ಆಹಾರ : Tulu Times | ಚಳಿಗಾಲದಲ್ಲಿ ಹಲವಾರು ಆಹಾರ ಪದ್ಧತಿಗಳನ್ನು ಅನುಸರಿಸುತ್ತೇವೆ. ಅದರಲ್ಲಿ ಮುಖ್ಯವಾಗಿ, ನಮ್ಮ ಊಟದ ಸಮಯಕ್ಕೆ ಹೊಂದಿಕೆಯಾಗುವ ‘ರಸಂ’ ಯಾವ ರೀತಿ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳ್ಕೊಳ್ಳೋಣ ಬನ್ನಿ.
ರಸಂ ಕುಡಿಯೋದಕ್ಕೆ ಹಲವಾರು ಆರೋಗ್ಯಕರ ಪ್ರಯೋಜನಗಳು ಇವೆ. ಇದು ದೇಹವನ್ನು ಬಿಸಿ ಇಡುತ್ತದೆ. ರಸಂನಲ್ಲಿರುವ ಮೆಣಸು, ಜೀರಿಗೆ, ಬೆಳ್ಳುಳ್ಳಿ, ಶುಂಠಿ ದೇಹದ ಒಳಗಿನ ಶೀತವನ್ನು ಕಡಿಮೆ ಮಾಡಿ ನೈಸರ್ಗಿಕವಾಗಿರುವುದಕ್ಕೆ ಸಹಕಾರಿಯಾಗಿದೆ. ಇನ್ನು ಆರೋಗ್ಯದ ಏರು ಪೇರಿನಿಂದ ಶೀತ, ಕೆಮ್ಮು ಉಂಟಾದರೆ ಅದನ್ನೂ ಕಡಿಮೆ ಮಾಡುತ್ತದೆ. ಮಸಾಲೆಗಳಲ್ಲಿರುವ ಆಂಟಿ-ಇನ್ಫ್ಲಮೇಟರಿ ಗುಣಗಳು ಮೂಗಿನ ಬ್ಲಾಕೇಜ್, ಗಂಟಲಿನ ಉರಿ ಮತ್ತು ಕೆಮ್ಮನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಸಾಮಾನ್ಯವಾಗಿ ರಸಂನಲ್ಲಿ ಬಳಸುವ ಸಾಮಾಗ್ರಿಗಳಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಸಾಮರ್ಥ್ಯವಿದೆ. ಬೆಳ್ಳುಳ್ಳಿ, ಮೆಣಸು, ಜೀರಿಗೆ, ಹುಣಸೆ ಇವೆಲ್ಲವೂ ಆ್ಯಂಟಿಆಕ್ಸಿಡೆಂಟ್ ಗಳನ್ನು ಹೊಂದಿದ್ದು, ಇದರ ಮೂಲಕ ಚಳಿಗಾಲದ ಸಾಮಾನ್ಯವಾಗಿ ಹರಡಬಲ್ಲ ಸೋಂಕುಗಳನ್ನು ತಡೆಗಟ್ಡಿ ಪ್ರತಿರೋಧ ಹೆಚ್ಚಿಸುವ ಶಕ್ತಿ ಇದೆ. ಅಲ್ಲದೇ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರಸಂ ಜೀರ್ಣಕ್ಕೆ ತುಂಬಾ ಹಿತ. ಜೀರಿಗೆ ಮತ್ತು ಮೆಣಸು ಹೊಟ್ಟೆಯ ಗ್ಯಾಸ್, ಅಜೀರ್ಣ, ಊತವನ್ನು ಕಡಿಮೆ ಮಾಡುತ್ತವೆ.
ರಸಂ ದೇಹಕ್ಕೆ ಹೈಡ್ರೇಶನ್ ನೀಡುವುದರ ಜೊತೆಗೆ ವಿಟಮಿನ್ C ಮತ್ತು ಮಸಾಲೆಗಳ ಪೈಚಾರಿ ಪೋಷಕಾಂಶಗಳನ್ನು ಕೊಡುತ್ತದೆ. ಚಳಿಯಲ್ಲಿ ಕೆಲವರಿಗೆ ಊಟಕ್ಕೆ ರುಚಿ ಕಡಿಮೆ ಆಗುತ್ತದೆ. ರಸಂನ ಸುಗಂಧ ಮತ್ತು ರುಚಿ ಹಸಿವನ್ನೂ ಹೆಚ್ಚಿಸುತ್ತದೆ. ಇನ್ನು ಬಿಸಿ ಬಿಸಿಯಾಗಿ ರಸಂ ಕುಡಿಯೋದ್ರಿಂದ ದೇಹಕ್ಕೆ ಆರಾಮದಾಯಕ ಫೀಲ್ ಕೊಟ್ಟು ಒತ್ತಡ ಕಡಿಮೆ ಮಾಡಲು ಸಹಾಯಕವಾಗಿದೆ. ರಸಂ ನಲ್ಲಿ ವಿವಿಧ ಬಗೆಯಿದ್ದು, ಇದರಲ್ಲಿ ಚಳಿಗಾಲದಲ್ಲಿ ಉಪಯೋಗಕ್ಕೆ ಬರುವ ರಸಂಗಳೆಂದರೆ ; ಬೆಳ್ಳುಳ್ಳಿ ರಸಂ, ಮೆಣಸಿನ ಕಾಳು ರಸಂ, ಶುಂಠಿ ರಸಂ, ಟೊಮೇಟೊ – ಜೀರಿಗೆ ರಸಂ, ತುಳಸಿ ರಸಂ ಇತ್ಯಾದಿ… Add ‘Rasam’ to your diet this winter! – ತುಳು ಟೈಮ್ಸ್
ಇದನ್ನೂ ಓದಿ :ದೇವಸ್ಥಾನ ಕಟ್ಟೋ ನೆಪದಲ್ಲಿ ಜನರಿಂದ ಹಣ ವಸೂಲಿ : 25 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/GhM456JYzHc?si=42PkEkreiXbFzD9j











