್ ಮಾಡಿಕೊಂಡು ಮನೆಮಂದಿ ಎಲ್ಲಾ ಬಿಗ್ ಬಾಸ್ ತರ ಆಕ್ಟ್ ಮಾಡುವ ನೆಟ್ಟಿಗರು ಬಹಳಷ್ಟು ಜನ ಇದ್ದಾರೆ. ಬಿಗ್ ಬಾಸ್ ನೋಡಿಕೊಂಡು ಅದರಲ್ಲಿರುವಂತಹ ಸ್ಪರ್ಧಿಗಳ ರೀತಿಯಾಗಿ ನಟಿಸುವಂತಹ ಜನ ಹೆಚ್ಚಾಗಿದ್ದಾರೆ. ಇದು ಕೆಲವೊಮ್ಮೆ ಬಹಳ ಕಾಮಿಡಿ ಆಗಿರುತ್ತದೆ. ಕೆಲವು ದಿನಗಳ ಹಿಂದೆ ರಕ್ಷಿತಾ ತರಹ ವಿಡಿಯೋಗಳನ್ನು ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಜನ ಶೇರ್ ಮಾಡುತ್ತಿದ್ದರು. ಇದಕ್ಕೆ ಅತಿ ಹೆಚ್ಚು ಲೈಕ್ಸ್ ಶೇರ್ ಕಮೆಂಟ್ಸ್ ಗಳು ಬಂದಿವೆ.
ಸಾವಿರ ಚಿಂತೆಗಳ ಮಧ್ಯೆ ಬಿಗ್ ಬಾಸ್ ದೇ ಚಿಂತೆ ಅಲ್ವಾ..?
ಇನ್ನು ಬಿಗ್ ಬಾಸ್ ವೀಕ್ಷಿಸುವಾಗ ಜನ ಬಹಳ ಎಂಜಾಯ್ ಮಾಡುತ್ತಾರೆ. ಹೀಗಾಗಿ, ಕೆಲವೊಂದು ಸೋಷಿಯಲ್ ಮೀಡಿಯಾ ಗಳಲ್ಲಿ ಕಾಮಿಡಿ ಕಂಟೆಂಟ್ ಗಳನ್ನು ಜನ ತಯಾರಿ ಮಾಡುತ್ತಿದ್ದಾರೆ. ಅದರಲ್ಲಿ ಒಂದು ವೀಡಿಯೋ ವೈರಲ್ ಆಗಿತ್ತು. ನಮ್ಮದೇ ಸಾವಿರ ಚಿಂತೆ ಇರುವಾಗ ನಮಗೆಲ್ಲ ಬಿಗ್ ಬಾಸ್ ಮನೆಯ ಸ್ಪರ್ಧಿಗಳದ್ದೇ ಚಿಂತೆ ಅಂತ ವಿಡಿಯೋವನ್ನು ರೆಡಿ ಮಾಡಿ ಶೇರ್ ಮಾಡಿದ್ದರು. ಇದನ್ನು ವೀಕ್ಷಿಸಿದಾಗ ನಿಜ ಅಂತ ಅನಿಸುತ್ತದೆ. ಮನಸ್ಸಿನ ನೆಮ್ಮದಿಗಾಗಿ ಸೋಷಿಯಲ್ ಮೀಡಿಯಾವನ್ನು ವೀಕ್ಷಿಸುತ್ತಿರುವ ನಮಗೆ ಬಿಗ್ ಬಾಸ್ ಕೂಡ ಅಷ್ಟೇ ಇಷ್ಟವಾಗುತ್ತದೆ.
ಏನಾದರೂ ಬೇಸರ ಆದಾಗ ಮೊಬೈಲ್ ವೀಕ್ಷಿಸುತ್ತೇವೆ. ಅದರ ಜೊತೆಗೆ ಬಿಗ್ ಬಾಸ್ ಅಥವಾ ಕೆಲವೊಂದು ಸೀರಿಯಲ್ ಗಳನ್ನು ನಾವೆಲ್ಲರೂ ಕೂಡ ವೀಕ್ಷಿಸುತ್ತೇವೆ. ಹೀಗಾಗಿ, ನಮ್ಮ ಮನಸ್ಸಿಗೆ ಆದಂತಹ ನೋವು ಅಥವಾ ಡಿಸ್ಟರ್ಬೆನ್ಸ್ ಕಡಿಮೆಯಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಒಬ್ಬರು ಇದೇ ರೀತಿಯಾದಂತಹ ವೀಡಿಯೋವನ್ನು ಪೋಸ್ಟ್ ಮಾಡಿದ್ದರು. ನಮ್ಮದೇ ಸಾವಿರ ಚಿಂತೆಗಳು ಸಮಸ್ಯೆಗಳು ಇರುವಾಗ ನಮಗೆಲ್ಲರಿಗೂ ಕೂಡ ಬಿಗ್ ಬಾಸ್ ದೇ ಚಿಂತೆ ಅಂತ ಕಾನ್ಸೆಪ್ಟ್ ರೆಡಿ ಮಾಡಿ ವೀಡಿಯೋವನ್ನು ಹರಿಬಿಟ್ಟಿದ್ದರು. ಈ ವೀಡಿಯೋಗೆ ಸಾಕಷ್ಟು ಲೈಕ್ಸ್, ಕಮೆಂಟ್ಸ್ ಗಳು ಬಂದಿವೆ.
our own thousand worries, don’t we have Bigg Boss to worry about? What do you think?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











