ಕರ್ನಾಟಕ: Tulu Times | ಕನ್ನಡ ಚಿತ್ರರಂಗ ಅಂದ್ರೇನೆ ಹಾಗೆ ಅಲ್ವಾ? ರಾಶಿ ಕಲಾವಿದರನ್ನು ತೆರೆಗೆ ತರುವ ಅದ್ಭುತ ವೇದಿಕೆ. ಪ್ರತಿಭಾವಂತ ನಟ ನಟಿಯರನ್ನು ಸ್ಯಾಂಡಲ್ ವುಡ್ ಸ್ಕ್ರೀನ್ ಮುನ್ನಲೆಗೆ ತರುತ್ತದೆ. ಇದೀಗ, ಅಂತಹದ್ದೇ ಸಾಲಿನಲ್ಲಿ ನಟ ದರ್ಶನ್ ಅಭಿಮಾನಿ ಹಾಗೂ ಸುಮಾರು 15 ವರ್ಷಗಳ ಕಾಲ ಚಿತ್ರರಂಗದಲ್ಲಿ ತನ್ನನ್ನು ಗುರುತಿಸಿಕೊಂಡಿರುವ ನಟಿ ಸಾಕ್ಷಿ ಮೇಘನಾ ಕೂಡ ಒಬ್ಬರು. ಈ ನಟಿಯ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ನೋಡೋಣ..
ನಟಿ ಸಾಕ್ಷಿ ಮೇಘನಾ ಹಿನ್ನಲೆ ಏನು..?
ಹೌದು, ಇವರು ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಜೋಗಯ್ಯ, ಜೈ ಭಜರಂಗ ಬಲಿ, ಆದರ್ಶ ಚಿತ್ರಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಇವರು ಪ್ರಮಾಣದ ನಾಯಕಿಯಾಗಿಯೂ ಕುಳೆಡ ಲೋಫರ್ಸ್, ಲೀನಾ, ಪದ್ಮಾವತಿ, ಬೆಫ್ರೆಂಡ್ಸ್ ಚಿತ್ರಗಳಲ್ಲಿ ಬಹಳ ವಿಭಿನ್ನ ಹಾಗೂ ಬೋಲ್ಡ್ ಪಾತ್ರಗಳಲ್ಲಿ ಮಿಂಚಿದ್ದಾರೆ. ಈಗಾಗಲೇ ಒಂಭತ್ತು ಚಿತ್ರಗಳಲ್ಲಿ ಅಭಿನಯಿಸಿದ್ದು, ಸಿಂಬಲ್ ಆಫ್ ಕರ್ಮ, ವರ್ಣತರಂಗ, ಕುರುಡು ಕಾಂಚಾಣ ಚಿತ್ರಗಳು ರಿಲೀಸ್ ಗೆ ರೆಡಿ ಇದೆ.
ಯುವ ನಟಿಯರಿಗೆ ಸಿನಿಮಾಗಳಲ್ಲಿ ಅವಕಾಶ ಸಿಗೋದು ಕಷ್ಟನಾ..?
ದರ್ಶನ್ ಜೈಲು ಸೇರಿದಾಗ ತನ್ನ ಪ್ರೀತಿಯ ನಟನ ಬಗ್ಗೆ ಇವರು ಮಾಧ್ಯಮಗಳಲ್ಲಿ ಮಾತನಾಡಿದ್ದರು. ಇನ್ನು ಸಾಕ್ಷಿ ಮೇಘನಾ ಕನ್ನಡ ಸಿನಿಮಾಗಳಲ್ಲಿ ನಟಿಸಿ ನಂತರ ಇದೀಗ ಕಾಲಿವುಡ್ ಗೆ ಎಂಟ್ರಿಯಾಗಲು ಸಜ್ಜಾಗಿದ್ದಾರೆ. ಮೊದಲು ಸೀರಿಯಲ್ ನಲ್ಲಿ ನಟಿಸಲು ಅವಕಾಶಕ್ಕಾಗಿ ಹೋದಾಗ ಸಿನಿಮಾ ಅವಕಾಶ ಸಿಕ್ಕಿದೆ ಅಂತ ಅನುಭವ ಹಂಚಿಕೊಂಡಿದ್ದಾರೆ. ಸೀರಿಯಲ್ ಗೆ ಆಡಿಷನ್ ಕೊಡೋಕೆ ಹೋದಾಗ ಅದೇ ಸೀರಿಯಲ್ ನ ನಿರ್ದೇಶಕರಾದ ರವಿ ಪ್ರಿಯನ್ ನನ್ನನ್ನು ನೋಡಿ ನೀನು ಸೀರಿಯಲ್ ಗಿಂತ ಸಿನಿಮಾಗೆ ಹೆಚ್ಚು ಸೂಕ್ತ ಎಂದಿದ್ದರು. ಅದರಂತೆ ಅವರ ಒಂದು ವರ್ಷದ ಬಳಿಕ ನನ್ನನ್ನು ಸಂಪರ್ಕಿಸಿ ಇದೀಗ ಮಗಾಬಲಿ ಚಿತ್ರಕ್ಕೆ ಅವಕಾಶ ನೀಡಿದರು ಎಂದು ಇವರು ತುಳುಟೈಮ್ಸ್ ಜೊತೆ ಅನುಭವ ಹಂಚಿಕೊಂಡಿದ್ದಾರೆ.
ದರ್ಶನ್ ಅಭಿಮಾನಿಯಾದ ಈ ನಟಿಯ ಕೈಯಲ್ಲಿ ಸಾಲು ಸಾಲು ಸಿನಿಮಾ!
ಇನ್ನು ತನಗೆ ಸಿಕ್ಕ ತಮಿಳು ಸಿನಿಮಾ ಮಗಾಬಲಿ ಬಗ್ಗೆ ಮಾತನಾಡುತ್ತಾ, ಇದೊಂದು ಮೂಢನಂಬಿಕೆ, ಸಸ್ಪೆನ್ಸ್, ಡ್ರಿಲ್ಲರ್, ಹಾರರ್ ಹಿನ್ನೆಲೆಯ ಕಥಾನಕ ಹೊಂದಿರುವಂತಹ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಆಯಿಜಾಜ್ ಮಜೀದ್ ಎಂಬ ನಾಯಕನ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ನಟಿ ಸಾಕ್ಷಿ ಮೇಘನಾ ಅಭಿನಯಿಸಿರುವ ಈ ತಮಿಳು ಭಾಷೆಯ “ಮಗಾಬಲಿ” ಚಿತ್ರ ಇದೇ ತಿಂಗಳ 12ರಂದು ರಿಲೀಸ್ ಆಗಲಿದೆ.
ಚಿತ್ರರಂಗದಲ್ಲಿ ಸಾಕಷ್ಟು ಪ್ರತಿಭಾವಂತ ನಟಿಯರು ಎಲೆ ಮರೆಯ ಕಾಯಿಯಂತೆ ಮರೆಯಾಗಿ ಹೋಗುತ್ತಾರೆ. ಆದ್ರೆ ಯಾರು ತಮ್ಮ ನಿರಂತರ ಶ್ರಮ, ಪ್ರತಿಭೆಯಿಂದ ಎಲ್ಲವನ್ನು ಮೆಟ್ಟಿ ಮುಂದೆ ಸಾಗುತ್ತಾರೋ ಅಂತವರಿಗೆ ಸಿನಿಮಾರಂಗದಲ್ಲಿ ಅವಕಾಶಗಳು ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಸಾಕ್ಷಿ ಮೇಘನಾ ಎಂಬಂತಹ ನಟಿಯರೇ ಸಾಕ್ಷಿ. ಈ ನಟಿ ಅಪ್ಪಟ ದರ್ಶನ್ ಫ್ಯಾನ್..ಡಿಬಾಸ್ ಜೊತೆಗೆ ನಟಿಸುವ ಅವಕಾಶ ಸಿಗಬೇಕು ಅಂತ ಹೇಳುವ ಇವರು ಆದಷ್ಟು ಬೇಗ ದರ್ಶನ್ ಹೊರಬರಲಿ ಅಂತ ಪ್ರಾರ್ಥಿಸುತ್ತಿದ್ದಾರೆ.
Do you know who this beauty is, a true fan of Darshan?- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











