ಬ್ರೇಕಿಂಗ್ ನ್ಯೂಸ್
ಕರಾವಳಿ

ಮಂಗಳೂರು: ಮಿಸೆಸ್‌ ಅರ್ಥ್‌ ಇಂಟರ್‌ನ್ಯಾಶನಲ್‌ ಕಿರೀಟ ಮುಡಿಗೇರಿಸಿಕೊಂಡ ವಿದ್ಯಾ ಕರ್ಕೇರ

ಮಂಗಳೂರು – ತುಳು ಟೈಮ್ಸ್:‌ ಮಿಸೆಸ್‌ ಅರ್ಥ್‌ ಇಂಟರ್‌ ನ್ಯಾಶನಲ್‌ 2025 ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಮಂಗಳೂರಿನ ಚೆಲುವೆ ಮುಡಿಗೇರಿಸಿಕೊಂಡಿದ್ದಾರೆ. ಮಂಗಳೂರಿನ ವಿದ್ಯಾ ಸಂಪತ್ (ವಿದ್ಯಾ ಕರ್ಕೇರ) 2025ರ ಮಿಸೆಸ್‌ ಅರ್ಥ್‌ ಇಂಟರ್‌ ನ್ಯಾಶನಲ್‌ ಟೈಟಲ್‌ ತಮ್ಮದಾಗಿಸಿಕೊಂಡಿದ್ದಾರೆ.

ಮಿಸೆಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದ ವಿದ್ಯಾ ಸಂಪತ್ ಅವರು ಪಿಲಿಫೈನ್ಸ್‌ನಲ್ಲಿ ನಡೆದ ಮಿಸೆಸ್ ಅರ್ಥ್ ಇಂಟರ್‌ನ್ಯಾಷನಲ್ ಕಿರೀಟವನ್ನು ಪಡೆದು ದೇಶದ ಹಿರಿಮೆ ಹೆಚ್ಚಿಸಿದ್ದಾರೆ. ಈ ಸೌಂದರ್ಯ ಸ್ಪರ್ಧೆಯಲ್ಲಿ 22 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಜಗಳ ಮರೆತು ಒಂದಾದ ಮಂಜು-ಲೀಲಾ ಜೋಡಿ! ಟ್ರಯಾಂಗಲ್ ಲವ್ ಸ್ಟೋರಿ ಸುಖಾಂತ್ಯ

ಮಂಗಳೂರಿನ ಪಾತ್‌ವೇ ಮಾಡೆಲಿಂಗ್ ಅಕಾಡೆಮಿಯ ಮುಖ್ಯಸ್ಥರ, ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಇದರ ನಿರ್ದೇಶಕ ದೀಪಕ್ ಗಂಗೂಲಿ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿಯ ಮಾಲಕಿ, ಮಿಸೆಸ್‌ ಇಂಡಿಯಾ ಕರ್ನಾಟಕ ಮಂಗಳೂರು ಇದರ ನಿರ್ದೇಶಕಿ ಮರ್ಸಿ ವೀಣಾ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ವಿದ್ಯಾ ಸಂಪತ್ ಅವರು ಪಾಲ್ಗೊಂಡಿದ್ದರು. ಇವರು ಮುಂಬೈನಲ್ಲಿ ಹುಟ್ಟಿ ಬೆಳೆದು, ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಉದ್ಯಮಿಯೂ ಹೌದು.

n a landmark moment for India, Vidya Sampath from Mangalore has been crowned Mrs Earth International 2025, becoming the first Indian woman to bring home the prestigious global title. The event, held in Manila, Philippines, featured contestants from 22 countries and concluded with a grand coronation on December 8. – Tulu Times.


ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ  : https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 30

You cannot copy content of this page