ಎಐ : Tulu Times | ಗೂಗಲ್ ಈಗಾಗಲೇ ಉಚಿತ ಸೇವೆ ಮತ್ತು ದುಬಾರಿ ‘ಎಐ ಪ್ರೊ’ ಸೇವೆಯನ್ನು ನೀಡುತ್ತಿದ್ದು, ಈಗ ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ಈ ಎರಡು ಸೇವೆಗಳ ನಡುವಿನ ಅಂತರವನ್ನು ತುಂಬಲು ‘ಎಐ ಪ್ಲಸ್’ ಅನ್ನು ತರಲಾಗಿದೆ.
ಸುಧಾರಿತ ಚಿತ್ರ ರಚನೆ ಮತ್ತು ಎಡಿಟಿಂಗ್‌ಗಾಗಿ ‘ನ್ಯಾನೋ ಬನಾನಾ ಪ್ರೊ’ ಮತ್ತು ವಿಡಿಯೋ ಜನರೇಷನ್‌ಗಾಗಿ ‘ವಿಯೋ 3.1’ ಟೂಲ್‌ಗಳು ಇದರಲ್ಲಿ ಲಭ್ಯವಿವೆ. ಅಲ್ಲದೆ, ಫ್ಲೋ ಮೂಲಕ ಕ್ರಿಯೇಟಿವ್ ಫಿಲ್ಮ್ ಮೇಕಿಂಗ್ ಟೂಲ್‌ಗಳನ್ನು ಬಳಸಬಹುದು.
ಹಾಗಾಗಿ ಫೋಟೋ ಹಾಗೂ ವೀಡಿಯೋ ಎಡಿಟಿಂಗ್ ಮಾಡಲು ಇದು ಉಪಯೋಗವಾಗಲಿದೆ. ಇದೀಗ ಜೆಮಿನಿಯ ಬಳಕೆದಾರರು ಹೆಚ್ಚಾಗುತ್ತಿದ್ದು ಇದರ ಹೊಸ ಫೀಚರ್ಸ್ ಗಳು ಬಹಳ ಪ್ರಯೋಜನಕಾರಿಯೂ ಆಗಿದೆ. ಜೆಮಿನಿ 3 ಪ್ರೋಗೆ ಪ್ರವೇಶವನ್ನು ಪಡೆಯಲಿರುವುದು, ಸಾಮಾನ್ಯ ಮಾಡೆಲ್‌ಗಿಂತ ಹೆಚ್ಚು ವೇಗವಾಗಿ ಮತ್ತು ನಿಖರವಾಗಿ ಕೆಲಸ ಮಾಡಲು ಸಹಕಾರಿ.
‘ಎಐ ಪ್ಲಸ್’ ಚಂದಾದಾರಿಕೆ ಸೇವೆ ;
ಜಿಮೇಲ್ ಮತ್ತು ಗೂಗಲ್ ಡಾಕ್ಸ್‌ನಂತಹ ಪ್ರತಿನಿತ್ಯ ಬಳಸುವ ಆ್ಯಪ್‌ಗಳಲ್ಲಿ ಜೆಮಿನಿ ಎಐ ನೇರವಾಗಿ ಇಂಟಿಗ್ರೇಟ್ ಆಗಿರುತ್ತದೆ. ಇದರಿಂದ ಮೇಲ್ ಬರೆಯುವುದು ಅಥವಾ ಡಾಕ್ಯುಮೆಂಟ್ ಸಿದ್ಧಪಡಿಸುವುದು ಸುಲಭವಾಗಲಿದೆ. ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ ಭಾರತೀಯ ಬಳಕೆದಾರರಿಗಾಗಿ ಹೊಸ ‘ಎಐ ಪ್ಲಸ್’ ಚಂದಾದಾರಿಕೆ ಸೇವೆಯನ್ನು ಪ್ರಾರಂಭಿಸಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಭಾರತೀಯರು ಆಸಕ್ತಿಯ ತೋರಿಸುತ್ತಿರುವುದರಿಂದ ಕಂಪನಿಯು ಈ ಹೊಸ ಯೋಜನೆಯನ್ನು ಪರಿಚಯಿಸಿದೆ.
ಇದರಲ್ಲಿ ಈ ಸೇವೆಯನ್ನು ಆನಂದಿಸಲು ಬೆಲೆಯೇ ಇದರ ಪ್ರಮುಖ ಆಕರ್ಷಣೆ. ಮೂಲತಃ ಈ ಸೇವೆ ಬೆಲೆ ತಿಂಗಳಿಗೆ 399 ರೂ. ಆಗಿದ್ದು, ಆರಂಭಿಕ ಕೊಡುಗೆಯಾಗಿ ಹೊಸ ಬಳಕೆದಾರರಿಗೆ ಮೊದಲ ಆರು ತಿಂಗಳವರೆಗೆ ಕೇವಲ 199 ರೂ.ಗಳಿಗೆ ಲಭ್ಯವಿರಲಿದೆ. ಉಚಿತ ಆವೃತ್ತಿಯಲ್ಲಿ ಸಿಗುವ 15 ಜಿಬಿ ಸ್ಟೋರೇಜ್‌ಗೆ ಹೋಲಿಸಿದರೆ, ಇದರಲ್ಲಿ ಬರೋಬ್ಬರಿ 200 ಜಿಬಿ ಕ್ಲೌಡ್ ಸ್ಟೋರೇಜ್ ಸಿಗಲಿದೆ. ಇದು ಉಚಿತ ಪ್ಲಾನ್‌ಗಿಂತ ಸುಮಾರು 13 ಪಟ್ಟು ಹೆಚ್ಚಾಗಲಿದೆ. ಈ ಯೋಜನೆಯ ಒಂದು ಪ್ರಮುಖ ಲಾಭವೆಂದರೆ ‘ಫ್ಯಾಮಿಲಿ ಶೇರಿಂಗ್’. ಹೌದು…! ಚಂದಾದಾರರು ತಮ್ಮ ಮನೆಯ ಇತರ 5 ಸದಸ್ಯರೊಂದಿಗೆ ಈ ಪ್ಲಾನ್ ಅನ್ನು ಹಂಚಿಕೊಳ್ಳಬಹುದಾಗಿದೆ.
This Gemini 3 Pro will offer more speed than the regular model – ತುಳು ಟೈಮ್ಸ್
ಇದನ್ನೂ ಓದಿ :ಜಗಳ ಮರೆತು ಒಂದಾದ ಮಂಜು-ಲೀಲಾ ಜೋಡಿ! ಟ್ರಯಾಂಗಲ್ ಲವ್ ಸ್ಟೋರಿ ಸುಖಾಂತ್ಯ
========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/LTDCWW1OQ3Y?si=UJn774I5BsKBm8i7











