ಸಿನೆಮಾ : Tulu Times | ಇದೀಗ ಕನ್ನಡ ಚಲನಚಿತ್ರ ರಂಗದಲ್ಲಿ ಮಾಸ್ ಸಿನಿಮಾಗಳು ವಿಶೇಷ ಸ್ಥಾನ ಹೊಂದಿವೆ. ಅಭಿಮಾನಿಗಳನ್ನು ಕುತೂಹಲದಿಂದ ಕಾಯಿಸಿರುವ ದರ್ಶನ್ ಅಭಿನಯದ ‘ಡೆವಿಲ್’ ಕೂಡ ಇದೇ ಸಾಲಿನಲ್ಲಿದೆ. ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಭರ್ಜರಿ ಆಕ್ಷನ್ ಹಾಗೂ ತೀವ್ರ ಕಥಾಹಂದರದ ಸಂಯೋಜನೆ ಈ ಚಿತ್ರವನ್ನು ಮತ್ತಷ್ಟು ವಿಶೇಷವಾಗಿಸಿದೆ. ಆದರೆ ಜೈಲು ಶಿಕ್ಷೆ ಅನುಭವಿಸುತ್ತಿರುವ ದರ್ಶನ್ ಗೆ ಮಾತ್ರ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲಾಗುತ್ತಿಲ್ಲ. ಇವರ ಪರವಾಗಿ ಅವರ ಅಭಿಮಾನಿಗಳೇ ಈ ಸಿನೆಮಾದ ಪೋಸ್ಟರ್ ಗಳ ಜೊತೆ ದರ್ಶನ್ ಫೋಟೋಗಳಿಗೆ ಅಲಂಕಾರ ಮಾಡ್ತಾ ಸಂಭ್ರಮಿಸ್ತಾ ಇದ್ದಾರೆ.
ನಟ ದರ್ಶನ್ ಅವರು ಜೈಲಿನಲ್ಲಿ ಇದ್ರೂ ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಅಭಿಮಾನಿಗಳೇ ಎಲ್ಲ ಕಡೆಗಳಲ್ಲಿ ಈ ಚಿತ್ರಕ್ಕೆ ಅದ್ದೂರಿಯಾಗಿ ಪ್ರಚಾರ ಮಾಡುತ್ತಿದ್ದು, ಎಲ್ಲಾ ಚಿತ್ರಮಂದಿರಗಳನ್ನು ಸಿಂಗಾರ ಮಾಡಲಾಗಿದೆ. ಹಬ್ಬದ ರೀತಿಯಲ್ಲಿ ದರ್ಶನ್ ಅಭಿಮಾನಿಗಳು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಪ್ರಕಾಶ್ ವೀರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾಗಿದೆ.
ಇನ್ನು ಮೊದಲ ದಿನದ ಎಲ್ಲ ಶೋಗಳು ಹೌಸ್ಫುಲ್ ಆಗಿವೆ. ಬೆಂಗಳೂರು, ಮೈಸೂರು ಮಾತ್ರವಲ್ಲದೇ ರಾಜ್ಯಾದ್ಯಂತ ಇರುವ ಚಿತ್ರಮಂದಿರಗಳಲ್ಲಿ ಕೂಡ ‘ದಿ ಡೆವಿಲ್’ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣಲಿದೆ. ಒಂದು ವೇಳೆ ದರ್ಶನ್ ಅವರು ಹೊರಗೆ ಇದ್ದಿದ್ದರೆ ಸಂಭ್ರಮಾಚರಣೆ ಇನ್ನೂ ಜೋರಾಗಿ ಇರುತ್ತಿತ್ತು. ಸದ್ಯ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿ ಇರುವುದು ಅಭಿಮಾನಿಗಳಿಗೆ ನೋವಿನ ವಿಚಾರ.
‘The Devil’ Housefull: Massive promotion from fans – ತುಳು ಟೈಮ್ಸ್
ಇದನ್ನೂ ಓದಿ :ಜಗಳ ಮರೆತು ಒಂದಾದ ಮಂಜು-ಲೀಲಾ ಜೋಡಿ! ಟ್ರಯಾಂಗಲ್ ಲವ್ ಸ್ಟೋರಿ ಸುಖಾಂತ್ಯ
========
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/LTDCWW1OQ3Y?si=UJn774I5BsKBm8i7











