ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಸರಕಾರಿ ಉದ್ಯೋಗ ಅರಸುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ !

ಉದ್ಯೋಗ : Tulu Times | ಉದ್ಯೋಗ ಅರಸುತ್ತಿರುವವರಿಗೆ ಸುವರ್ಣಾವಕಾಶ. ಪ್ರತೀ ದಿನ ಮೊಬೈಲ್ ಅಥವಾ ದಿನಪತ್ರಿಕೆಗಳಲ್ಲಿ ಉದ್ಯೋಗವನ್ನು ಹುಡುಕುತ್ತಿರುತ್ತೇವೆ. ಆದರೆ ಕೆಲವೊಮ್ಮೆ ನಮಗೆ ಸರಿಯಾದ ಮಾಹಿತಿಯಿಲ್ಲದೆ ಕೈ ಚೆಲ್ಲಿ ಕೂರುವುದೂ ಇದೆ. ಹೀಗಿರುವಾಗ, ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಬಾಂಬೆ ಹೈಕೋರ್ಟ್ ಸಿಹಿಸುದ್ದಿ ನೀಡಿದೆ. ಬಾಂಬೆ ಹೈಕೋರ್ಟ್ ನೇಮಕಾತಿ 2025ರ ಅಧಿಸೂಚನೆಯಲ್ಲಿ ಕ್ಲರ್ಕ್, ಪಿಯೋನ್, ಸ್ಟೆನೋಗ್ರಾಫರ್ ಮತ್ತು ಚಾಲಕ ಸೇರಿದಂತೆ 2381 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಮುಂಬೈ, ನಾಗ್ಪುರ ಮತ್ತು ಔರಂಗಾಬಾದ್ ಪೀಠಗಳಿಗಾಗಿ ಈ ನೇಮಕಾತಿ ನಡೆಯಲಿದ್ದು, ಸರ್ಕಾರದ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಿದೆ.

ಎಲ್ಲಾ ಹುದ್ದೆಗಳಿಗೆ ವಯಸ್ಸಿನ ಮಿತಿ 18ರಿಂದ 38 ವರ್ಷಗಳು. ಸ್ಟೆನೋಗ್ರಾಫರ್ ಮತ್ತು ಚಾಲಕ ಹುದ್ದೆಗಳಿಗೆ 21ರಿಂದ 38 ವರ್ಷಗಳು. ಜನವರಿ 5, 2026 ಕಟ್‌ಆಫ್ ದಿನಾಂಕವಾಗಿದ್ದು, ಸರ್ಕಾರಿ ನಿಯಮಗಳಂತೆ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಇದೆ. ಇದರಲ್ಲಿ ಒಟ್ಟು ಕ್ಲರ್ಕ್ ಹುದ್ದೆಗೆ 1382 ಪೋಸ್ಟ್ ಖಾಲಿಯಿದ್ದು, ಪದವಿ ಹಾಗೂಟೈಪಿಂಗ್ ವಯೋಮಿತಿ: 18 ರಿಂದ 38 ವರ್ಷ ಪಿಯೋನ್ – 887 ಹುದ್ದೆಗಳು, ಅರ್ಹತೆ: ಮರಾಠಿ ಓದಲು ಮತ್ತು ಬರೆಯಲು ತಿಳಿದಿರಬೇಕು. ಚಾಲಕರು – 37 ಹುದ್ದೆಗಳು
ಅರ್ಹತೆ: 10ನೇ ತರಗತಿ ಉತ್ತೀರ್ಣ, LMV ಪರವಾನಗಿ ಮತ್ತು 3 ವರ್ಷದ ಅನುಭವ, ಸ್ಟೆನೋಗ್ರಾಫರ್ (ಲೋವರ್) – 56 ಹುದ್ದೆಗಳು ಅರ್ಹತೆ: ಪದವಿ, ಶಾರ್ಟ್‌ಹ್ಯಾಂಡ್ 80 WPM, ಟೈಪಿಂಗ್ 40 WPM, ಸ್ಟೆನೋಗ್ರಾಫರ್ (ಹೈಯರ್) – 19 ಹುದ್ದೆಗಳು, ಅರ್ಹತೆ: ಪದವಿ, ಶಾರ್ಟ್‌ಹ್ಯಾಂಡ್ 100 WPM, ಟೈಪಿಂಗ್ 40 WPM.

ಬಾಂಬೆ ಹೈಕೋರ್ಟ್ ನೇಮಕಾತಿ 2025 ಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಡಿಸೆಂಬರ್ 15, 2025ರಿಂದ ಆರಂಭವಾಗಿ, ಜನವರಿ 5, 2026ಕ್ಕೆ ಕೊನೆಗೊಳ್ಳಲಿದೆ. ಅರ್ಜಿ ಶುಲ್ಕ ಎಲ್ಲಾ ವರ್ಗಗಳಿಗೆ ₹1000. ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಅಭ್ಯರ್ಥಿಗಳು ಬಾಂಬೆ ಹೈಕೋರ್ಟ್ ಅಧಿಕೃತ ವೆಬ್‌ಸೈಟ್ bombayhighcourt.nic.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಇಲ್ಲಿ ಸ್ಕ್ರೀನಿಂಗ್ ಟೆಸ್ಟ್, ಟೈಪಿಂಗ್ ಟೆಸ್ಟ್ ಮತ್ತು ವೈವಾ-ವೋಸ್‌ನಲ್ಲಿ ಅಭ್ಯರ್ಥಿಗಳ ಪ್ರದರ್ಶನವನ್ನು ಆಧರಿಸಿ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ. Here is a golden opportunity for those seeking government jobs! – ತುಳು ಟೈಮ್ಸ್

ಇದನ್ನೂ ಓದಿ :ಡಿಬಾಸ್ ಡೆವಿಲ್ ದರ್ಬಾರ್.. ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ..?

====

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zMmTTxS-BuE?si=1yUtHsrxHEvo0JIp

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page