ಧರ್ಮಸ್ಥಳ: Tulu Times | ಧರ್ಮಸ್ಥಳ ಕೇಸ್ ನಲ್ಲಿ ಷಡ್ಯಂತ್ರ ರೂಪಿಸಿರುವ ಆರು ಮಂದಿ ಆರೋಪಿಗಳನ್ನು ಕೂಡಲೇ ಜೈಲಿಗೆ ಕರೆದೊಯ್ಯಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ ಐಟಿ ಇದೀಗ ನ್ಯಾಯಾಲಯಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಇದರಲ್ಲಿ ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್, ವಿಠಲ್ ಗೌಡ ಹಾಗೂ ಸುಜಾತ ಭಟ್ ಅವರುಗಳೇ ಪ್ರಕರಣದ ಪ್ರಮುಖ ಸೂತ್ರಧಾರಿಗಳೆಂದು ಹೇಳಿರುವುದರಿಂದ ಕೂಡಲೇ ಆರು ಮಂದಿಯನ್ನು ಬಂಧಿಸಿ ಜೈಲಿಗೆ ಅಟ್ಟಬೇಕೆಂದು. ಇದು ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ಎಂಬುದು ತನಿಖೆಯಿಂದ ಸಾಬೀತಾಗಿದೆ. ಹಣದ ಆಸೆಗಾಗಿ ಸುಕ್ಷೇತ್ರದ ಹೆಸರು ಬಳಸಿಕೊಂಡು ಸುಳ್ಳು ಆರೋಪ ಮಾಡಿದ್ದಾರೆ. ಹಾಗಾಗಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಇದರ ಹಿಂದೆ ಕಾಣದ ಕೈಗಳಿವೆ..ಅಶೋಕ್ ಕಿಡಿ!
ನಾವು ಪ್ರಾರಂಭದಿಂದಲೂ ಇದು ವ್ಯವಸ್ಥಿತ ಹುನ್ನಾರ ಎಂದು ಪ್ರತಿಪಾದಿಸುತ್ತಲೇ ಬಂದಿದ್ದೇವೆ. ಇದರ ಹಿಂದೆ ದೊಡ್ಡ ದೊಡ್ಡ ಕಾಣದ ಕೈಗಳಿವೆ. ಎಲ್ಲವೂ ಬಟಾಬಯಲಾಗಬೇಕು. ಸರ್ಕಾರ ವಿಳಂಬ ಮಾಡಿದರೆ ನಾವು ಸುಮನಿರುವುದಿಲ್ಲ. ಸದನದಲ್ಲೂ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ. ಗೃಹಸಚಿವರು ಇಲ್ಲವೇ ಸರ್ಕಾರ ಏನೇನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ನಮಗೆ ಸ್ಪಷ್ಟ ಉತ್ತರ ಬೇಕು? ಅಲ್ಲಿಯ ತನಕ ನಮ ಹೋರಾಟ ನಿಲ್ಲುವುದಿಲ್ಲ ಎಂದು ಅಶೋಕ್ ಖಡಕ್ ಆಗಿ ತಿಳಿಸಿದ್ದಾರೆ. ಇನ್ನು ಛಲವಾದಿ ನಾರಾಯಣಸ್ವಾಮಿ ಬಗ್ಗೆ ಮಾತನಾಡಿ, ಇದು ವ್ಯವಸ್ಥಿತ ಪಿತೂರಿ. ಧರ್ಮಸ್ಥಳದ ಏಳಿಗೆಯನ್ನು ಸಹಿಸದವರು ಈ ರೀತಿ ಷಡ್ಯಂತರ ರೂಪಿಸಿದ್ದಾರೆ ಎಂದರು. ಇನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನಮ ನಿಲುವು ಏನಿತ್ತೋ ಅದು ತನಿಖೆಯಲ್ಲೇ ಕಂಡುಬಂದಿದೆ. ಇದು ಪೂರ್ವ ನಿಯೋಜಿತ ಎಂಬುದರಲ್ಲಿ ಎರಡು ಮಾತಿಲ್ಲ. ಧರ್ಮಸ್ಥಳದ ಹೆಸರಿಗೆ ಈ ಕೃತ್ಯ ಎಸಗಲು ಕೆಲವರ ಪಿತೂರಿ ಎಂದರು.
Those who tried to smear Dharmasthala should be taken to jail: R. Ashok- ತುಳುಟೈಮ್ಸ್
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:https://www.youtube.com/@tulutimess











