ಉಪ್ಪಿನಂಗಡಿ;ತುಳುಟೈಮ್ಸ್|ಉಪ್ಪಿನಂಗಡಿ ಸಮೀಪದ ತೆಕ್ಕಾರು ಗ್ರಾಮದಲ್ಲಿ ಶೇಷಗಿರಿ ಎಂಬ ಅರ್ಚಕ ಮಾಟ ಮಂತ್ರ ಮಾಡಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು.ಸುಮಿತ್ರಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಈತ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕಾಗಿ ಆಕೆಯ ಮನೆಗೆ ತೆರಳಿ ಮಾಟ ಮಂತ್ರ ಪ್ರಯೋಗ ಮಾಡಿದ್ದ,ಇದು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಧ್ಯರಾತ್ರಿ ಕತ್ತಿಹಿಡಿದು ಮನೆಗೆ ಬಂದ ಶೇಷಗಿರಿ ಮಾಟ ಮಂತ್ರ ಪ್ರಯೋಗ ಮಾಡಿ ಹೊರಟು ಹೋಗಿದ್ದ.ಮನೆಯ ಸಿಸಿಟಿವಿ ದೃಶ್ಯಗಳಲ್ಲಿ ಸ್ಥಳೀಯ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ಅರ್ಚಕ ಮಾಡಿಹೋದ ದುಷ್ಕೃತ್ಯ ಬೆಳಕಿಗೆ ಬಂದಿತ್ತು.
ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದಲ್ಲಿ ನಡೆದಿರುವ ಘಟನೆ ಇದು.ಮಾಟ ಮಂತ್ರ ಪ್ರಯೋಗದ ನಂತರ ಮನೆಯವರ ನೆಮ್ಮದಿ ಮಣ್ಣುಪಾಲಾಗಿತ್ತು.
ಜಯಂತ,ಜಯಂತಿ ದಂಪತಿಗಳು ಪುತ್ರಿ ಸುಮಿತ್ರಾ ಎಂಬಾಕೆಯ ಜಾತಕ ತೋರಿಸಲು ದೇವಸ್ಥಾನಕ್ಕೆ ಹೋಗಿಬಂದಮೇಲೆ ಅರ್ಚಕ ಶೇಷಗಿರಿ ತಾನೇ ಸ್ವತ ಮನೆಯವರ ಸಂಪರ್ಕ ಸಾಧಿಸಿ ದೋಷಗಳ ಬಗ್ಗೆ ವಿವರಿಸಿ ಪೂಜೆ ಮಾಡಿಸುವುದಕ್ಕೆ ಮುಂದಾಗಿದ್ದಾನೆ.
ನಂತರ ಅದೇನಾಯ್ತೋ ಗೊತ್ತಿಲ್ಲ..ಶೇಷಗಿರಿ ನೇರವಾಗಿ ಮನೆಗೆ ಬಂದು ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದ್ದ ಮನೆಯವರು ಮತ್ತು ಹುಡುಗಿ ಮದುವೆಗೆ ಒಪ್ಪಿಗೆ ನೀಡಿರುವುದಿಲ್ಲ.ಇದಕ್ಕೆ ಸುಮ್ಮನಾಗದ ಅರ್ಚಕ ಶೇಷಗಿರಿ ಹುಡುಗಿಯ ವಿರುದ್ದ ಇಲ್ಲ ಸಲ್ಲದ ಅಪಪ್ರಚಾರ ಮಾಡಿದ್ದಾನೆ.ಇದೆ ಕಾರಣಕ್ಕೆ ಈತ ರಾತ್ರಿ ಹೊತ್ತು ಹುಡುಗಿಯ ಮನೆಗೆ ಬಂದು ಕೊಟ್ಟಿಗೆಗೆ ಬೆಂಕಿ ಹಚ್ಚಿಹೋಗಿದ್ದ.ಎಂದು ಮನೆಯವರು ಆರೋಪಿಸಿದ್ದಾರೆ.
ಅಂದು ಉಪ್ಪಿನಂಗಡಿ ಪೊಲೀಸರು ಮುಚ್ಚಳಿಕೆ ಬರೆಸಿ ಆರೋಪಿಯನ್ನು ಬಿಟ್ಟು ಕಳಿಸಿದ್ದರು.ಮುಂದೆಯೂ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಮನೆಯವ್ರು ಸುತ್ತಮುತ್ತ ಸಿಸಿಟಿವಿ ಅಳವಡಿಸಿದ್ದರು ನಂತರ ಮಧ್ಯರಾತ್ರಿ ಮನೆಗೆ ಬಂದು ಮಾಟ ಮಂತ್ರ ಪ್ರಯೋಗ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಈತನ ಉಪಟಳ ಇಲ್ಲಿಗೆ ನಿಲ್ಲುವುದಿಲ್ಲ ಮಂಗಳೂರಿನಲ್ಲಿ ಸುಮಿತ್ರಾ ವಿದ್ಯಾಭ್ಯಾಸ ಮಾಡ್ತಿದ್ದ ಕಾಲೇಜನ್ನು ಗುರುತಿಸಿ ಅಲ್ಲಿಗೂ ಹೋಗಿ ತೊಂದರೆ ನೀಡಿದ್ದಾನೆ.ಇದರಿಂದ ನೊಂದ ಮನೆಯವರು ಮಗಳ ರಕ್ಷಣೆಗಾಗಿ ಮನೆಗೆ ಕರೆದುಕೊಂಡು ಬಂದಿದ್ದಾರೆ.
ವಿದ್ಯಾಭ್ಯಾಸ ಮಾಡಿ ಸ್ವಂತ ಕಾಲ ಮೇಲೆ ನಿಲ್ಲಬೇಕೆಂಬ ಸುಮಿತ್ರಾ ಕನಸು ಪಾಗಲ್ ಪ್ರೇಮಿಯಿಂದ ನಾಶವಾಗಿದೆ.ಸುಮಿತ್ರಾ ಕೂಡ ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿದ್ದರೂ ಪದೇ ಪದೇ ತೊಂದರೆ ಕೊಡ್ತಿದ್ದಾನೆ.ಅದ್ರಲ್ಲೂ ಕತ್ತಿ ಹಿಡಿದುಕೊಂಡು ಮನೆಯ ಸುತ್ತಮುತ್ತ ತಿರುಗಾಡಿದ್ದು ಮನೆಯವರು ಜೀವಭಯದಿಂದ ಬದುಕುವಂತಾಗಿತ್ತು.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆದ್ರೆ ಉಪ್ಪಿನಂಗಡಿ ಪೊಲೀಸರಿಂದ ನ್ಯಾಯ ಸಿಗುವ ಭರವಸೆಯಿಲ್ಲ ಎಂದು ಸುಮಿತ್ರಾ ಪೋಷಕರು ತುಳುಟೈಮ್ಸ್ ಸಹಾಯ ಕೋರಿದ್ದರು.
ತುಳುಟೈಮ್ಸ್ ಈ ಬಗ್ಗೆ ವಿವರವಾದ ವರದಿ ಮಾಡಿತ್ತು.ಇದೀಗ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಪೊಲೀಸರು ಸೂಕ್ತ ಕ್ರಮ ಕೈಗೊಂಡಿರುವುದರಿಂದ ಈ ಕುಟುಂಬ ನೆಮ್ಮದಿಯಿಂದ ಬದುಕುವಂತಾಗಿದೆ.ಕತ್ತಲಲ್ಲಿ ಕತ್ತಿ ಹಿಡಿದುಕೊಂಡು ಮನೆಗೆ ಬಂದವ ಜೀವಕ್ಕೂ ತೊಂದರೆ ನೀಡಬಹುದು ಎಂದು ಜನ ಮಾತಾಡಿಕೊಂಡಿದ್ದರು.ಯಾವುದೇ ನ್ಯಾಯಪರವಾಗಿ,ಶೋಷಿತರ ಪರವಾಗಿ ನಿಲ್ಲುವುದಕ್ಕೆ ತುಳುಟೈಮ್ಸ್ ಸಿದ್ದವಿದೆ.
Man arrested for casting a black magic spell on a woman in Uppinangadi. TuluTimes report results! Tulu times
ಇದನ್ನೂ ಓದಿ:ಧರ್ಮಸ್ಥಳಕ್ಕೆ ಮಸಿ ಬಳಿಯಲು ಪ್ರಯತ್ನಿಸಿದವರನ್ನು ಜೈಲಿಗೆ ಕರೆದೊಯ್ಯಬೇಕು: ಆರ್.ಅಶೋಕ್ವೀಡಿಯೋ ಸುದ್ದಿಗಳಿಗಾಗಿ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











