ದಾವಣಗೆರೆ : Tulu Times | ದೇವಸ್ಥಾನ ಕಟ್ಟುವ ನೆಪದಲ್ಲಿ ಜನರಿಂದ ಹಣ ವಸೂಲಿ ಮಾಡಲಾಗುತ್ತಿರುವುದು ವರದಿಯಾಗಿದೆ. ತಕ್ಷಣ ಇದರ ಬಗ್ಗೆ ಎಚ್ಚರಿಕೆ ವಹಿಸಿದ ಗ್ರಾಮಸ್ಥರು ಹಣ ವಸೂಲಿ ಮಾಡುತ್ತಿರುವ ಗ್ಯಾಂಗ್ ಹಿಡಿದು ಕೂಡಿ ಹಾಕಿರುತ್ತಾರೆ. ವಿಶೇಷವಾಗಿ ಇಲ್ಲಿನ ಗ್ರಾಮಸ್ಥರು ವಂಚಕರನ್ನು ದೇವಸ್ಥಾನದಲ್ಲಿಯೇ ಕೂಡಿ ಹಾಕಿರುತ್ತಾರೆ. ಈ ಘಟನೆಯು ದಾವಣಗೆರೆ ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ನಡೆದಿದ್ದು, ದಾಸರಗಟ್ಟಿ ಭಾಗದಿಂದ ಆರು ಜನರ ಗುಂಪೊಂದು ಹಣ ವಸೂಲಿ ಮಾಡುವುದಕ್ಕೆಂದೇ ಬಂದಿದ್ದರೆನ್ನಲಾಗಿದೆ.
ದೇವಾಲಯ ನಿರ್ಮಾಣಕ್ಕಾಗಿ ಹಣ ಸಂದಾಯ ರಶೀದಿ ;
ದೇವರ ಹೆಸರು ಹೇಳಿಕೊಂಡು ಗ್ರಾಮದ ಜನರಲ್ಲಿ ನಂಬಿಕೆ ಬರುವಂತೆ, ಯಲ್ಲಮ್ಮ ದೇಗುಲ ಕಟ್ಟುವುದಾಗಿ ಹೇಳಿ ಹಣ ವಸೂಲಿ ಮಾಡಲಾಗುತ್ತಿತ್ತು. ಇದು ಸುಮಾರು ನಾಲ್ಕೈದು ದಿನದಿಂಲೇ ದಾವಣಗೆರೆ ಭಾಗದಲ್ಲಿ ಈ ವಂಚಕರ ಟೀಂ ಪ್ಲಾನ್ ಮಾಡಿಕೊಂಡು ಬರುತ್ತಿದ್ದರು. ಅದೂ ಅಲ್ಲದೇ ಐಷಾರಾಮಿ ಕಾರಿನಲ್ಲಿ ಬಂದು ಹಣವನ್ನು ಕೇಳುತ್ತಿದ್ದರೆನ್ನಲಾಗಿದೆ. ಜೊತೆಗೆ ಬರುವಾಗ ರಶೀದಿಯನ್ನೂ ಮಾಡಿಕೊಂಡು ಬಂದಿದ್ದಾರೆ. ಅದರಲ್ಲಿ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.) ಕಾರೇಹಳ್ಳಿ – ದಾಸರಹಟ್ಟಿ, ನೂತನ ದೇವಾಲಯ ನಿರ್ಮಾಣಕ್ಕಾಗಿ ಹಣ ಸಂದಾಯ ರಶೀದಿ ಎಂದು ಪ್ರಿಂಟೌಟ್ ತೆಗೆದು ಎಲ್ಲರ ಜೊತೆ ಹಣ ವಸೂಲಿ ಮಾಡಲಾಗುತ್ತಿತ್ತು.
ಇಲ್ಲಿನ ಅಮಾಯಕ ಗ್ರಾಮಸ್ಥರು ಪಾಪ ದೇವಸ್ಥಾನಕ್ಕೆ, ಅಲ್ಲಿನ ನಿರ್ಮಾಣಕ್ಕೆ ಎಂದು ನಂಬಿಕೆ ಇಟ್ಟು ಹಲವಾರು ಜನ ಹಣವನ್ನು ಕೂಡ ಈ ವಂಚಕರಿಗೆ ನೀಡಿದ್ದರು. ಒಟ್ಟಾಗಿ 20 ರಿಂದ 35 ಲಕ್ಷದವರೆಗೆ ಹಣ ಸಂಗ್ರಹವನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ. ದಾವಣಗೆರೆಯ ಸುತ್ತಮುತ್ತ ಹಲವು ಗ್ರಾಮದಲ್ಲಿ ಹಣ ಸಂಗ್ರಹವನ್ನು ಮಾಡಿ ಇವತ್ತು ಈಚಘಟ್ಟ ಗ್ರಾಮಕ್ಕೆ ಹಣ ಸಂಗ್ರಹ ಮಾಡಲು ಬರುವಾಗ ಇಲ್ಲಿನ ಗ್ರಾಮಸ್ಥರಿಗೆ ಯಾಕೋ ಅನುಮಾನ ಬಂದಿದ್ದು, ಈ ಬಗ್ಗೆ ಅಲ್ಲಿನ ಪೂಜಾರಿಗೆ ಕರೆ ಮಾಡಿ ಕೇಳಿದಾಗ ನಿಮ್ಮಲ್ಲಿಯ ದೇವಸ್ಥಾನಕ್ಕೆ ನಾವು ಹಣವನ್ನು ನೀಡುತ್ತೇವೆ ಎಂದು ಹೇಳುವಾಗ ಅಲ್ಲಿನ ಪೂಜಾರಿಯೂ ಆ ಸ್ಥಳದಲ್ಲಿ ಯಾವುದೇ ರೀತಿಯ ದೇವಸ್ಥಾನಗಳು ನಿರ್ಮಾಣಕ್ಕೆ ಸಿದ್ದವಾಗಿರುವುದಿಲ್ಲ ಮತ್ತು ಯಾವುದೇ ದೇವಸ್ಥಾನಗಳು ಕಟ್ಟುತ್ತಾ ಇಲ್ಲ ಎಂಬ ಮಾತು ಕೇಳಿ ಬಂದಿದ್ದು, ತಕ್ಷಣವೇ ಅಲ್ಲಿನ ಗ್ರಾಮಸ್ಥರು ಈ ಹಣವಸೂಲಿ ಮಾಡುತ್ತಿದ್ದ ಆರು ಜನ ವಂಚಕರನ್ನು ದೇವಸ್ಥಾನದಲ್ಲಿಯೇ ಕಟ್ಟಿ ಹಾಕಿರುವ ಘಟನೆಯು ದಾವಣಗೆರೆಯಲ್ಲಿ ನಡೆದಿದೆ.
Collecting money from people on the pretext of building a temple: More than 25 lakhs collected – ತುಳು ಟೈಮ್ಸ್
ಇದನ್ನೂ ಓದಿ :ಪುತ್ತೂರು: 21 ಲಕ್ಷ ರೂ. ಮೌಲ್ಯದ ಕಾಫಿ ಬೀಜ ಕಳವು – ಐವರ ಬಂಧನ
======
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtube.com/shorts/e1543EY8Q90?si=LqsxVk1x8SkCerXJ











