ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಯಕ್ಷಗಾನದ ಅವಹೇಳನಕಾರಿ ಹೇಳಿಕೆ ಕಠಿಣ ಕ್ರಮ ಕೈಗೊಳ್ಳಿ-ಸುನಿಲ್ ಕುಮಾರ್

ಬೆಳಗಾವಿ:ತುಳುಟೈಮ್ಸ್| ಕರಾವಳಿಯ ಗಂಡುಕಲೆ ಯಕ್ಷಗಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ,ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಕಲಾಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರ ಗಮನ ಸೆಳೆದ ಸುನಿಲ್ ಕುಮಾರ್ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದು ಕೊಂಡು ಒಂದು ಕಲಾಪರಂಪರೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ.ಇಂತಹ ಅಧ್ಯಕ್ಷರಿಂದ ಯಾವ ರೀತಿಯ ಪ್ರಯೋಜನವಿಲ್ಲ.ಯಕ್ಷಗಾನದ ಜೊತೆ ಕರಾವಳಿಯ ಜನರಿಗೆ ವಿಶೇಷವಾದ ನಂಟಿದೆ.

https://www.youtube.com/shorts/IE4IAyAfByE

ಧಾರ್ಮಿಕ ಹಿನ್ನಲೆ ಇರುವ ಕಲಾಪ್ರಕಾರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ.ಇಂತಹ ಪ್ರಾಧಿಕಾರದ ಅಧ್ಯಕ್ಷರ ಮೇಲೇ ಸರ್ಕಾರ ಯಾವರೀತಿಯ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ.ಕೂಡಲೇ ನೋಟೀಸ್ ನೀಡಿ ಕಠಿಣ ಕ್ರಮಕೈಗೊಳ್ಳುವಂತೆ ಬಿಜೆಪಿ ನಾಯಕ ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.

Take strict action against derogatory remarks about Yakshagana - Sunil Kumar Tulu Times

ಇದನ್ನೂ ಓದಿ:ಧರ್ಮಸ್ಥಳ ವಿರುದ್ಧ ಷಡ್ಯಂತ್ರದಲ್ಲಿ 6 ಆರೋಪಿಗಳು ಶಾಮೀಲು

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page