ಬ್ರೇಕಿಂಗ್ ನ್ಯೂಸ್
ಕರ್ನಾಟಕ

ತೊಗರಿ ಬೇಳೆಗೆ ಮುಕ್ತ ಮಾರುಕಟ್ಟೆಯಲ್ಲಿಯೇ ಬೆಲೆ ಇಳಿಕೆ

ಆಹಾರ ಉತ್ಪನ್ನ : Tulu Times | ತೊಗರಿ ಬೇಳೆ ಪ್ರೋಟೀನ್‍ನ ಪ್ರಮುಖ ಮೂಲವಾಗಿದೆ. ದೈನಂದಿನ ಆಹಾರದಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಉತ್ಪನ್ನವೂ ಹೌದು. ಈ ಬೆಳೆ ಬೆಳೆಯುವಾಗ ಇದರ ಬೇರುಗಳಲ್ಲಿ ಬ್ಯಾಕ್ಟೀರಿಯಾಗಳಿಂದ ನೈಟ್ರೋಜನ್‌ ಸ್ಥಿರೀಕರಣವಾಗುತ್ತದೆ. ಇದರಿಂದ ಮಣ್ಣು ಸಮೃದ್ಧಿ ಹೆಚ್ಚುತ್ತದೆ. ಕಡಿಮೆ ನೀರು ಇರುವ ಪ್ರದೇಶಗಳಲ್ಲಿಯೂ ಸಹ ಯಶಸ್ವಿಯಾಗಿ ಬೆಳೆಯುತ್ತದೆ. ಕೆಲವೊಮ್ಮೆ ಮಾರುಕಟ್ಟೆಯಲ್ಲಿ ವರ್ಷಪೂರ್ತಿ ಬೇಡಿಕೆ ಇರುತ್ತಿದ್ದ ಕಾರಣ ರೈತರಿಗೆ ಉತ್ತಮ ಆದಾಯದ ಬೆಳೆಯಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ತೊಗರಿ ಸೇರಿದಂತೆ ಮುಂಗಾರು ಬೆಳೆಗಳು ಹಾನಿಗೊಳಗಾಗಿದ್ದು, ಅದರ ಪರಿಹಾರ ಇನ್ನೂ ಬಂದಿಲ್ಲ. ಈಗ ಅಳಿದುಳಿದ ತೊಗರಿ ಬೆಳೆ ಕಟಾವಿಗೆ ಬಂದಿದ್ದು, ರಾಶಿ ಶುರುವಾಗಿದೆ. ರೈತರು ಕೂಡ ಮಾರುಕಟ್ಟೆಗೆ ತೊಗರಿ ತರಲಾರಂಭಿಸಿದ್ದು, ಮುಕ್ತ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿದೆ. ಸರಕಾರ ತಕ್ಷಣ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಸಿ ರೈತರ ನೆರವಿಗೆ ಧಾವಿಸಬೇಕೆಂದು ಪ್ರಬಲ ಹಕ್ಕೊತ್ತಾಯ ವ್ಯಕ್ತವಾಗಿದೆ.

ಈ ಬಾರಿ ಇಳುವರಿ ಕೂಡ ಕಡಿಮೆಯಾಗಿದೆ. ಕೆಲವೊಬ್ಬರು ಈ ಬೆಳೆಯನ್ನು ನಂಬಿ ಸಾಲ ಮಾಡಿದ್ದರು. ಆದರೀಗ ಬೆಳೆಯಲ್ಲಿನ ದರ ಇಳಿಕೆಯಿಂದಾಗಿ ರೈತರು ಕಂಗೆಟ್ಟು ಹೋಗಿದ್ದಾರೆ. ರೈತರು ತೊಗರಿಯನ್ನು ಮಾರುಕಟ್ಟೆಗೆ ತರಲಾರಂಭಿಸುತ್ತಿದ್ದಂತೆ ವರ್ತಕರು ದರ ಇಳಿಸಿದ್ದಾರೆ. ವಾರದ ಹಿಂದೆ ಮುಕ್ತ ಮಾರುಕಟ್ಟೆಯಲ್ಲಿ 7000 ರೂ. ಬೆಲೆ ಇತ್ತು. ಆದರೀಗ 5000-6500 ರೂ.ಗೆ ಇಳಿದಿದೆ ತೊಗರಿಗೆ 8000 ರೂ. ಬೆಂಬಲ ಬೆಲೆ ಘೋಷಣೆಯಾಗಿದೆ. ಆದರೆ, ಇನ್ನೂ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ.

ಈ ವರ್ಷ ತೊಗರಿ ಉತ್ಪಾದನೆ ಕಡಿಮೆಯಾಗಿದ್ದಲ್ಲದೆ, ರೈತರು ಅನಿವಾರ್ಯತೆಯಿಂದ ಮಾರಾಟ ಮಾಡಲಾರಂಭಿಸಿದ್ದಾರೆ. ಬೆಂಬಲ ಬೆಲೆ ಯೋಜನೆ ಖರೀದಿ ಪ್ರಕ್ರಿಯೆ ತಕ್ಷಣಕ್ಕೆ ಆರಂಭವಾದರೆ ಮುಕ್ತ ಮಾರುಕಟ್ಟೆಯಲ್ಲಾದರೂ ದರ ಕುಸಿತವಾಗಲ್ಲ. ಸರಕಾರದ ಖರೀದಿ ತಡವಾದರೆ ತೊಗರಿ ಬೇಳೆಯೆಲ್ಲಾ ಖಾಲಿಯಾಗಿರುತ್ತದೆ. ಆಗ ಖರೀದಿ ಕೇಂದ್ರ ತೆರೆದರೂ ಪ್ರಯೋಜನಕ್ಕೆ ಬಾರದು ಎಂಬುದು ರೈತರ ಅಳಲು. Prices of togari crop fall in the open market – ತುಳು ಟೈಮ್ಸ್

ಇದನ್ನೂ ಓದಿ :ಜಗಳ ಮರೆತು ಒಂದಾದ ಮಂಜು-ಲೀಲಾ ಜೋಡಿ! ಟ್ರಯಾಂಗಲ್ ಲವ್ ಸ್ಟೋರಿ ಸುಖಾಂತ್ಯ

=========

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/zMmTTxS-BuE?si=Cw6_CKX8pXhPG-gA

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page